ಇನ್ನು ಮುಂದೆ ಈ ಪ್ರಸಿದ್ಧ ಕಾರು ಪಡೆಯಲು ಒಂದೇ ತಿಂಗಳು ಸಾಕು: ರಾಶಿ ಫೀಚರ್‌ಗಳ ಪರ್ಫೆಕ್ಟ್‌‌ ಕಾರ್‌!

ಭಾರತದಲ್ಲಿ ಮಹೀಂದ್ರಾ ಕಂಪನಿ ಮಾರಾಟ ಮಾಡುತ್ತಿರುವ ಪ್ರಮುಖ ಕಾರುಗಳಲ್ಲಿ XUV700 ಕಾರು ಮಾದರಿಯ ಸ್ಥಾನ ಒಂದು ಹೆಜ್ಜೆ ಮುಂದೆ ಎನ್ನಬಹುದು. ಹಾಗಾಗಿ ಕಾರಿನ ಬೇಡಿಕೆಯೂ ಹೆಚ್ಚಾಗಿತ್ತು. ಬುಕ್‌ ಮಾಡಿದರೆ ಈ ಕಾರನ್ನು ಪಡೆದುಕೊಳ್ಳಲು ತಿಂಗಳುಗಳೇ ಕಾಯಬೇಕಿತ್ತು. ಆದರೆ ಇದೀಗ ಈ ಕಾರನ್ನು ಖರೀದಿಸಬೇಕು ಎನ್ನುವವರಿಗೆ ಸಿಹಿ ಸುದ್ದಿಯೊಂದು ಬಂದಿದೆ.

ಕಳೆದ ಕೆಲ ಸಮಯಗಳಿಂದ ಮಹೀಂದ್ರಾ ಕಂಪನಿ ಈ ಕಾರಿನ ಕುರಿತಾಗಿನ ಹಲವಾರು ಆರ್ಡರ್‌ಗಳನ್ನು ಬಾಕಿ ಉಳಿಸಿಕೊಂಡಿತ್ತು. ಹಾಗಾಗಿ ಸಹಜವಾಗಿಯೇ ಈ ಕಾರಿನ ಕಾಯುವಿಕೆಯ ಅವಧಿ ಹೆಚ್ಚಾಗಿತ್ತು. ಆದರೆ ಇದೀಗ ಬಂದ ಮಾಹಿತಿಗ ಪ್ರಕಾರ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ 700 ಕಾರಿನ ಬಾಕಿ ಇದ್ದ ಆರ್ಡರ್‌ಗಳನ್ನು ಗಣನೀಯ ಪ್ರಮಾಣದಲ್ಲಿ ಪೂರ್ಣ ಗೊಳಿಸಿದ್ದು, ಇನ್ನು ಮುಂದೆ ಈ ಕಾರು ಬುಕ್‌ ಮಾಡುವವರಿಗೆ ಕೊಂಚ ಬೇಗ ತಲುಪಲಿದೆ ಎಂದು ತಿಳಿದು ಬಂದಿದೆ.

Mahindra XUV700

ಪ್ರತೀ ತಿಂಗಳು ಮಹೀಂದ್ರಾ ಎಕ್ಸ್‌ಯುವಿ 700 ಕಾರಿಗೆ ಸುಮಾರು ಎಂಟು ಸಾವಿರ ಬುಕಿಂಗ್‌ ಆರ್ಡರ್‌ಗಳು ಬರುತ್ತಿದೆ. ಆದರೂ ಇದೀಗ ಮಹೀಂದ್ರಾ ಕಂಪನಿಯು ವೇಟಿಂಗ್‌ ಪಿರಿಯಡ್‌ ಅನ್ನು ಗಣನೀಯ ಮಟ್ಟದಲ್ಲಿ ಕಡಿಮೆ ಮಾಡಿದ್ದು, ಎಲ್ಲಾ ವೇರಿಯಂಟ್‌ಗಳು ಸುಮಾರು ಒಂದು ತಿಂಗಳಲ್ಲಿ ಮತ್ತು ಇದರ ಟಾಪ್‌ ವೇರಿಯಂಟ್‌ AX7 L ಅನ್ನು ಕೇವಲ ಒಂದೂವರೆ ತಿಂಗಳಲ್ಲಿ ಡೆಲಿವರಿ ಕೊಡಲು ಇದೀಗ ಸಾಧ್ಯ ಎಂದು ಹೇಳಲಾಗುತ್ತಿದೆ. ಈ ಹಿಂದೆ ಇದೇ ಕಾರಿನ ಕೆಲವೊಂದು ವೇರಿಯಂಟ್‌ ಅನ್ನು ಪಡೆಯಲು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಯಬೇಕಾಗಿತ್ತು.

ಮಹೀಂದ್ರಾ ಎಕ್ಸ್‌ಯುವಿ ೭೦೦ ಬಗ್ಗೆ ನೊಡುವುದಾದರೆ ಇತ್ತೀಚೆಗಷ್ಟೇ ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಬಹುಬೇಡಿಕೆಯ XUV700 ಎಸ್‍ಯುವಿಯ ಹೊಸ ಸ್ಪೆಷಲ್ ಬಿಡುಗಡೆ ಮಾಡಿತ್ತು. ಇದಕ್ಕೆ ಬ್ಲೇಜ್ ಎಡಿಷನ್ ಎಂಬ ಹೆಸರನ್ನು ನೀಡಿತ್ತು. ಈ ಹೊಸ ಮಹೀಂದ್ರಾ XUV700 ಬ್ಲೇಜ್ ಎಡಿಷನ್ (Mahindra XUV700 Blaze Edition) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.24.24 ಲಕ್ಷವಾಗಿದೆ.

Mahindra XUV700

2024ರ ಮಹೀಂದ್ರಾ XUV700 ಬ್ಲೇಜ್ ಎಡಿಷನ್ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಮಾತ್ರ ಬರುತ್ತದೆ ಮತ್ತು ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಿಲ್ಲ. ಹೊಸ ಮಹೀಂದ್ರಾ XUV700 ಬ್ಲೇಜ್ ಎಡಿಷನ್ ಮಾದರಿಯು ಫ್ರಂಟ್-ವೀಲ್ ಡ್ರೈವ್ ಪವರ್‌ಟ್ರೇನ್ ಮತ್ತು 7-ಸೀಟರ್ ಕಾನ್ಫಿಗರೇಶನ್‌ಗಳೊಂದಿಗೆ ಮಾತ್ರ ಲಭ್ಯವಿರುತ್ತದೆ. ಈ ಹೊಸ ಮಾದರಿಯು ಪೆಟ್ರೋಲ್ ಎಟಿ ಮತ್ತು ಡೀಸೆಲ್ ಎಟಿ ಮತ್ತು ಎಂಟಿ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ.

ಮಹೀಂದ್ರಾ XUV700 ಬ್ಲೇಜ್ ಎಡಿಷನ್ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಗ್ಯಾಸೋಲಿನ್ ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 200 bhp ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 184 bhp ಮತ್ತು 450 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Mahindra XUV700

ಈ ಎಂಜಿನ್ ಗಳು 6-ಸ್ಪೀಡ್ ಮ್ಯಾನುವಲ್ ಯುನಿಟ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ನೊಂದಿಗೆ ನೀಡುತ್ತದೆ. ಸ್ಟ್ಯಾಂಡರ್ಡ್ ಮಹೀಂದ್ರಾ XUV700 ಎಸ್‍ಯುವಿಯ ಬೆಲೆಯು ರೂ.13.99 ಲಕ್ಷದಿಂದ ರೂ.26.99 ಲಕ್ಷದವರೆಗೆ ಇದೆ. ಎರಡೂ ಬೆಲೆಗಳು ಎಕ್ಸ್ ಶೋರೂಂ ಆಗಿದೆ. ಸ್ಟ್ಯಾಂಡರ್ಡ್ ಮಾದರಿಯಲ್ಲಿ FWD (ಫ್ರಂಟ್ ವೀಲ್ ಡ್ರೈವ್) ಹಾಗೂ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, May 17, 2024, 15:34 [IST]
English summary
Mahindra xuv700 waiting period reduced significantly in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+