Maruti Suzuki: ಈ ಜನಪ್ರಿಯ ಕಾರಿಗೆ ಮನಸೋತ ಗ್ರಾಹಕರು.. ರೂ.6.66 ಲಕ್ಷ ಬೆಲೆ, 30 ಕಿ.ಮೀ ಮೈಲೇಜ್!

ದೇಶದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿ ಮಾರುತಿ ಸುಜುಕಿ (Maruti Suzuki) ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಕಂಪನಿಯು ಆಲ್ಟೊ ಕೆ10, ಸೆಲರಿಯೊ, ವ್ಯಾಗನ್ಆರ್, ಇಗ್ನಿಸ್, ಸ್ವಿಫ್ಟ್, ಬ್ರೆಝಾ, ಎರ್ಟಿಗಾ, ಡಿಜೈರ್, ಫ್ರಾಂಕ್ಸ್ ಹಾಗೂ ಜಿಮ್ನಿ ಸೇರಿದಂತೆ ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ. ಈಚೆಗೆ ಮಾರುತಿ ಸುಜುಕಿ ಜೂನ್ ತಿಂಗಳ ಕಾರು ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದೆ. ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊ (Baleno) ಭಾರೀ ಸಂಖ್ಯೆಯಲ್ಲಿ ಮಾರಾಟವಾಗಿದೆ. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಟಾಟಾ ಪಂಚ್ ಮೈಕ್ರೋ ಎಸ್‌ಯುವಿಯಿದೆ.

ಮಾರುತಿ ಸುಜುಕಿ, ಜೂನ್ ತಿಂಗಳು (2024) ಬರೋಬ್ಬರಿ 14,895 ಯುನಿಟ್ ಬಲೆನೊ ಕಾರುಗಳನ್ನು ಮಾರಾಟ ಮಾಡಿದೆ. 2023ರ ಇದೇ ಅವಧಿಯಲ್ಲಿ ಮಾರಿದ 14,077 ಯುನಿಟ್‌ಗೆ ಹೋಲಿಕೆ ಮಾಡಿದರೆ ಶೇಕಡ 6% ಬೆಳವಣಿಗೆ ಕಂಡಿದೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ (Maruti Suzuki Baleno) ರೂ.6.66 ಲಕ್ಷದಿಂದ ರೂ.9.88 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ.

Maruti Suzuki Baleno Sales Report June 2024 Rs 8 Lakh Price 30 Km Mileage

ಈ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಸಿಗ್ಮಾ, ಡೆಲ್ಟಾ ಹಾಗೂ ಜಿಟಾ ಸೇರಿದಂತೆ ವಿವಿಧ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಕೂಡ ಸಿಗುತ್ತದೆ. ನೆಕ್ಸಾ ಬ್ಲೂ, ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಒಪ್ಯುಲೆಂಟ್ ರೆಡ್ ಒಳಗೊಂಡಂತೆ ಹಲವು ಬಣ್ಣಗಳನ್ನು ಪಡೆದಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಮಾರುತಿ ಸುಜುಕಿ ಬಲೆನೊ 2 ಪವರ್‌ಟ್ರೇನ್‌ನೊಂದಿಗೆ ದೊರೆಯುತ್ತದೆ. ಇದರ 1.2-ಲೀಟರ್ ಪೆಟ್ರೋಲ್ ಎಂಜಿನ್ 90 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 113 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಸಿಎನ್‌ಜಿ ಚಾಲಿತ ಮಾದರಿಯು ಇದೇ ಎಂಜಿನ್‌ನ್ನು ಒಳಗೊಂಡಿದೆ. ಆದರೆ, 77.5 ಪಿಎಸ್ ಶಕ್ತಿ ಹಾಗೂ 98.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

Maruti Suzuki Baleno Sales Report June 2024 Rs 8 Lakh Price 30 Km Mileage

ಈ ಹ್ಯಾಚ್‌ಬ್ಯಾಕ್ ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಪೆಟ್ರೋಲ್ ಮಾದರಿಗಳು 22.35 ರಿಂದ 22.94 ಕೆಎಂಪಿಎಲ್ ಮತ್ತು ಸಿಎನ್‌ಜಿ ರೂಪಾಂತರಗಳು 30.61 ಕೆಎಂ/ಕೆಜಿವರೆಗೆ ಮೈಲೇಜ್ ನೀಡುತ್ತವೆ. ಪ್ರವಾಸದ ವೇಳೆಯಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 318 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.

ಬಲೆನೊ ಕಾರು ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್ ಮತ್ತು ಕೀಲೆಸ್ ಎಂಟ್ರಿಯನ್ನು ಪಡೆದಿದೆ.

Maruti Suzuki Baleno Sales Report June 2024 Rs 8 Lakh Price 30 Km Mileage

ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸಿತ್ತದೆ. 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಹಿಲ್-ಹೋಲ್ಡ್ ಅಸಿಸ್ಟ್, ರೇರ್ ಪಾರ್ಕಿಂಗ್ ಸೇನಾರ್ಸ್, ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಬಲೆನೊಗೆ ಹ್ಯುಂಡೈ ಐ20, ಟಾಟಾ ಆಲ್ಟ್ರೋಜ್ ಹಾಗೂ ಸಿಟ್ರನ್ ಸಿ3 ಹ್ಯಾಚ್‌ಬ್ಯಾಕ್‌ಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, July 11, 2024, 20:11 [IST]
English summary
Maruti suzuki baleno sales report june 2024 rs 8 lakh price 30 km mileage
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+