3.99 ಲಕ್ಷ.. 33 Km ಮೈಲೇಜ್, 4 ಜನ ಓಡಾಡಬಹುದು.. ಮತ್ತೆ ಭಾರಿ ಸಂಖ್ಯೆಯಲ್ಲಿ ಆಲ್ಟೊ ಕಾರು ಮಾರಾಟ!
ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುವ ಹಲವು ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇತ್ತೀಚೆಗೆ ಹಲವು ಪ್ರಮುಖ ವಾಹನ ತಯಾರಕ ಕಂಪನಿಗಳಂತೆ ಮಾರುತಿ ಸುಜುಕಿಯು ಆಗಸ್ಟ್ ತಿಂಗಳ (2024) ಕಾರು ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿದೆ. ಎಂಟ್ರಿ ಲೆವೆಲ್ (ಆರಂಭಿಕ ಶ್ರೇಣಿ) ಹ್ಯಾಚ್‌ಬ್ಯಾಕ್ ಆಗಿರುವ ಆಲ್ಟೊ ಕೆ10 (Alto K10) ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಕಳೆದ ತಿಂಗಳು (ಆಗಸ್ಟ್ 2024) ಮಾರುತಿ ಸುಜುಕಿ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್‌ನ 8546 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಾಟಗೊಳಿಸಿದ 9603 ಯುನಿಟ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ -11.01% ಹಿನ್ನಡೆಯಾಗಿದೆ. ಆದಾಗ್ಯೂ ಜುಲೈನಲ್ಲಿ (2024) ಮಾರಾಟ ಮಾಡಿದ 7,353 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ತಿಂಗಳಿಂದ ತಿಂಗಳಿಗೆ (MoM) ಶೇಕಡ 13.96% ಬೆಳವಣಿಗೆಯಾಗಿದೆ. ಈ ಮೂಲಕ ಆಲ್ಟೊ ಕೆ10 ಮಾರಾಟ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.

ಸದ್ಯ ದೇಶೀಯವಾಗಿ ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಹ್ಯಾಚ್‌ಬ್ಯಾಕ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಲ್ಎಕ್ಸ್ಐ, ವಿಎಕ್ಸ್ಐ ಹಾಗೂ ವಿಎಕ್ಸ್ಐ ಪ್ಲಸ್ ಸೇರಿದಂತೆ ವಿವಿಧ ರೂಪಾಂತರಗಳನ್ನು (ವೇರಿಯೆಂಟ್) ಪಡೆದಿದೆ.
ಈ ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. ಇದರ 1-ಲೀಟರ್ ಪೆಟ್ರೋಲ್ ಎಂಜಿನ್ 67 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 89 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಸಿಎನ್‌ಜಿ ಚಾಲಿತ ಮಾದರಿಯು ಇದೇ ಎಂಜಿನ್‌ನ್ನು ಹೊಂದಿದೆ. ಆದರೆ 57 ಪಿಎಸ್ ಶಕ್ತಿ ಹಾಗೂ 82 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಲಷ್ಟೇ ಶಕ್ತವಾಗಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಕಾರು ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಪೆಟ್ರೋಲ್ (Petrol) ರೂಪಾಂತರಗಳು 24.39 ರಿಂದ 24.90 ಕೆಎಂಪಿಎಲ್ ಮತ್ತು ಸಿಎನ್‌ಜಿ (Cng) ರೂಪಾಂತರಗಳು 33.40 ರಿಂದ 33.85 ಕೆಎಂ/ಕೆಜಿವರೆಗೆ ಮೈಲೇಜ್ ನೀಡುತ್ತವೆ.
ಹೊಚ್ಚ ಹೊಸ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್ ಆಕರ್ಷಕವಾದ ವಿನ್ಯಾಸ (ಡಿಸೈನ್) ಹೊಂದಿದೆ. ಮೆಟಾಲಿಕ್ ಸಿಜ್ಲಿಂಗ್ ರೆಡ್ ಹಾಗೂ ಮೆಟಾಲಿಕ್ ಸಿಲ್ಕಿ ಸಿಲ್ವರ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಲಭ್ಯವಿದೆ. ಇದರಲ್ಲಿ 4 ರಿಂದ 5 ಮಂದಿ ಆರಾಮದಾಯಕವಾಗಿ ದೂರದ ಊರುಗಳಿಗೆ ಪ್ರಯಾಣಿಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 214 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.
ಈ ಕಾರು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು ಡುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications