Maruti Suzuki: ಮಾರುತಿ ಸುಜುಕಿಯಿಂದ ಸಿಹಿಸುದ್ದಿ.. ಭರ್ಜರಿ ರಿಯಾಯಿತಿ, 3.99 ಲಕ್ಷಕ್ಕೆ ಹೊಸ ಕಾರು!
ಮಾರುತಿ ಸುಜುಕಿ (Maruti Suzuki) ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಈ ನವೆಂಬರ್‌ನಲ್ಲಿಯೂ ದೇಶೀಯ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಅರೆನಾ (Arena) ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸುವ ಆಲ್ಟೊ ಕೆ10, ಸೆಲರಿಯೊ, ಸ್ವಿಫ್ಟ್, ಡಿಸೈರ್ ಹಾಗೂ ಬ್ರೆಜಾ ಸೇರಿದಂತೆ ವಿವಿಧ ಕಾರುಗಳ ಖರೀದಿ ಮೇಲೆ ಭಾರೀ ಹಣಕಾಸಿನ ಪ್ರಯೋಜನಗಳನ್ನು ಘೋಷಣೆ ಮಾಡಿದೆ. ಬನ್ನಿ.. ಯಾವ ಕಾರು ಎಷ್ಟು ರಿಯಾಯಿತಿ ಹೊಂದಿದೆ ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರ ತಿಳಿಯೋಣ.
ಮೊದಲಿಗೆ ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಹ್ಯಾಚ್‌ಬ್ಯಾಕ್ ಹೊಂದಿರುವ ರಿಯಾಯಿತಿ ಪ್ರಯೋಜನಗಳ ಬಗ್ಗೆ ಮಾತನಾಡೋಣ. ಈ ಕಾರಿನ ವಿವಿಧ ರೂಪಾಂತರಗಳು (ವೇರಿಯೆಂಟ್) ರೂ.40,000 ರಿಂದ ರೂ.50,000 ವರೆಗೆ ರಿಯಾಯಿತಿ ಹೊಂದಿವೆ. ನೂತನ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್, ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

ಮಾರುತಿ ಸುಜುಕಿ ಸೆಲರಿಯೊ (Maruti Suzuki Celerio) ಹ್ಯಾಚ್‌ಬ್ಯಾಕ್ ಕೂಡ ದೊಡ್ಡ ರಿಯಾಯಿತಿ ಪಡೆದಿದೆ. ಇದರ ಮ್ಯಾನುವಲ್ ಟ್ರಾಸ್ಮಿಷನ್ ಹಾಗೂ ಎಜಿಎಸ್ ರೂಪಾಂತರಗಳು ರೂ.40,000 ರಿಂದ ರೂ.50,000 ವರೆಗೆ ಹಣಕಾಸಿನ ಪ್ರಯೋಜನಗಳನ್ನು ಒಳಗೊಂಡಿವೆ. ಈ ಕಾರು, ರೂ.4.99 ರಿಂದ ರೂ.7.04 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಮಾರುತಿ ಸುಜುಕಿ ಡಿಸೈರ್ (Maruti Suzuki Dzire) ಪ್ರಖ್ಯಾತ ಸೆಡಾನ್ ಆಗಿದ್ದು, ಈ ಕಾರಿನ ರೂಪಾಂತಗಳು ರೂ.25,000 ರಿಂದ ರೂ.50,000 ವರೆಗೆ ರಿಯಾಯಿತಿ ಪಡೆದಿವೆ. ನೂತನ ಡಿಸೈರ್ ಸೆಡಾನ್ ರೂ.6.57 ರಿಂದ ರೂ.9.34 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಇದರಲ್ಲಿ 5 ಮಂದಿ ಓಡಾಟ ನಡೆಸಬಹುದು.

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದರ ವಿವಿಧ ರೂಪಾಂತರಗಳು, ರೂ.15,000 ರಿಂದ ರೂ.65,000 ವರೆಗೆ ರಿಯಾಯಿತಿ ಹೊಂದಿವೆ. ಹೊಚ್ಚ ಹೊಸ ಸ್ವಿಫ್ಟ್ ಕಾರು, ರೂ.6.49 ರಿಂದ ರೂ.9.60 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತವೆ.
ಮಾರುತಿ ಸುಜುಕಿ ಇಕೋ (Maruti Suzuki Eeco) ವ್ಯಾನ್ ಸಹ ಭಾರಿ ರಿಯಾಯಿತಿ ಪಡೆದಿದೆ. ಈ ವ್ಯಾನ್‌ನ ರೂಪಾಂತರಗಳು ರೂ.25,000 ರಿಂದ 30,000 ವರೆಗೆ ಹಣಕಾಸಿನ ಪ್ರಯೋಜನಗಳನ್ನು ಒಳಗೊಂಡಿವೆ. ನೂತನ ಇಕೋ ವ್ಯಾನ್ ರೂ.5.32 ರಿಂದ ರೂ.6.58 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. 5/ 7 ಆಸನದೊಂದಿಗೂ ಲಭ್ಯವಿದೆ.

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುವ ಹ್ಯಾಚ್‌ಬ್ಯಾಕ್ ಆಗಿದೆ. ಈ ಕಾರಿನ ವಿವಿಧ ರೂಪಾಂತರಗಳು, ರೂ.30,000 ರಿಂದ ರೂ.50,000 ವರೆಗೆ ರಿಯಾಯಿತಿ ಪಡೆದಿವೆ. ಹೊಸ ವ್ಯಾಗನ್ಆರ್ ರೂ.5.54 ಲಕ್ಷದಿಂದ ರೂ.7.33 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಕೂಡ ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಇದರ ರೂಪಾಂತರಗಳು ರೂ.40,000 ರಿಂದ ರೂ.50,000 ವರೆಗೆ ಹಣಕಾಸಿನ ಪ್ರಯೋಜನಗಳನ್ನು ಹೊಂದಿವೆ. ನೂತನ ಎಸ್-ಪ್ರೆಸ್ಸೊ ರೂ.4.26 ರಿಂದ ರೂ.6.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಮಾರುತಿ ಸುಜುಕಿ ಬ್ರೆಜಾ (Maruti Suzuki Brezza) ಜನಪ್ರಿಯ ಎಸ್‌ಯುವಿಯಾಗಿದೆ. ಇದರ ವಿವಿಧ ರೂಪಾಂತರಗಳು 15,000 ರಿಂದ ರೂ.25000 ವರೆಗೆ ರಿಯಾಯಿತಿ ಹೊಂದಿವೆ. ಈ ಕಾರು ರೂ.8.34 ರಿಂದ ರೂ.14.14 ಲಕ್ಷ (ಎಕ್ಸ್ ಶೋರೂಂ) ದವವನ್ನು ಒಳಗೊಂಡಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನೊಂದಿಗೂ ದೊರೆಯುತ್ತದೆ.
ನಿಮ್ಮ ಗಮನಕ್ಕೆ.. ಈ ರಿಯಾಯಿತಿ ಪ್ರಯೋಜನಗಳು ನಗರದಿಂದ ನಗರಕ್ಕೆ ಡೀಲರ್‌ಶಿಪ್‌ಗೆ ಅನುಗುಣವಾಗಿ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂ ಭೇಟಿ ನೀಡಿರಿ.


Click it and Unblock the Notifications