ನೀವು ಮಾರುತಿ ಆಲ್ಟೊ ಕೆ10 ಕಾರು ಖರೀದಿಸಬೇಕೇ?.. ಕಡಿಮೆ EMI, 33 ಕಿ.ಮೀ ಮೈಲೇಜ್, ಆಕರ್ಷಕ ವೈಶಿಷ್ಟ್ಯಗಳು
ಪ್ರತಿಯೊಬ್ಬರಿಗೂ ಜೀವನದಲ್ಲಿ ಹೊಸ ಕಾರು ಖರೀದಿಸಬೇಕೆಂಬುದು ಕನಸಾಗಿರುತ್ತದೆ. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಅದು ಸಾಧ್ಯವಾಗುದಿಲ್ಲ. ಇಲ್ಲಿ ದೇಶದಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ಸಿಗುವ 'ಮಾರುತಿ ಸುಜುಕಿ ಆಲ್ಟೊ ಕೆ10' ಹ್ಯಾಚ್‌ಬ್ಯಾಕ್ ಬಗ್ಗೆ ವಿವರಿಸಿದ್ದೇವೆ. ಈ ಕಾರು ನಿಮಗೆ ಸುಲಭವಾಗಿ ಕೈಗೆಟುಕುತ್ತದೆ.
ನೂತನ ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಕಾರು ಎಲ್ಎಕ್ಸ್ಐ, ವಿಎಕ್ಸ್ಐ ಒಳಗೊಂಡಂತೆ ಹಲವು ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯುತ್ತದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಮಾದರಿಗಳು ರೂ.5.80 ಲಕ್ಷದಿಂದ ರೂ.6.78 ಲಕ್ಷ ಹಾಗೂ ಸಿಎನ್‌ಜಿ ಆವೃತ್ತಿಗಳು ರೂ.6.93 ಲಕ್ಷದಿಂದ ರೂ.7.20 ಲಕ್ಷ ಆನ್ ರೋಡ್ (On Road) ಬೆಲೆಯನ್ನು ಹೊಂದಿವೆ.

ಹೊಸ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್‌ನ್ನು ರೂ.48,000 ಡೌನ್ ಪೇಮೆಂಟ್ ಪಾವತಿಸಿ ಕೊಂಡುಕೊಳ್ಳಬಹುದು. ಅದಕ್ಕೆ 9.8% ಬಡ್ಡಿ ದರದಲ್ಲಿ 5 ವರ್ಷದ ಅವಧಿಗೆ ತಿಂಗಳಿಗೆ ರೂ.9,142 ಇಎಂಐ (EMI) ಕಟ್ಟಬೇಕು. ಡೌನ್ ಪೇಮೆಂಟ್ ಹೆಚ್ಚು ಪಾವತಿಸಿದಷ್ಟು ಮಾಸಿಕ ಇಎಂಐ ತುಂಬುವ ಪ್ರಯಾಣ ಕಡಿಮೆಯಾಗುತ್ತದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಶೋರೂಂ ಭೇಟಿ ನೀಡುವುದು ಉತ್ತಮ.
ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಕಾರು ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ ಸೇರಿದಂತೆ ಆಕರ್ಷಕ ಬಣ್ಣಗಳೊಂದಿಗೆ ಲಭ್ಯವಿದೆ. ಜೊತೆಗೆ ನೋಡುಗರನ್ನು ಸೆಳೆಯುವ ವಿನ್ಯಾಸವನ್ನು ಹೊಂದಿದೆ. ಈ ಕಾರಿನಲ್ಲಿ 4 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಆಲ್ಟೊ ಕೆ10 ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 1-ಲೀಟರ್ ಡುಯಲ್ಜೆಟ್ ಪೆಟ್ರೋಲ್ ಎಂಜಿನ್, 67 ಪಿಎಸ್ ಗರಿಷ್ಠ ಪವರ್ (ಶಕ್ತಿ), 89 Nm ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸಿಎನ್‌ಜಿ ಮಾದರಿಯು ಇದೇ ಎಂಜಿನ್ ಒಳಗೊಂಡಿದೆ. ಆದರೆ, 57 ಪಿಎಸ್ ಗರಿಷ್ಠ ಪವರ್, 82 ಎನ್ಎಂ ಪೀಕ್ ಟಾರ್ಕ್ ಹೊರಹಾಕಲಷ್ಟೇ ಶಕ್ತವಾಗಿದೆ.
ಈ ಮಾರುತಿ ಸುಜುಕಿ ಆಲ್ಟೊ ಕೆ10 ಕಾರು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್/ 5-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ಚಾಲಿತ ಮಾದರಿಗಳು 24.39 ಕೆಎಂಪಿಎಲ್ ರಿಂದ 24.90 ಕೆಎಂಪಿಎಲ್, ಸಿಎನ್‌ಜಿ ಚಾಲಿತ ಆವೃತ್ತಿಗಳು 33.40 ಕೆಎಂ/ಕೆಜಿ ರಿಂದ 33.85 ಕೆಎಂ/ಕೆಜಿ ಮೈಲೇಜ್ ನೀಡುತ್ತವೆ.

ಆಲ್ಟೊ ಕೆ10 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಕೀಲೆಸ್ ಎಂಟ್ರಿ, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರಿವರ್ಸಿಂಗ್ ಕ್ಯಾಮೆರಾವನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications