ಬರೋಬ್ಬರಿ 50 ಲಕ್ಷ ಮಾರಾಟವಾದ ಮಾರುತಿಯ ಈ ಕಾರು: ಸ್ವಿಫ್ಟ್, ವ್ಯಾಗನಾರ್ ಅಲ್ಲ, ಮತ್ತೆ ಯಾವುದು?
ನಿಮಗೆಲ್ಲಾ ತಿಳಿದಿರುವಂತೆ ಮಾರುತಿ ಸುಜುಕಿ ಕಾರುಗಳಿಗೆ ತನ್ನದೇ ಆದ ಸ್ಥಾನಮಾನವಿದೆ. ಭಾರತದಲ್ಲಿ ಮೊದಲ ಬಾರಿಗೆ ಕಾರು ಕೊಳ್ಳುವವರು ಪ್ರಮುಖವಾಗಿ ಆಯ್ಕೆ ಮಾಡುವುದು ಮಾರುತಿ ಕಾರುಗಳನ್ನು. ಮಾರುತಿಯ ಈ ಒಂದು ಕಾರು ಬಿಡುಗಡೆ ಆದಾಗಿನಿಂದ ಇಲ್ಲಿಯವರೆಗೆ ಸುಮಾರು 50 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ.
ಮಾರುತಿ ಸುಜುಕಿ ಆಲ್ಟೋ ಕಾರಿನ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಭಾರತದಲ್ಲಿ ಎಷ್ಟೋ ಜನ ಮೊದಲ ಬಾರಿಗೆ ಕೊಂಡ ಕಾರುಗಳಲ್ಲಿ ಆಲ್ಟೋ ಕಾರುಗಳೇ ಹೆಚ್ಚು. ಚಿಕ್ಕದಾದ, ಚೊಕ್ಕದಾದ ಪರ್ಫೆಕ್ಟ್ ಫ್ಯಾಮಿಲಿ ಕಾರಾಗಿದ್ದ ಈ ಆಲ್ಟೋ ಕಾರು ಮಾದರಿ ಹೊಸ ಮೈಲುಗಲ್ಲನ್ನೊಂದು ನೆಟ್ಟಿದೆ. ಇದು ಬಿಡುಗಡೆಯಾಗಿ ಇಲ್ಲಿನವರೆಗೆ ಸುಮಾರು 50 ಲಕ್ಷ ಸಂಖ್ಯೆಯಲ್ಲಿ ಮಾರಾಟವಾಗಿದೆ.

ಈ ಸಾಧನೆಯನ್ನು ಮಾಡಿದ ಒಂದೇ ಒಂದು ಕಾರು ಇದೆಂದು ಹೇಳಲಾಗುತ್ತಿದೆ. ಅದರಲ್ಲೂ ಮಾರುತಿಯ ಪ್ರಮುಖ ಬೆಸ್ಟ್ ಸೆಲ್ಲಿಂಗ್ ಕಾರುಗಳೆಂದೇ ಹೆಸರುವಾಸಿ ಆಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಮತ್ತ ವಾಗನಾರ್ ಸಹ ಈ ಸಾಧೆನೆಯನ್ನಯ ಮಾಡಿಲ್ಲ ಎಂಬುದನ್ನು ನಾವಿಲ್ಲಿ ಇದೇ ಸಂಧರ್ಭದಲ್ಲಿ ನೆನಪಿಸಿಕೊಳ್ಳಬೇಕು.
ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿಯು, ಆಲ್ಟೋ ಕಾರನ್ನು (Maruti Suzuki Alto) ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದ್ದು 2000 ನೇ ಇಸವಿಯಲ್ಲಿ. ಇಲ್ಲಿಂದ ಇಂದಿನವರೆಗೆ ಹಲವಾರು ಅಪ್‌ಡೇಟ್‌ಗಳನ್ನು ಪಡೆದು ಹಲವು ಮಾದರಿಯಲ್ಲಿ ಮಾರುತಿ ಅಲ್ಟೋ ಮುನ್ನುಗ್ಗುತ್ತಿದೆ. ಸುಮಾರು 24 ವರ್ಷಗಳಲ್ಲಿ ಇದು 50 ಲಕ್ಷ ಯೂನಿಟ್ ಅನ್ನು ಮಾರಟ ಮಾಡಿದೆ. ಇದೀಗ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಆಲ್ಟೋ ಕೆ೧೦ ಎಂಬ ಹೆಸರಿನಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 ಬಜೆಟ್ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದ್ದು, ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆವನ್ನು ಹೊಂದಿದೆ. ಎಲ್ಎಕ್ಸ್ಐ, ವಿಎಕ್ಸ್ಐ ಒಳಗೊಂಡಂತೆ 4 ರೂಪಾಂತರ ಆಯ್ಕೆಯಲ್ಲಿ ಕೂಡ ಸಿಗುತ್ತದೆ. ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ವಿನ್ಯಾಸದ ದೃಷ್ಟಿಯಿಂದಲೂ ಅತ್ಯಾಧುನಿಕವಾಗಿದೆ.
ಮಾರುತಿ ಸುಜುಕಿ ಆಲ್ಟೊ ಕೆ10 ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ. ಇದರ 1-ಲೀಟರ್ ಪೆಟ್ರೋಲ್ ಎಂಜಿನ್ 67 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 89 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೂ ದೊರೆಯುತ್ತದೆ.
ಸಿಎನ್‌ಜಿ ಚಾಲಿತ ಆಲ್ಟೊ ಮಾದರಿಯು ಇದೇ ಎಂಜಿನ್ ಒಳಗೊಂಡಿದೆ. ಆದರೆ, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಮಾತ್ರ ಹೊಂದಿದ್ದು, 57 ಪಿಎಸ್ ಪವರ್ ಹಾಗೂ 82 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಪೆಟ್ರೋಲ್ ಆವೃತ್ತಿಗಳು 24.39 ರಿಂದ 24.90 ಕೆಎಂಪಿಎಲ್ ಹಾಗೂ ಸಿಎನ್‌ಜಿ ರೂಪಾಂತರಗಳು 33.85 ಕೆಎಂ/ ಕೆಜಿ ಮೈಲೇಜ್ ನೀಡುತ್ತವೆ.
ಹೊಸ ಮಾರುತಿ ಸುಜುಕಿ ಕಾರು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪೇ, ಸ್ಟೀರಿಂಗ್ - ಮೌಂಟೆಡ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಜೊತೆಗೆ 214 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಕೂಡ ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications