ಮಾರುಕಟ್ಟೆ ಶೇಕ್: 550 ಕಿ.ಮೀ ಚಲಿಸುವ ಹೊಸ ಟೊಯೊಟಾ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜು!

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಭಾರತದಲ್ಲಿ ಬಹುಕಾತರದಿಂದ ಕಾಯುವ ಎಲೆಕ್ಟ್ರಿಕ್ ಕಾರು ಯಾವುದು ಎಂದು ಕೇಳಿದರೆ ಅದಕ್ಕೆ ಉತ್ತರ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರಿಗಾಗಿ ಆಗಿದೆ. ಮಾರುತಿ ಸುಜುಕಿ ಕಂಪನಿಯು eVX ಎಲೆಕ್ಟ್ರಿಕ್ ಕಾರನ್ನು ಕಾನ್ಸೆಪ್ಟ್ ಮಾದರಿಯಾಗಿ ವಿವಿಧ ಮೋಟಾರು ಶೋಗಳಲ್ಲಿ ಪ್ರದರ್ಶಿಸಲಾಗಿದೆ. ಈ ಮಾರುತಿ eVX ಎಲೆಕ್ಟ್ರಿಕ್ ಕಾರನ್ನು ಆಕರ್ಷಕ ವಿನ್ಯಾಸ ಮತ್ತು ಪ್ರೀಮಿಯಂ ಒಳಾಂಗಣದೊಂದಿಗೆ ಬರಲಿದೆ. ಈ ಎಲೆಕ್ಟ್ರಿಕ್ ಕಾರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಪಾನ್ ಮೊಬಿಲಿಟಿ ಶೋನಲ್ಲಿ ಅನಾವರಣಗೊಳಿಸಲಾಯಿತು.

ಮಾರುತಿ eVX ಎಲೆಕ್ಟ್ರಿಕ್ ಕಾರು 2025ರ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಈ ಮಾರುತಿ ಎಲೆಕ್ಟ್ರಿಕ್ ಕಾರನ್ನು ಗುಜರಾತ್‌ನಲ್ಲಿರುವ ಸುಜುಕಿ ಸ್ಥಾವರದಲ್ಲಿ ತಯಾರಿಸಲಾಗುತ್ತದೆ. ಈ ಮಾರುತಿ ಎಲೆಕ್ಟ್ರಿಕ್ ಕಾರಿನ ಆಧಾರದ ಮೇಲೆ ಟೊಯೊಟಾ (Toyota) ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ. ಸುಜುಕಿ ಅಭಿವೃದ್ಧಿಪಡಿಸಿದ ಬ್ಯಾಟರಿ ಇವಿಗಳ ಪೂರೈಕೆಯಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಎರಡು ಬ್ರ್ಯಾಂಡ್‌ಗಳು ನಿರ್ಧರಿಸಿವೆ.

Toyota EV

ಎರಡು ಕಂಪನಿಗಳು ಈಗಾಗಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈಬ್ರಿಡ್ ಹೈಬ್ರಿಡ್ ವಾಹನಗಳಲ್ಲಿ ಸಹಯೋಗ ಹೊಂದಿವೆ. ಈ ಕಾರುಗಳನ್ನು ಪರಸ್ಪರ ರೀಬ್ಯಾಡ್ಜ್ ಮಾಡುವ ಪರಿಪಾಠ ಯಶಸ್ವಿಯಾಗಿರುವುದರಿಂದ ಸುಜುಕಿ ಇದನ್ನು ಇವಿಗಳಿಗೂ ವಿಸ್ತರಿಸುತ್ತಿದೆ. ಮಾರುತಿ ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಆಧಾರಿತ ಟೊಯೊಟಾ ಮಾದರಿಯ ಉತ್ಪಾದನಾ ಟೈಮ್‌ಲೈನ್ ಅನ್ನು ಬಹಿರಂಗಪಡಿಸಲಾಗಿದೆ.

ಮಾರುತಿ ಇವಿಎಕ್ಸ್ ಆಧಾರಿತ ಟೊಯೊಟಾ ಮಿಡ್ ಸೈಜ್ ಎಲೆಕ್ಟ್ರಿಕ್ ಎಸ್‌ಯುವಿ ಮುಂದಿನ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮಾರುಕಟ್ಟೆಗೆ ಬರಲಿದೆ. ಟೊಯೊಟಾ ಆವೃತ್ತಿಯು ಮಾರುತಿ ಮಾದರಿಯಿಂದ ಪ್ರತ್ಯೇಕಿಸಲು ಸಣ್ಣ ಬದಲಾವಣೆಗಳನ್ನು ಹೊಂದಿರುತ್ತದೆ. ಈ ಕಾರಿನ ಗಮನಾರ್ಹ ಬಾಹ್ಯ ಮುಖ್ಯಾಂಶಗಳು ಎಲ್‌ಇಡಿ ಲೈಟಿಂಗ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಸಿ-ಪಿಲ್ಲರ್‌ಗಳಲ್ಲಿ ಹಿಂಭಾಗದ ಡೋರ್ ಹ್ಯಾಂಡಲ್ ಅನ್ನು ಹೊಂದಿದೆ.

Toyota EV

ಇದರೊಂದಿಗೆ ಮುಂಭಾಗದ ಎಡ ಫೆಂಡರ್‌ನಲ್ಲಿ ಚಾರ್ಜಿಂಗ್ ಪೋರ್ಟ್, ದೊಡ್ಡ ಅಲಾಯ್ ವ್ಹೀಲ್ ಗಳು (18-ಇಂಚು), ಕನೆಕ್ಟಿವಿಟಿ ಟೈಲ್ ಲೈಟ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ರೂಫ್ ಸ್ಪಾಯ್ಲರ್ ಅನ್ನು ಹೊಂದಿದೆ. ಇನ್ನು ಒಳಭಾಗದಲ್ಲಿ ದೊಡ್ಡ ಫ್ರೀ-ಸ್ಟ್ಯಾಂಡಿಂಗ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಫ್ಲೋಟಿಂಗ್ ಸೆಂಟರ್ ಕನ್ಸೋಲ್, ಸ್ಪೋರ್ಟಿ ಸೀಟ್‌ಗಳು, ಆಟೋ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಸನ್‌ರೂಫ್, ರಿಯರ್ ಎಸಿ ವೆಂಟ್‌ಗಳು ಮತ್ತು ಹೆಚ್ಚಿನದನ್ನು ನಿರೀಕ್ಷಿಸಬಹುದು.

ಈ ಎಲೆಕ್ಟ್ರಿಕ್ ಕಾರು ಮುಂಭಾಗದ ವ್ಹೀಲ್ ಗಳಿಗೆ ಪವರ್ ನೀಡುವ ಸಿಂಗಲ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗುತ್ತದೆ. ಈ ಮಾರುತಿ ಇವಿಎಕ್ಸ್ ಎಲೆಕ್ಟ್ರಿಕ್ ಕಾರಿನಲ್ಲಿ 60 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಸಂಪೂರ್ಣ ಚಾರ್ಜ್‌ನಲ್ಲಿ 550 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇನ್ನು ಈ ಎಲೆಕ್ಟ್ರಿಕ್ ಕಾರು 4WD ಸಿಸ್ಟಂ ನೊಂದಿಗೆ ಬರುತ್ತದೆ.

Toyota EV

ಇನ್ನು ಮೊದಲ ಇವಿ ಬಿಡುಗಡೆಗೆ ಮುಂಚಿತವಾಗಿ, ಮಾರುತಿ ಸುಜುಕಿ ವ್ಯಾಪಕವಾದ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಸಹ ಸಿದ್ಧಪಡಿಸುತ್ತಿದೆ. ಮಾರುತಿ ದೇಶಾದ್ಯಂತ 25,000 ಚಾರ್ಜಿಂಗ್ ಟಚ್ ಪಾಯಿಂಟ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. 2300 ನಗರಗಳಲ್ಲಿ 5100 ಸರ್ವಿಸ್ ಸೆಂಟರ್ ಗಳಲ್ಲದೆ, ಚಾರ್ಜರ್‌ಗಳನ್ನು ಅಳವಡಿಸಲು ತೈಲ ಕಂಪನಿಗಳೊಂದಿಗೆ ಮಾತುಕತೆ ನಡೆಯುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 30, 2024, 16:43 [IST]
English summary
Maruti evx based toyota ev launch details revealed
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+