ಮಾರುತಿ ಕಾರು ಕೊಳ್ಳುವವರಿಗೆ ಭರ್ಜರಿ ಆಫರ್: ಇಷ್ಟು ದೊಡ್ಡ ಡಿಸ್ಕೌಂಟ್‌ಗಳು ಕನಸಲ್ಲಿ ಮಾತ್ರ ಸಾಧ್ಯ!
ಮಾರುತಿ ಸುಜುಕಿ ಈ ತಿಂಗಳಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಬಹುತೇಕ ಎಲ್ಲಾ ನೆಕ್ಸಾ ಲೈನ್‌ಅಪ್‌ಗಳಿಗೂ ಎಪ್ರಿಲ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಸಿಗಲಿದ್ದು ಇದರಲ್ಲಿ ಪ್ರಮುಖವಾದುದು ಗ್ರಾಂಡ್ ವಿಟಾರಾ, ಬಲೆನೋ, ಜಿಮ್ನಿ, ಸಿಯಾಝ್ ಹೀಗೆ ಹಲವಾರು ಕಾರು ಮಾದರಿಗಳಿಗೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ.
ನಿಮಗೆಲ್ಲಾ ತಿಳಿದಿರುವಂತೆ ಮಾರುತಿ ಕಾರುಗಳ ಲೈನ್‌ಅಪ್‌ನಲ್ಲೇ (Martui Suzuki Nexa) ಅತ್ಯಂತ ಬಲಿಷ್ಟವಾದ ಕಾರು ಮಾರುತಿ ಸುಜುಕಿ ಫ್ರಾಂಕ್ಸ್. ತನ್ನದೇ ಆದ ವಿಶಿಷ್ಟ ಕ್ರಾಸ್ ಓವರ್ ಎಸ್‌ಯುವಿ ಡಿಸೈನ್‌ನಲ್ಲಿ ಕಂಗೊಳಿಸುವ ಮಾರುತಿ ಸುಜುಕಿ ಫ್ರಾಂಕ್ಸ್ ನ ಟರ್ಬೋ ಪೆಟ್ರೋಲ್ ವೇರಿಯಂಟ್‌ಗೆ 68,000 ರೂಗಳ ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಇದು ಈ ಕಾರನ್ನು ಕೊಳ್ಳಬೇಕು ಎಂದುಕೊಂಡಿರುವವರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಮಾರುತಿಯು ಮತ್ತೊಂದು ಪ್ರಮುಖ ಕಾರಾದ ಗ್ರಾಂಡ್ ವಿಟಾರಾ ಕಾರಿಗೆ ಸುಮಾರು 79,000 ರೂಗಳ ಡಿಸ್ಕೌಂಟ್ ಅನ್ನು ಕಂಪನಿ ನೀಡುತ್ತಿದೆ. ಇದರಲ್ಲಿ 25,000 ಕ್ಯಾಶ್, 50,000 ರೂ. ಎಕ್ಸ್‌ಚೇಂಜ್ ಬೋನಸ್ ಸೇರಿದೆ. ರೂ.10.70 ಲಕ್ಷದಿಂದ ರೂ.19.95 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.
ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಸಹಭಾಗಿತ್ವ ಹೊಂದಿರುವುದರಿಂದ ಹೈರ್ಡರ್ ರೀತಿಯಲ್ಲಿಯೇ ಗ್ರ್ಯಾಂಡ್ ವಿಟಾರಾ ಸಹ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಅವುಗಳೆಂದರೆ, 1.5 - ಲೀಟರ್ ಪೆಟ್ರೋಲ್ ಮೈಲ್ಡ್ ಹೈಬ್ರಿಡ್, 1.5 - ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್. ಕ್ರಮವಾಗಿ 103 PS & 116 PS ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.

ಮಾರುತಿ ಸುಜುಕಿ ಜಿಮ್ನಿ ಇತ್ತೀಚೆಗೆ ಆಫ್‌ರೋಡ್ ಪ್ರೀಯರ ನೆಚ್ಚಿನ ಕಾರಾಗಿದ್ದು, ಈ ಕಾರಿಗೂ ಮಾರುತಿ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಜಿಮ್ನಿಯ ಫುಲ್ ಆಪ್ಷನ್ ಮಾಡೆಲ್ ಆಗಿರುವ ಆಲ್ಫಾ ವೇರಿಯಂಟ್‌ನಲ್ಲಿ 2023ರ ಮಾಡೆಲ್‌ಗಳಿಗೆ ಸುಮಾರು 1.5 ಲಕ್ಷ ರೂಗಳ ಡಿಸ್ಕೌಂಟ್ ಮತ್ತು 2024 ರ ಮಾದರಿಗಳಿಗೆ 50 ಸಾವಿರ ರೂಗಳ ಕ್ಯಾಶ್ ಡಿಸ್ಕೌಂಟ್ ಅನ್ನು ನೀಡುತ್ತಿದೆ.
ಜಿಮ್ನಿ 5 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpmನಲ್ಲಿ 104.8 Ps ಗರಿಷ್ಠ ಪವರ್ ಹಾಗೂ 4000 rpmನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿ ಸುಜುಕಿ ಬಲೇನೋ ಕಾರಿಗೆ ಕಂಪನಿ ಸುಮಾರು 53 ಸಾವಿರ ರೂಗಳ ವರೆಗೆ ಡಿಸ್ಕೌಂಟ್ ನೀಡುತ್ತಿದ್ದು, ಇದರಲ್ಲಿ 35 ಸಾವಿರ ರೂಗಳ ಕ್ಯಾಶ್ ಡಿಸ್ಕೌಂಟ್ ಸಹ ಇರಲಿದೆ. 1.2 ಲೀಟರ್ ಎಂಜಿನ್ ಹೊಂದಿರುವ ಈ ಕಾರು ಸುಮಾರು ಪೆಟ್ರೋಲ್ ಎಂಜಿನ್ ನಲ್ಲಿ 90 ಪಿಎಸ್ ಮತ್ತು ಸಿಎನ್‌ಜಿ ಮಾದರಿಯಲ್ಲಿ 78 ಬಿಹೆಚ್‌ಪಿ ಪವರನ್ನು ಉತ್ಪಾದಿಸುತ್ತದೆ.
ಇದೇ ರೀತಿ ಮಾರುತಿಯು ಸಿಯಾಜ್ ಮತ್ತು XL6 ಕಾರುಗಳಿಗೆ ತಲಾ 53,000, 20,000 ರೂಗಳ ಡಿಸ್ಕೌಂಟ್ ಅನ್ನು ಕಂಪನಿ ನೀಡುತ್ತಿದೆ. ನಮ್ಮ ಪ್ರಕಾರ ಮಾರುತಿ ಸುಜುಕಿಯ ಕಾರುಗಳನ್ನು ಕೊಳ್ಳಬೇಕು ಎಂದುಕೊಂಡಿರುವವರಿಗೆ ಈ ಆಫರ್‌ಗಳನ್ನು ಸದುಪಯೋಗಪಡಿಸಿ ಕೊಳ್ಳಲು ಇದು ಸರಿಯಾದ ಸಮಯ ಎನ್ನಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications