ಭಾರತದಲ್ಲಿ ಈ ಸಣ್ಣ ಕಾರಿನ ದಾಖಲೆ ಮುರಿಯಲು BMW, ಬೆಂಝ್‌ಗೂ ಸಾಧ್ಯವಿಲ್ಲ!
ಭಾರತವು ಆಟೋ ಉದ್ಯಮದಲ್ಲಿ ಬಹುದೊಡ್ಡ ಮಾರುಕಟ್ಟೆಯಾಗಿ ಬೆಳೆದು ನಿಂತಿದೆ. ಐಷಾರಾಮಿ ಬ್ರಾಂಡ್‌ಗಳು ಇಲ್ಲಿ ಉತ್ತಮ ಲಾಭ ಕಾಣುತ್ತಿವೆ. ಬಿಎಂಡಬ್ಲ್ಯು, ಬೆಂಝ್, ಆಡಿಯಂತಹ ಕಂಪನಿಗಳು ಭಾರತೀಯ ಗ್ರಾಹಕರಿಗಾಗಿ ಅಂತರಾಷ್ಟ್ರೀಯ ಮಾಡೆಲ್‌ಗಳನ್ನು ಇಲ್ಲಿ ಬಿಡುಗಡೆ ಮಾಡುತ್ತಿವೆ. ಆದ್ರೆ ಇಂತಹ ಎಷ್ಟೇ ಬ್ರಾಂಡ್‌ಗಳು ಬಂದರೂ ಈ ಕಾರಿನ ದಾಖಲೆ ಮುರಿಯಲು ಸಾಧ್ಯವೇ ಇಲ್ಲ.
ಅಂದಹಾಗೆ ನೀವು ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಬಗ್ಗೆ ಚರ್ಚಿಸಿದರೆ, ಮೊದಲು ನಮ್ಮ ನಿಮ್ಮಲ್ಲರಿಗೆ ನೆನಪಾಗುವಂತಹ ಕಾರುಗಳೆಂದರೆ ಮಾರುತಿ ಸುಜುಕಿ ಸ್ವಿಫ್ಟ್, ಹ್ಯುಂಡೈ ಕ್ರೆಟಾ, ಮಹೀಂದ್ರಾ ಸ್ಕಾರ್ಪಿಯೋ, ಮಾರುತಿ ಸುಜುಕಿ ವ್ಯಾಗನ್ಆರ್, ಹ್ಯುಂಡೈ ಐ 10, ಅಥವಾ ಟೊಯೊಟಾ ಇನ್ನೋವಾ ಹೀಗೆ ಹಲವು ಉದಾಹರಣೆಗಳನ್ನು ಕೊಡುತ್ತೇವೆ. ಆದರೆ, ಯಾರುಗೂ ತಿಳಿಯಿದ ಕಾರೊಂದು ನಮ್ಮ ನಿಮ್ಮೆಲ್ಲರ ಊಹೆಗೂ ನಿಲುಕದ ಮಾರಾಟ ಅಂಕಿಅಂಶಗಳನ್ನು ಹೊಂದಿದೆ. ನಾವು ಮಾರುತಿ ಸುಜುಕಿ 800 ಬಗ್ಗೆ ಮಾತನಾಡುತ್ತಿಲ್ಲ, ಇದು ನಿಸ್ಸಂಶಯವಾಗಿ ಪ್ರಸಿದ್ಧ ಕಾರು. ಅದೇ ಮಾರುತಿ ಸುಜುಕಿ ಆಲ್ಟೋ ಎಂದರೆ ನೀವು ನಂಬಲೇಬೇಕು.

ಮಾರುತಿ ಸುಜುಕಿ ಆಲ್ಟೋ, 5 ಮಿಲಿಯನ್ ಯುನಿಟ್‌ಗಳ (50 ಲಕ್ಷ ಕಾರುಗಳ) ಮಾರಾಟದ ಮೈಲಿಗಲ್ಲನ್ನು ದಾಟಿದ ಭಾರತದ ಏಕೈಕ ಕಾರು ಎಂದು ನಿಮಗೆ ತಿಳಿದಿದೆಯೇ? 2000 ರಲ್ಲಿ ಬಿಡುಗಡೆಯಾದ ಜನಪ್ರಿಯ ಹ್ಯಾಚ್ ಬ್ಯಾಕ್ ಇಲ್ಲಿಯವರೆಗೆ ಸುಮಾರು 5.06 ಮಿಲಿಯನ್ ಯುನಿಟ್‌ಗಳ ಮಾರಾಟವನ್ನು ಕಂಡಿದೆ.
ಹೌದು ಈ ಸಣ್ಣ ಕಾರನ್ನು ನಾವು ಸಣ್ಣದಾಗಿ ನೋಡುತ್ತೇವೆ. ಆದ್ರೆ ಭಾರತದಲ್ಲಿ ಬಡ ಕುಟುಂಬಗಳಿಂದ ಹಿಡಿದು ಮಧ್ಯಮ ವರ್ಗದವರೆಗೆ ಕೈಗೆಟುಕುವ ದರದಲ್ಲಿ ಸಿಗುವುದರಿಂದ ಹೆಚ್ಚಾಗಿ ಮಾರುತಿ ಆಲ್ಟೋ ಮಾರಾಟವಾಗುತ್ತದೆ. ಯಾವ ಮಟ್ಟಿಗೆ ಅಂದ್ರೆ ಇದು ಎಂದಿಗೂ ಮುರಿಯಲಾಗದ ದಾಖಲೆಯನ್ನು ನಿರ್ಮಿಸಿ ತನ್ನ ಹತ್ತಿರಕ್ಕೂ ಯಾವುದೇ ಬ್ರಾಂಡ್ ನಿಲ್ಲದಂತೆ ನಂ.1 ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಎರಡನೇ ಅತಿ ಹೆಚ್ಚು ಮಾರಾಟವಾದ ಕಾರಾಗಿ ಹ್ಯುಂಡೈ ಐ 10 ಇದೆಯಾದರೂ, 50 ಲಕ್ಷ ಕಾರುಗಳ ಮಾರಾಟದೊಂದಿಗೆ ಮುಂದಿರುವ ಆಲ್ಟೋಗೆ ಹೋಲಿಸಿದರೆ, 3.3 ಮಿಲಿಯನ್ ಯುನಿಟ್ ಮಾರಾಟದೊಂದಿಗೆ ಹ್ಯುಂಡೈ ಐ 10 ಬಹಳ ಹಿಂದೆ ಬಿದ್ದಿದೆ. ಮಾರುತಿ ಸುಜುಕಿ ಆಲ್ಟೋದ ಜನಪ್ರಿಯತೆಯನ್ನು 2000 ದಿಂದ 2022 ರ ನಡುವೆ 17 ವರ್ಷಗಳ ಕಾಲ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಅಂಶದಿಂದ ಅಳೆಯಬಹುದು. ಮಾರುತಿ ಸುಜುಕಿ ಆಲ್ಟೋ 800 ಅನ್ನು 2000 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದರೆ, ಆಲ್ಟೋ ಕೆ 10 ಮಾದರಿಯು 2010 ರಲ್ಲಿ ಮಾರುಕಟ್ಟೆಗೆ ಪ್ರವೇಶಿಸಿತು.
ಪ್ರಸ್ತುತ, ಮಾರುತಿ ಸುಜುಕಿ ಆಲ್ಟೋ ಕೆ 10 ಮಾತ್ರ ಮಾರಾಟದಲ್ಲಿದೆ. ಏಪ್ರಿಲ್ 1, 2023 ರಿಂದ ಜಾರಿಗೆ ಬಂದ ಬಿಎಸ್ 6 ಹಂತ - 2 ಮಾನದಂಡಗಳಿಗೆ ಅನುಸಾರವಾಗಿ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆದ ಆಲ್ಟೋ 800 ಅನ್ನು ಮಾರ್ಚ್ 2023 ರಲ್ಲಿ ನಿಲ್ಲಿಸಲಾಯಿತು. ಮಾರುತಿ ಸುಜುಕಿ ಆಲ್ಟೋ ಕೆ10 ಪ್ರಸ್ತುತ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.3.99 ಲಕ್ಷದಿಂದ ರೂ.5.96 ಲಕ್ಷಗಳಾಗಿದೆ.

ಮಾರುತಿ ಸುಜುಕಿ ಆಲ್ಟೋ ಕೆ 10 ವಿಶೆಷತೆಗಳು: ಆಲ್ಟೋ ಕೆ 10 ಕಾರು, 1.0-ಲೀಟರ್ ಕೆ 10 ಸಿ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 67 ಪಿಎಸ್ ಗರಿಷ್ಠ ಪವರ್ ಮತ್ತು 89 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಎಂಟಿ ಅಥವಾ 5-ಸ್ಪೀಡ್ ಎಎಂಟಿಗೆ ಆಯ್ಕೆಯೊಂದಿಗೆ ಬರುತ್ತದೆ. 5-ಸ್ಪೀಡ್ ಎಂಟಿಯೊಂದಿಗೆ ಸಿಎನ್‌ಜಿ ಆಯ್ಕೆಯಲ್ಲಿ (57 ಪಿಎಸ್ ಗರಿಷ್ಠ ಶಕ್ತಿ ಮತ್ತು 82 ಎನ್ಎಂ ಪೀಕ್ ಟಾರ್ಕ್)ಸಹ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications