Maruti: ಮಾರುತಿ ಸುಜುಕಿ ಜನಪ್ರಿಯ CNG ಕಾರುಗಳ ಉತ್ಪಾದನೆ ಸ್ಥಗಿತ! ಕಾರಣವೇನು?
ಮಾರುತಿ ಸುಜುಕಿಯ (Maruti Suzuki) ಕೆಲವು ಸಿಎನ್‌ಜಿ ಮಾದರಿಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲಿ ಮೊದಲನೆಯ ಸ್ಥಾನ ವ್ಯಾಗನ್ ಆರ್ ಮಾದರಿಯದ್ದಾಗಿದೆ. ಇದರ ನಂತರ ಎಸ್‌ಪ್ರೆಸ್ಸೋ, ಸೆಲೆರಿಯೋ, ಆಲ್ಟೋ ಕೆ10 ಸಿಎನ್‌ಜಿ ಮಾದರಿಗಳು ಬೇಡಿಕೆ ಪಡೆದಿವೆಯಾದ್ರೂ, ದಾಸ್ತಾನುಗಳಲ್ಲಿ ಸ್ಟಾಕ್ ಹೆಚ್ಚಾಗಿ ಹೆಚ್ಚಾಗಿ ಉಳಿದಿವೆ ಎನ್ನಲಾಗುತ್ತಿದೆ.
ಹಾಗಾಗಿ ಸ್ಟಾಕ್ ಅನ್ನು ಖಾಲಿ ಮಾಡುವ ಮೊದಲು ಇವುಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಮಾರುತಿ ಸುಜುಕಿ ಮಾರ್ಚ್‌ನಲ್ಲಿ ವ್ಯಾಗನ್ ಆರ್ 1.0 ಲೀ. ಸಿಎನ್‌ಜಿಯನ್ನು ಹೊರತುಪಡಿಸಿ, 1.0 ಲೀಟರ್ ಸಿಎನ್‌ಜಿ ಪವರ್‌ಟ್ರೇನ್ ಹೊಂದಿರುವ ಆಲ್ಟೋ ಕೆ10 ಸಿಎನ್‌ಜಿ, ಸೆಲೆರಿಯೊ ಸಿಎನ್‌ಜಿ ಮತ್ತು ಎಸ್‌ಪ್ರೆಸ್ಸೊ ಸಿಎನ್‌ಜಿ ಉತ್ಪಾದನೆಯನ್ನು ನಿಲ್ಲಿಸಿದೆ.

ಸದ್ಯ ಈ ಎಲ್ಲಾ ಸಿಎನ್‌ಜಿ ಮಾದರಿಗಳು ಡೀಲರ್‌ಗಳ ಬಳಿ ಡೆಲಿವರಿಗೆ ರೆಡಿ ಇವೆ. ಇವುಗಳ ಉತ್ಪಾದನೆಯನ್ನು ಪುನಾರಂಭಿಸುವ ಮೊದಲು ಹಳೆಯ ಸ್ಟಾಕ್ ಅನ್ನು ತೆರವುಗೊಳಿಸಲು ಮಾರುತಿ ಸುಜುಕಿ ನೋಡುತ್ತಿದೆ. ಆದರೆ ವ್ಯಾಗನ್ ಆರ್ ಸಿಎನ್‌ಜಿ ಮಾತ್ರ ಎಂದಿನಂತೆ ಉತ್ಪಾದನೆಯಾಗಲಿದೆ. ಏಕೆಂದರೆ ವ್ಯಾಗನ್ ಆರ್ ಇತರ ಸಿಎನ್‌ಜಿ ಕಾರುಗಳಂತಲ್ಲದೆ ಮೊದಲಿನಿಂದಲೂ ಉತ್ತಮ ಬೇಡಿಕೆಯನ್ನು ಹೊಂದಿರುವುದು ಇದಕ್ಕೆ ಕಾರಣವಾಗಿದೆ.
ಸದ್ಯ ಡೀಲರ್‌ಗಳು ಆಲ್ಟೋ ಕೆ10 (Alto K10) ಸಿಎನ್‌ಜಿ, ಸೆಲೆರಿಯೊ (Maruti Suzuki Celerio) ಸಿಎನ್‌ಜಿ, ಎಸ್‌ಪ್ರೆಸ್ಸೊ (Maruti Suzuki S-Presso) ಸಿಎನ್‌ಜಿ ಮಾದರಿಗಳಿಗೆ ಬುಕಿಂಗ್ ಸ್ವೀಕರಿಸುತ್ತಾರೆ. ಹಾಗೆಯೇ ಈ ಕಾರುಗಳನ್ನು ನಿಮ್ಮ ನಿರೀಕ್ಷೆಗೂ ಮೊದಲೇ ಡೆಲಿವರಿ ನೀಡಲಿದ್ದಾರೆ. ಒಂದು ವೇಳೆ ಡೆಲಿವರಿ ಮಾಡುವಲ್ಲಿ ತಡವಾದ್ರೆ ಸ್ಟಾಕ್ ಖಾಲಿಯಾಗಿದೆ ಅಥವಾ ಹೆಚ್ಚಿನ ದಾಸ್ತಾನು ಇಲ್ಲದ ಕಾರಣವಾಗಿರಬಹುದು.

ಮಾರ್ಚ್‌ನಲ್ಲಿ ಭರ್ಜರಿ ಡಿಸ್ಕೌಂಟ್: ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಆಟೊಮೇಟಿಕ್ ರೂಪಾಂತರ ಒಟ್ಟು ರೂ. 61,000, ಮ್ಯಾನುವಲ್ ಮಾದರಿ ರೂ. 56,000 ಮತ್ತು ಸಿಎನ್‌ಜಿ ರೂಪಾಂತರ ರೂ. 39,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಈ ಕಾರು ರೂ. 4.27 ಲಕ್ಷದಿಂದ ರೂ. 6.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. 24.12 ರಿಂದ 32.73 ಕೆಎಂ/ಕೆಜಿ ಮೈಲೇಜ್ ನೀಡುತ್ತದೆ.
ಮಾರುತಿ ಆಲ್ಟೊ ಕೆ10 (Alto K10) ಆಟೋಮೆಟಿಕ್ ರೂಪಾಂತರ ಒಟ್ಟು ರೂ.62,000, ಮ್ಯಾನುವಲ್ ಆವೃತ್ತಿ ರೂ.57,000 ಮತ್ತು ಸಿಎನ್‌ಜಿ ರೂಪಾಂತರ ರೂ.40,000 ಡಿಸ್ಕೌಂಟ್ ಆಫರ್ ಪಡೆದಿದೆ. ಈ ಕಾರು ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಗರಿಷ್ಠ ಮೈಲೇಜ್ ನೀಡುವುದರೊಂದಿಗೆ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಸೆಲರಿಯೊ ಕೂಡ ಈ ಮಾರ್ಚ್ ತಿಂಗಳು ಉತ್ತಮ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಆಟೋಮೆಟಿಕ್ ಮಾದರಿ ರೂ. 61,000, ಮ್ಯಾನುವಲ್ ರೂಪಾಂತರ ರೂ. 56,000 ಮತ್ತು ಸಿಎನ್‌ಜಿ ಆವೃತ್ತಿ ರೂ. 39,000 ಡಿಸ್ಕೌಂಟ್ ಆಫರ್ ಒಳಗೊಂಡಿದೆ. ಸೆಲರಿಯೊ ರೂ. 5.37 ಲಕ್ಷದಿಂದ ರೂ. 7.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications