ಕಾರು ಖರೀದಿಸಲು ಯೋಜಿಸಿದ್ದೀರಾ? ಈ ಜನಪ್ರಿಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ಸುಜುಕಿ (Maruti Suzuki) ಈ ಜನವರಿ ತಿಂಗಳು ಅರೆನಾ ಹಾಗೂ ನೆಕ್ಸಾ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸುವ ವಿವಿಧ ಜನಪ್ರಿಯ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಅದಕ್ಕೆ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಬಲೆನೊ (Baleno) ಕೂಡ ಹೊರತಾಗಿಲ್ಲ. ಇದೀಗ ಆಯ್ದ ಮಾರುತಿ ಸುಜುಕಿ ಡೀಲರ್‌ಶಿಪ್‌ಗಳು ಈ ತಿಂಗಳು ಕಾರುಗಳಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿವೆ.

ನಗದು ರಿಯಾಯಿತಿಗಳು, ವಿನಿಮಯ ಬೋನಸ್‌ಗಳು, ಕಾರ್ಪೊರೇಟ್ ರಿಯಾಯಿತಿಗಳು ಮತ್ತು ಹೆಚ್ಚಿನವುಗಳ ರೂಪದಲ್ಲಿ ಲಭ್ಯವಿರುವ ಈ ಪ್ರಯೋಜನಗಳನ್ನು ಆಯ್ದ ಅರೆನಾ ಮತ್ತು ನೆಕ್ಸಾ ಡೀಲರ್‌ಶಿಪ್‌ಗಳಲ್ಲಿ ಪಡೆಯಬಹುದು. ಮಾರುತಿ ಬಲೆನೊ ಕಾರಿನ ಮೇಲೆ ರೂ.20,000 ನಗದು ರಿಯಾಯಿತಿ, ರೂ. 15,000 ವಿನಿಮಯ ಬೋನಸ್, 2,000 ಕಾರ್ಪೊರೇಟ್ ರಿಯಾಯಿತಿ ಮತ್ತು ಹೆಚ್ಚುವರಿ ಸ್ಕ್ರ್ಯಾಪ್ ಪ್ರಯೋಜನ ರೂ. 5,000 ವರೆಗೆ ಪಡೆಯುತ್ತದೆ. ಈ ಪ್ರಯೋಜನಗಳು ರೂಪಾಂತರದ ಮ್ಯಾಟ್ರಿಕ್ಸ್‌ನಾದ್ಯಂತ ಮಾನ್ಯವಾಗಿರುತ್ತವೆ.

Maruti Suzuki Baleno

ಈ ಮಾರುತಿ ಸುಜುಕಿ ಬಲೆನೊ ಕಾರಿನ ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, 5 ಜನರು ಆರಾಮದಾಯವಾಗಿ ಪ್ರಯಾಣಿಸಬಹುದು. ಇದೊಂದು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಆಗಿರುವುದರಿಂದ ನೆಕ್ಸಾ ಡೀಲರ್ ಮೂಲಕ ಮಾರಾಟಗೊಳಿಸಲಾಗುತ್ತದೆ. ಸಿಗ್ಮಾ, ಡೆಲ್ಟಾ, ಜಿಟಾ, ಆಲ್ಪಾ ರೂಪಾಂತರ ಹಾಗೂ ನೆಕ್ಸಾ ಬ್ಲೂ, ಆರ್ಕ್ಟಿಕ್ ವೈಟ್, ಗ್ರೈಂಡರ್ ಗ್ರೇ ಒಳಗೊಂಡಂತೆ 7-ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಈ ಮಾರುತಿ ಬಲೆನೊ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ಫೀಚರ್ಸ್ ಗಳನ್ನು ಒಳಗೊಂಡಿವೆ. ಪ್ರಮುಖವಾಗಿ ಐಡಲ್ ಸ್ಟಾರ್ಟ್/ ಸ್ಟಾಪ್ ತಂತ್ರಜ್ಞಾನವನ್ನು ಹೊಂದಿದೆ. ಇದರೊಟ್ಟಿಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಯಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 4-ಸ್ಪೀಕರ್‌ಗಳನ್ನು ಒಳಗೊಂಡ ಸೌಂಡ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿಯನ್ನು ಪಡೆದಿದೆ.

Maruti Suzuki Baleno

ಮಾರುತಿ ಸುಜುಕಿ, ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಬಲೆನೊ ಕಾರನ್ನು ಕಳುಹಿಸುವುದಾಗಿ ಘೋಷಣೆ ಮಾಡಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಹ್ಯಾಚ್‌ಬ್ಯಾಕ್‌ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ISOFIX ಆಂಕಾರೇಜ್‌, ರೇರ್ ಪಾರ್ಕಿಂಗ್ ಸೇನಾರ್ಸ್, 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ (Maruti Suzuki Baleno), ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ.. ಇದರ 1.2-ಲೀಟರ್ ಪೆಟ್ರೋಲ್ ಎಂಜಿನ್ 90 PS ಗರಿಷ್ಠ ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ವೀಡ್ ಮ್ಯಾನುವಲ್/ 5-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.

Maruti Suzuki Baleno

ಸಿಎನ್‌ಜಿ ಚಾಲಿತ ಬಲೆನೊ ಸಹ ಈ ರೀತಿಯ ಪವರ್‌ಟ್ರೇನ್ ಅನ್ನು ಪಡೆದಿದೆ. ಆದರೆ, 77.49 PS ಪವರ್, 98.5 Nm ಪೀಕ್ ಟಾರ್ಕ್ ಹೊರಕಾಕುತ್ತದೆ. ಕೇವಲ 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಸಿಗುತ್ತದೆ. ಇಂಧನ ದಕ್ಷತೆ ವಿಚಾರಕ್ಕೆ ಬರುವುದಾದರೆ, ಪೆಟ್ರೋಲ್ ರೂಪಾಂತರಗಳು 22.35 kmpl - 22.94 kmpl, ಸಿಎನ್‌ಜಿ ರೂಪಾಂತರಗಳು 30.61 km/kg ಮೈಲೇಜ್ ನೀಡುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 8, 2024, 13:40 [IST]
English summary
Maruti suzuki baleno gets discounts in february 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+