2 ಲಕ್ಷ ಕಾರು ಮಾರಾಟವಾದ ಬೆನ್ನಲ್ಲೇ, ಮಹೀಂದ್ರಾ ಭರ್ಜರಿ ಅಪ್‌ಡೇಟ್: ಇನ್ನು ಈ ಕಾರನ್ನು ಹಿಡಿಯುವವರೇ ಇಲ್ಲ!
ಭಾರತೀಯ ಮಾರುಕಟ್ಟೆಯಲ್ಲಿನ ಜನಪ್ರಿಯ ಎಸ್‌ಯುವಿಗಳಲ್ಲಿ ಮಹೀಂದ್ರಾ XUV700 ಸಹ ಒಂದು. ಇದರ ಆಕರ್ಷಕ ಡಿಸೈನ್ ಮತ್ತು ಅತ್ಯುತ್ತಮ ಪರ್ಫಾಮೆನ್ಸ್ ಭಾರತೀಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು. ಬಿಡುಗಡೆಯಾಗಿ ಮೂರು ವರ್ಷಗಳಾಗುವಷ್ಟರಲ್ಲೇ ಈ ಕಾರು ಬರೋಬ್ಬರಿ ಎರಡು ಲಕ್ಷ ಭಾರತೀಯ ಕುಟುಂಬವನ್ನು ತಲುಪಿದೆ ಎಂದರೆ ನೀವು ನಂಬಲೇ ಬೇಕು. ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರು ಎರಡು ಲಕ್ಷ ಮಾರಾಟವಾದ ಹಿನ್ನಲೆಯಲ್ಲಿ ಮಹೀಂದ್ರಾ ಕಂಪನಿಯು ಈ ಕಾರಿಗೆ ಹೊಸ ಅಪ್‌ಡೇಟ್ ಅನ್ನು ನೀದ್ದು, ಇಂದಿನ ಲೇಖನದಲ್ಲಿ ನಾವು ಅದು ಏನು ಎಂದು ನೋಡೋಣ.
ಭಾರತದಲ್ಲಿ ಮಹೀಂದ್ರಾ XUV700 ಕಾರಿನ ಬೆಳವಣಿಗೆಯನ್ನು ನೋಡಿದರೆ ಆಶ್ಚರ್ಯದಿಂದ ನೀವು ಮೂಗಿನ ಮೇಲೆ ಬೆರಳಿಡುವುದಂತೂ ಖಂಡಿತ. ಹೌದು, ಮಾಹಿತಿಗಳ ಪ್ರಕಾರ ಈ XUV700 ಮೊದಲ ಒಂದು ಲಕ್ಷ ಮಾರಾಟವಾಗಲು ಸುಮಾರು 21 ತಿಂಗಳುಗಳನ್ನು ತೆಗೆದುಕೊಂಡಿತ್ತು. ಆದರೆ ಮುಂದಿನ ಒಂದು ಲಕ್ಷ ಯೂನಿಟ್ ಮಾರಾಟವಾಗಲು ಈ ಕಾರು ತೆಗೆದುಕೊಂಡಿದ್ದು ಕೇವಲ 12 ತಿಂಗಳು.

ಇನ್ನು ಭಾರತದಲ್ಲಿ ಮಹೀಂದ್ರಾ ಕಂಪನಿ XUV700 (Mahindra XUV700) ಕಾರು ಎರಡು ಲಕ್ಷ ಯೂನಿಟ್ ಮಾರಾಟವಾದ ಹಿನ್ನಲೆಯಲ್ಲಿ, ಈ ಮೈಲುಗಲ್ಲನ್ನು ಆಚರಿಸಲು ಈ ಕಾರಿಗೆ ಹೊಸ ಎರಡು ಬಣ್ಣಗಳನ್ನು ಪರಿಚಯಿಸಿದೆ. ಹೌದು ಇನ್ನು ಮುಂದೆ XUV700 ಕಾರಿಗೆ ಹೊಸ ಎರಡು ಬಣ್ಣಗಳ ಆಯ್ಕೆ ಲಭ್ಯವಾಗಲಿದೆ.
ಸದ್ಯಕ್ಕೆ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬ್ಲೂ, ಡ್ಯಾಜ್ಲಿಂಗ್ ಸಿಲ್ವರ್, ಮಿಡ್‌ನೈಟ್ ಬ್ಲ್ಯಾಕ್, ಎವರೆಸ್ಟ್ ವೈಟ್, ರೆಡ್ ರೇಜ್ ಮತ್ತು ನಾಪೋಲಿ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದ್ದು, ಡೀಪ್ ಫಾರೆಸ್ಟ್ ಮತ್ತು ಬರ್ನ್ಟ್ ಸಿಯೆನ್ನಾ ಎಂಬ ಹೊಸ ಎರಡು ಬಣ್ಣಗಳು ಸಹ ಹೊಸದಾಗಿ ಸೇರಿಕೊಂಡಿದೆ.

ನೂತನ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿ ರೂ.13.99 ಲಕ್ಷದಿಂದ ರೂ.26.99 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಎಂಎಕ್ಸ್, ಎಎಕ್ಸ್, ಎಎಕ್ಸ್3, ಎಎಕ್ಸ್5 ಸೇರಿದಂತೆ ಹಲವು ರೂಪಾಂತರಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. ಗ್ರಾಹಕರು ತಮಗೆ ಇಷ್ಟವಿರುವ ವೇರಿಯಂಟ್ ಮತ್ತು ಬಣ್ಣಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.
ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 200 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 380 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 2.2-ಲೀಟರ್ ಡೀಸೆಲ್ ಎಂಜಿನ್ 185 ಪಿಎಸ್ ಪವರ್ ಮತ್ತು 450 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಹೊಚ್ಚ ಹೊಸ ಎಕ್ಸ್‌ಯುವಿ700 ಎಸ್‍ಯುವಿ ರೂಪಾಂತರಗಳಿಗೆ ತಕ್ಕಂತೆ 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. AWD (ಆಲ್ ವೀಲ್ ಡ್ರೈವ್) ಹಾಗೂ FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದ್ದು, 17 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 5, 6 ಮತ್ತು 7 ಆಸನ ವ್ಯವಸ್ಥೆಯಲ್ಲಿಯೂ ದೊರೆಯುತ್ತದೆ.
ಈ ಕಾರು ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 12-ಸ್ಪೀಕರ್ ಆಡಿಯೊ ಸಿಸ್ಟಮ್, 6-ವೇ ಪವರ್ ಡ್ರೈವರ್ ಸೀಟ್, ಸನ್‌ರೂಫ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್ ಹಾಗೂ ಅಲೆಕ್ಸಾ ಕನೆಕ್ಟಿವಿಟಿಯನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications