ಭರ್ಜರಿ ಮಾರಾಟವಾಗುತ್ತಿದೆ ಮಾರುತಿಯ ಈ ಫ್ಯಾಮಿಲಿ ಕಾರು: ಕಡಿಮೆ ಬೆಲೆ, ಸುರಕ್ಷತೆಯಲ್ಲೂ ಟಾಪ್ ಇನ್ನೇನು ಬೇಕು?
ನೀವೇನಾದರೂ ಎಂಟರಿಂದ ಹತ್ತು ಲಕ್ಷದ ಒಳಗಿನ ಬಜೆಟ್‌ನಲ್ಲಿ ಒಂದೊಳ್ಳೆ ಮೈಲೇಜ್ ಕೊಡುವ ಎಸ್‌ಯುವಿಯನ್ನು ಹುಡುಕುತ್ತಿದ್ದೀರಾ? ಕಾರಿನ ಸ್ಟೈಲಿಶ್ ಲುಕ್ ಜೊತೆಗೆ ಸರ್ವೀಸ್ ಸಹ ಉತ್ತಮವಾಗಿರಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಇಂದಿನ ಈ ಲೇಖನ ನಿಮಗಾಗಿ. ಇಂದಿನ ಲೇಖನದಲ್ಲಿ ನಾವು ನಿಮಗೆ ಕಡಿಮೆ ಬೆಲೆಗೆ ಹೆಚ್ಚಿನ ಮೈಲೇಜ್, ಎಸ್‌ಯುವಿಯ ಖಡಕ್ ಲುಕ್ ಜೊತೆಗೆ ಒಂದೊಳ್ಳೆ ಪರ್ಫೆಕ್ಟ್ ಫ್ಯಾಮಿಲಿ ಕಾರಿನ ಕುರಿತಾಗಿ ನೋಡಲಿದ್ದೇವೆ. ಹಾಗಾಗಿ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ ಮತ್ತು ಶೇರ್ ಮಾಡಿ.
ಮಾರುತಿ ಸುಜುಕಿಯು ಭಾರತದಲ್ಲಿ ಹಲವು ಮಾದರಿಯ ವಾಹನಗಳನ್ನು ಮಾರಾಟ ಮಾಡುತ್ತಿದೆ. ಅದರಲ್ಲಿ ಹ್ಯಾಚ್‌ಬ್ಯಾಕ್, ಸೆಡಾನ್, ಕಾಂಪಾಕ್ಟ್ ಎಸ್‌ಯುವಿ ಮತ್ತು ಎಸ್‌ಯುವಿಗಳು ಸೇರಿವೆ. ಇದರಲ್ಲಿ ಎಲ್ಲರ ನೆಚ್ಚಿನ ಕಾರುಗಳಲ್ಲಿ ಮಾರುತಿ ಸುಜುಕಿ ಬ್ರೆಝಾ ಸಹ ಒಂದು. ಇದನ್ನ ಒಂದು ಪರ್ಫೆಕ್ಟ್ ಫ್ಯಾಮಿಲಿ ಕಾರು ಎನ್ನಲು ಹಲವು ಕಾರಣಗಳಿದೆ.

ಸುರಕ್ಷತೆ: ಮಾರುತಿ ಸುಜುಕಿ ಸಿಎನ್‌ಜಿ ಮಾದರಿಯಲ್ಲಿ ಇಎಸ್‌ಪಿ ಅಥವಾ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಎಂಬ ಫೀಚರ್ ಸಿಗುತ್ತಿದ್ದು, ಇದು ಈ ಕಾರಿಗೆ ಇನ್ನೂ ಹೆಚ್ಚಿನ ಸುರಕ್ಷತೆಯನ್ನು ಒದಗಿಸಲಿದೆ. ಈ ಫೀಚರ್ ಅನ್ನು ಸೇರಿಸಿರುವುದರಿಂದಾಗಿ ಈ ಕಾರು ಸ್ಕಿಡ್ ಆಗುವುದು ಮತ್ತು ಇನ್ನಿತರ ಅಪಾಯಕಾರಿ ವಿಷಯಗಳನ್ನು ಕಂಟ್ರೋಲ್ ಮಾಡುತ್ತದೆ.
ಮಾರತಿ ಸುಜುಕಿ ಬ್ರೆಝಾದಲ್ಲಿ ಇಎಸ್‌ಪಿ ಮಾತ್ರವಲ್ಲದೇ, ಇದೀಗ ಮಾರುತಿ ಬ್ರೆಝಾ ಕಾರಿನ ಎಲ್ಲಾ ಮಾದರಿಯಲ್ಲೂ ಹಿಲ್ ಹೋಲ್ಡ್ ಅಸಿಸ್ಟ್ ಫೀಚರ್ ಅನ್ನು ಸಹ ಸೇರಿಸಲಾಗಿದೆ. ಈ ಫೀಚರ್ ಮಾರುತಿ ಸುಜುಕಿ ಬ್ರೆಝಾ ಕಾರಿನ ಎಲ್ಲಾ ವೇರಿಯಂಟ್‌ಗಳಲ್ಲಿ ಸ್ಟಾಂಡರ್ಡ್ ಆಗಿ ಲಭ್ಯವಾಗಲಿದೆ. ಈ ಮೂಲಕ ವಾಹನ ಚಲಾಯಿಸುವವರಿಗೆ ಮತ್ತಷ್ಟು ಹೆಚ್ಚಿನ ಅನುಭವವನ್ನು ನೀಡಲಿದೆ.

ಮಾರುತಿ ಸುಜುಕಿ ಬ್ರೆಝಾ ಬಗ್ಗೆ ನೋಡುವುದಾದರೆ, ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾದ ಎಸ್‌ಯುವಿಗಳಲ್ಲಿ ಮಾರುತಿ ಸುಜುಕಿ ಬ್ರೆಝಾ (Maruti Brezza) ಸಹ ಒಂದು. ಈ ಕಾರು ಭಾರತದಲ್ಲಿ ಒಂದು ಮಿಲಿಯನ್‌ಗೂ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza), ರೂ.8.29 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಗರಿಷ್ಠ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ಝಡ್ಎಕ್ಸ್ಐ (ಸಿಎನ್‌ಜಿ) ಆವೃತ್ತಿ ರೂ.14.89 ಲಕ್ಷ, ಝಡ್ಎಕ್ಸ್ಐ ಪ್ಲಸ್ (ಪೆಟ್ರೋಲ್) ಮಾದರಿ ರೂ.15.48 ಲಕ್ಷ ಆನ್ ರೋಡ್ ದರವನ್ನು ಪಡೆದಿದೆ. ನೀವು ಈ ಕಾರನ್ನು ರೂ.99,000 ಡೌನ್ ಪೇಮೆಂಟ್ ಮಾಡಿ ಖರೀದಿಸಿದರೆ, 5 ವರ್ಷದ ಅವಧಿಗೆ ಶೇಕಡ 9.8% ಬಡ್ಡಿ ದರದಲ್ಲಿ ತಿಂಗಳಿಗೆ ರೂ.18,945 ಇಎಂಐ ಕಟ್ಟಬೇಕು.

ಈ ಕಾರು ಎರಡು ಪವರ್ ಟ್ರೇನ್ ಆಯ್ಕೆಯಲ್ಲಿ ಸಿಗುತ್ತದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್, 103 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 137 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಸಿಎನ್‌ಜಿ ಚಾಲಿತ ಕಾರು ಸಹ ಇದೇ ಎಂಜಿನ್ ಆಯ್ಕೆಯನ್ನು ಪಡೆದಿದೆ. ಆದರೆ, 88 ಪಿಎಸ್ ಪವರ್ ಹಾಗೂ 121.5 ಎನ್ಎಂ ಪೀಕ್ ಟಾರ್ಕ್ ಹೊರಹಾಕಲಷ್ಟೇ ಶಕ್ತವಾಗಿದೆ. ಜೊತೆಗೆ 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೂ ಸಿಗುತ್ತದೆ. ಪೆಟ್ರೋಲ್ ರೂಪಾಂತರಗಳು 17.38 ರಿಂದ 19.89 ಕೆಎಂಪಿಎಲ್, ಸಿಎನ್‌ಜಿ ಮಾದರಿಗಳು 25.51 ಕೆಎಂ/ಕೆಜಿ ವರೆಗೆ ಮೈಲೇಜ್ ಕೊಡುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications