ಆಕ್ಟೀವಾ ಮಾರಿ ಎಂಜಿ ಕಾಮೆಟ್ ಖರೀದಿಸಿದ ಬುದ್ದಿವಂತ: ಈ ಕಾರಿದ್ರೆ ಸ್ಕೂಟರೇ ಬೇಡವಂತೆ!
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಳವಣಿಗೆ ಮತ್ತು ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ವೇಳೆಯಲ್ಲಿ ಹಲವರು ಎಲೆಕ್ಟ್ರಿಕ್ ವಾಹನದ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಸಣ್ಣ ಎಲೆಕ್ಟ್ರಿಕ್ ಕಾರುಗಳತ್ತ ಭಾರತೀಯ ಕಾರು ಪ್ರೀಯರು ಹೆಚ್ಚು ಮುಖ ಮಾಡುತ್ತಿದ್ದಾರೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.
ಇದೀಗ ಹೋಂಡಾ ಆಕ್ಟೀವಾ ಓಡಿಸುತ್ತಿದ್ದ ವ್ಯಕ್ತಿಯೊಬ್ಬ ಅದನ್ನು ಮಾರಿ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರನ್ನು ತೆಗೆದುಕೊಂಡು ತನ್ನ ಅನುಭವಗಳನ್ನು ಎಳೆ ಎಳೆಯಾಗಿ ಜನರ ಮುಂದೆ ಇಟ್ಟಿದ್ದು ಎಲ್ಲರ ಗಮನವನ್ನು ಸೆಳೆದಿದೆ. ತನಗೊಂದು ಎಲೆಕ್ಟ್ರಿಕ್ ಕಾರು ಬೇಕೆಂದು ತೀರ್ಮಾನ ಮಾಡಿದ ವ್ಯಕ್ತಿ ಮೊದಲಿಗೆ ಟಾಟಾ ಟಿಯಾಗೋ ಮತ್ತು ಎಂಜಿ ಕಾಮೆಟ್, ಇವರೆಡರಲ್ಲಿ ಯಾವುದಾದರೊಂದು ಕೊಳ್ಳಬೇಕು ಎಂದು ಮನಸು ಮಾಡಿದ್ದರು.

ಈಗಾಗಲೇ ಫೋಕ್ಸ್‌ವಾಗನ್ ಟೈಗುನ್ ಕಾರನ್ನು ಹೊಂದಿರುವ ಈ ವ್ಯಕ್ತಿ, ಹಳೆಯ ಆಕ್ಟೀವಾ ಬದಲಾಗಿ ದಿನನಿತ್ಯದ ಬಳಕೆಗೆ ಒಂದು ಎಲೆಕ್ಟ್ರಿಕ್ ಕಾರು ಬೇಕೆಂದು ಯೋಜನೆ ಹಾಕಿ ಈ ಎರಡರಲ್ಲಿ ಒಂದು ಕಾರನ್ನು ಕೊಳ್ಳುವ ಯೋಜನೆಯನ್ನು ರೂಪಿಸಿದರು ಎಂದು ತಿಳಿದು ಬಂದಿದೆ. ತಮ್ಮ ಮನೆಯಲ್ಲಿ ಎರಡು ಕಾರನ್ನು ಪಾರ್ಕ್ ಮಾಡುವ ಸ್ಥಳಾವಕಾಶವೂ ಇರಲಿಲ್ಲ.
ಇದರಿಂದ ಒಂದು ಸಣ್ಣ ಎಲೆಕ್ಟ್ರಿಕ್ ಕಾರನ್ನು ಕೊಳ್ಳಬೇಕು ಎಂದು ಪ್ಲಾನ್ ಮಾಡಿದ್ದರು ಎಂದು ತಿಳಿದು ಬಂದಿದೆ. ಕೊನೆಗೆ ವ್ಯಕ್ತಿ ಎಂಜಿ ಕಾಮೆಟ್ ಕಡೆ ಮುಖಮಾಡಿದ್ದು, ತುಂಬಾ ಸ್ಟೈಲಿಶ್ ಆಗಿರುವ ಮತ್ತು ಇದರ ಸಣ್ಣ ಗಾತ್ರದ ಕಾರಣವಾಗಿ ಈ ಕಾರನ್ನು ಆಯ್ಕೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಸುಮಾರು ೮ ಲಕ್ಷ ರುಗಳ ಬಜೆಟ್‌ನಲ್ಲಿ ಒಂದೊಳ್ಳೆ ಕಾರು ದೊರಕಿರುವುದಾಗಿಯೂ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಇನ್ನು ಈ ಕಾರ್‌ನಿಂದ ಟ್ರಾಫಿಕ್‌ನಲ್ಲಿಯೂ ಅಂತಹ ದೊಡ್ಡ ಸಮಸ್ಯೆ ಎನೂ ಆಗಿಲ್ಲ. ಆಕ್ಟೀವಾದ ರೀತಿಯಲ್ಲೆ ಸಣ್ಣ ಸಣ್ಣ ಪ್ರದೇಶದಲ್ಲಿ ಚಲಿಸಬಲ್ಲದು. ಈಸಿ ಹ್ಯಾಂಡಲಿಂಗ್ ಈ ಕಾರಿನ ದೊಡ್ಡ ಹೈಲೈಟ್ ಎಂದಿದ್ದಾರೆ. ಈತನ ತಾಯಿ ಈ ಕಾರನ್ನು ಬಹಳಷ್ಟು ಇಷ್ಟ ಪಟ್ಟಿದ್ದು, ಹಲು ವರ್ಷಗಳ ಕಾಲ ಈ ಕಾರನ್ನು ಬಳಸುವ ಇರಾದೆಯಿದೆ ಎಂದು ಹೇಳಿದ್ದಾರೆ.
ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಒಳಭಾಗದಲ್ಲಿ, ಎರಡು 10.25-ಇಂಚಿನ ಸ್ಕ್ರೀನ್‌ಗಳಿಂದ ಹೈಲೈಟ್ ಮಾಡಲಾದ ಬಿಳಿ ಮತ್ತು ಬೂದು ಬಣ್ಣದ ಒಳಾಂಗಣವನ್ನು ಹೊಂದಿದೆ.ಇನ್ನು ಒಂದು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಮತ್ತು ಇನ್ನೊಂದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ. ಮುಂಭಾಗದ ಪ್ರಯಾಣಿಕರ ಸೀಟ್ ಒನ್-ಟಚ್ ಟಂಬಲ್ ಮತ್ತು ಫೋಲ್ಡ್ ಫೀಚರ್ಸ್ ಅನ್ನು ಹೊಂದಿದೆ.

ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 17.3kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ, ಇದು ARAI- ಸ್ಟ್ಯಾಂಡರ್ಡ್ ಆಗಿ 230 ಕಿ.ಮೀ ರೇಂಜ್ ಅನ್ನು ನೀಡುತ್ತದೆ, ಕಾಮೆಟ್ ಇವಿ ಕೇವಲ AC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು 3.3kW ಚಾರ್ಜಿಂಗ್ ಕೇಬಲ್‌ನೊಂದಿಗೆ ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಲು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಎಂಜಿ ಎಲೆಕ್ಟ್ರಿಕ್ ಮೈಕ್ರೋಕಾರ್ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದ್ದು, ಇದು ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಆಗಿದೆ, ಸ್ಪೋರ್ಟ್ ಮೋಡ್ ಒಂದು ನಿರ್ದಿಷ್ಟವಾದ ಹೆಚ್ಚುವರಿ ಶಾರ್ಪ್‌ನೆಸ್ ಅನ್ನು ನೀಡುತ್ತದೆ ಆದರೆ ಇಕೋ ಮತ್ತು ನಾರ್ಮಲ್ ಮೊಡ್ ಗಳು ಸಾಮಾನ್ಯವಾಗಿ ಒಂದೇ ರೀತಿಯಾಗಿದೆ. ಈ ಕಾರಿನ ಸ್ಟೀಯರಿಂಗ್ ವ್ಹೀಲ್ ಟಿಲ್ಟ್ ಹೊಂದಾಣಿಕೆಯನ್ನು ಮಾತ್ರ ನೀಡುತ್ತದೆ. ಈ ಕಾಮೆಟ್ ಎಲೆಕ್ಟ್ರಿಕ್ ಕಾರು ಸಿಟಿಗಳಿಗೆ ಪರಿಪೂರ್ಣವಾದ ಕಾರ್ ಆಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: Team BHP


Click it and Unblock the Notifications








