Maruti Suzuki Jimny: 11,000 ಕಿಮೀ ನಂತರ ಜಿಮ್ನಿ ಮಾಲೀಕನ ಪಾಡು ನೋಡಿ: ಖರೀದಿಸುವರು ಇತ್ತ ಗಮನಿಸಿ!

ಮಾರುತಿ ಸುಜುಕಿಯ ಜಿಮ್ನಿ ಎಂಬ ಕಾರು ವಾಹನ ಕ್ಷೇತ್ರದಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಅದಕ್ಕೆ ಪ್ರಮುಖ ಕಾರಣ ಈ ಕಾರು ತೋರುತ್ತಿರುವ ಪರ್ಫಾಮೆನ್ಸ್‌. ಸದ್ಯಕ್ಕೆ ಭಾರತದಲ್ಲಿ ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ಎಸ್‌ಯುವಿಗಳಲ್ಲಿ ಹೆಚ್ಚು ಹೆಸರು ಮಾಡಿರುವ ಎಸ್‌ಯುವಿ ಎಂದೇ ಹೇಳಬಹುದು.

ಸದ್ಯದ ಮಟ್ಟಿಗೆ ಇದು ಭಾರತದಲ್ಲಿ ಪ್ರಾಕ್ಟಿಕಲ್‌ ಎಸ್‌ಯುವಿ ಎಂದೇ ಹೆಸರು ಮಾಡಿದೆ. ಆಟೋ ಎಕ್ಸ್‌ಪೋ 2023 ದಲ್ಲಿ ಅನಾವರಣಗೊಳಿಸಿದಾಗ ಮುಂದಿನ ಹಲವು ವರ್ಷಗಳ ವರೆಗೆ ಈ ಎಸ್‌ಯುವಿ ಭಾರತದ ಮಾರುಕಟ್ಟೆಯನ್ನು ಆಳಲಿದೆ ಎಂದು ಕಾರು ಪಂಡಿತರು ಭವಿಷ್ಯ ನುಡಿದಿದ್ದರು. ಇದೀಗ ಇಂದಿನ ಲೇಖನದಲ್ಲಿ ಈ ಕಾರಿನ ಬಗ್ಗೆ ಮಾಲೀಕನೊಬ್ಬ ತಾನು ಹಂಚಿಕೊಂಡಿರುವ ಅನುಭವದ ಕುರಿತಾಗಿ ನೋಡಲಿದ್ದು ಮಾಹಿತಿಗಾಗಿ ಸಂಪೂರ್ಣವಾಗಿ ಓದಿ.

Man Shares His Experience On Maruti Suzuki Jimny After 11 Thousand Kilo Meters

ಈ ಲೇಖನದಲ್ಲಿರುವ ವಿಡಿಯೋದಲ್ಲಿ ಮಾಲೀಕ ಈ ಹೊಸ ಜಿಮ್ನಿಯನ್ನು ಸುಮಾರು ಹನ್ನೊಂದು ಸಾವಿರ ಕಿಲೋಮೀಟರ್‌ನಷ್ಟು ಓಡಿಸಿದ್ದು, ಈ ಕುರಿತಾಗಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ತನ್ನ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಕಾರಿನಲ್ಲಿ ತಾನು ಮಾಡಿರುವ ಮಾಡಿಫಿಕೇಷನ್‌ಗಳನ್ನು ವಿವರಿಸುವ ಮೂಲಕ ವಿಡಿಯೋವನ್ನು ಆರಂಭಿಸಿದ್ದಾರೆ. ಮುಖ್ಯವಾಗಿ ಈ ಕಾರಿನ ಸ್ಟಾಕ್‌ ಟೈರ್‌ ಬದಲಾಯಿಸಿ ಆಲ್‌ ಟೆರೇನ್‌ ಟೈರ್‌ ಜೋಡಿಸಿದ್ದಾರೆ. ಇದರಿಂದ ಜಿಮ್ನಿಯ ಲುಕ್‌ ಜೊತೆಗೆ ಅದರ ಪರ್ಫಾಮೆನ್ಸ್‌ ಸಹ ಬದಲಾಗಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಈತ ಸುಮಾರು ಹನ್ನೆರಡರಿಂದ ಹದಿಮೂರು ಲಕ್ಷ ರೂಗಳ ಬಜೆಟ್‌ನಲ್ಲಿ ಒಂದು ಆಫ್‌ರೋಡ್‌ ಫೋರ್‌ ವ್ಹೀಲರ್‌ ಕಾರನ್ನು ಖರೀದಿ ಮಾಡುವ ಯೋಜನೆಯಲ್ಲಿದ್ದ ಎಂದು ತಿಳಿದು ಬಂದಿದೆ. ಆದುದರಿಂದ ಆ ಬಜೆಟ್‌ನಲ್ಲಿ ಈತನ ಆಯ್ಕೆಗಳು ಸಹ ಕಮ್ಮಿಯಿತ್ತು. ಇದಕ್ಕೆ ಸ್ವಲ್ಪ ಹಣ ಸೇರಿಸಿ ಜಿಮ್ನಿಯನ್ನು ಖರೀದಿಸಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಭಾರತೀಯ ರಸ್ತೆಗಳು ಮತ್ತು ಆತನ ಬಳಿಯಿದ್ದ ಬಜೆಟ್‌ ಎಲ್ಲವನ್ನೂ ನೋಡಿಕೊಂಡಾಗ ಜಿಮ್ನಿ ಕೊಂಚ ಹೆಚ್ಚು ಪ್ರಾಕ್ಟಿಕಲ್‌ ಅನಿಸಿದಾಗಿ ಹೇಳಿಕೊಂಡಿದ್ದಾರೆ.

Man Shares His Experience On Maruti Suzuki Jimny After 11 Thousand Kilo Meters

ಒಬ್ಬ ಮಿಡಲ್‌ಕ್ಲಾಸ್‌ ಫ್ಯಾಮಿಲಿ ಹಿನ್ನಲೆಯಿಂದ ಬಂದಿರುವ ಈ ವ್ಯಕ್ತಿ, ಥಾರ್‌ ಬದಲಾಗಿ ಈ ಜಿಮ್ನಿಯನ್ನು ಕೊಳ್ಳಲಷ್ಟೇ ಶಕ್ತನಾಗಿದ್ದಾನೆ ಎಂದಿದ್ದಾನೆ. ಥಾರ್‌ಗೆ ಈ ಜಿಮ್ನಿಯನ್ನು ಕಂಪೇರ್ ಮಾಡಿ ನೋಡಿದರೆ ಬೆಲೆ ಮತ್ತು ಕಂಫರ್ಟ್‌, ಈ ಎರಡೂ ವಿಷಯದಲ್ಲಿಯೂ ಜಿಮ್ನಿಯೇ ಬೆಸ್ಟ್‌ ಅಂತಿದ್ದಾರೆ ಈ ಮಾಲೀಕ. ಇದಕ್ಕೆ ಕಾರಣವೇನೆಂದು ಕೇಳಿದರೆ ಅದಕ್ಕೆ ತಮ್ಮದೇ ಆದ ಕಾರಣಗಳನ್ನೂ ಸಹ ವಿಡಿಯೋದಲ್ಲಿ ನೀಡಿದ್ದಾರೆ.

ಜಿಮ್ನಿ 5 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpmನಲ್ಲಿ 104.8 Ps ಗರಿಷ್ಠ ಪವರ್ ಹಾಗೂ 4000 rpmನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದ್ದರೂ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರ 5-ಸ್ವೀಡ್ MT ರೂಪಾಂತರ, 16.94 km/l ಹಾಗೂ 4-ಸ್ವೀಡ್ AT ರೂಪಾಂತರ 16.39 km/l ಮೈಲೇಜ್ ನೀಡುತ್ತದೆ. ಈ ಜಿಮ್ನಿ 5 ಡೋರ್ ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 3985 ಎಂಎಂ ಉದ್ದ, 1645 ಎಂಎಂ ಅಗಲ, 1720 ಎತ್ತರವಿದ್ದು, 2590 ಎಂಎಂ ಅಳತೆಯ ವೀಲ್ಸ್ ಬೇಸ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 17, 2024, 17:33 [IST]
English summary
Man shares his experience on maruti suzuki jimny after 11 thousand kilometers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+