8 ಲಕ್ಷ ಬೆಲೆ: ಈ ಪ್ರಖ್ಯಾತ ಕಾರಿನ ಮನಸೋತ ಗ್ರಾಹಕರು.. ಸ್ಕಾರ್ಪಿಯೋ, ನೆಕ್ಸಾನ್‌ಗಳಿಗಿಲ್ಲ ಇಷ್ಟು ಕ್ಯೂ..!

ವಿಶ್ವದಲ್ಲಿಯೇ ಭಾರತವು ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಎಸ್‌ಯುವಿ ವಿಭಾಗದಲ್ಲಿ ಟಾಟಾ ನೆಕ್ಸಾನ್‌, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್ ಹಾಗೂ ಮಹೀಂದ್ರಾ ಸ್ಕಾರ್ಪಿಯೋಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ಆದಾಗ್ಯೂ ಈ ಎಲ್ಲ ಕಾರುಗಳಿಗೆ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಪ್ರಬಲವಾದ ಸ್ಪರ್ಧೆಯೊಡ್ಡುತ್ತಿದೆ. 2016ರ ಮಾರ್ಚ್‌ನಲ್ಲಿ ಬಿಡುಗಡೆಯಾದಾಗಿನಿಂದಲೂ ಈವರೆಗೆ ಭಾರಿ ಸಂಖ್ಯೆಯಲ್ಲಿ ಮಾರಾಟವಾಗುವ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ಬರೋಬ್ಬರಿ 1,000,000 ಯುನಿಟ್ ಮಾರಾಟ ಮಾಡಲಾಗಿದೆ. ಈ ಆಗಸ್ಟ್​ನಲ್ಲಿಯೂ ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗಿದೆ.

ಮಾರುತಿ ಸುಜುಕಿಯು ಕಳೆದ ತಿಂಗಳು (ಆಗಸ್ಟ್​ 2024) 19,190 ಯುನಿಟ್ ಬ್ರೆಝಾ ಎಸ್‌ಯುವಿಗಳನ್ನು ಮಾರಾಟ ಮಾಡಿದೆ. ಇದರಿಂದಲೇ ಈ ಕಾರಿನ ಖ್ಯಾತಿ ಎಷ್ಟಿದೆ ಎಂಬುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಗಮನಾರ್ಹವಾಗಿ 2022ರ ಹಣಕಾಸು ವರ್ಷದಲ್ಲಿ 113,751 ಯುನಿಟ್, 2023 ಹಣಕಾಸು ವರ್ಷದಲ್ಲಿ145,665 ಯುನಿಟ್ ಹಾಗೂ 2024ರ ಹಣಕಾಸು ವರ್ಷದಲ್ಲಿ 169,897 ಯುನಿಟ್ ಬ್ರೆಝಾ ಕಾರುಗಳನ್ನು ಮಾರಾಟ ಮಾಡಲಾಗಿದೆ.

Maruti Suzuki Brezza Best Selling Suv In August 2024 Rs 8 Lakh Price 25 Km Mileage 5 Seater

2025ರ ಹಣಕಾಸು ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ ಅವಧಿಯಲ್ಲಿ 78,337 ಯುನಿಟ್ ಬ್ರೆಝಾ ಕಾರುಗಳನ್ನು ಮಾರಾಟಗೊಳಿಸಲಾಗಿದ್ದು, ತಿಂಗಳಿಗೆ ಸರಾಸರಿ 15,667 ಯುನಿಟ್ ಮಾರಾಟವಾಗಿವೆ. ಈ ಎಸ್‌ಯುವಿಗೆ ಭಾರಿ ಬೇಡಿಕೆಯಿರುವುದರಿಂದ ಕಾಯುವಿಕೆ ಅವಧಿ ಕೂಡ ಸ್ವಲ್ಪ ಹೆಚ್ಚಾಗಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ವಿತರಣೆಯಾಗಲು 42 ರಿಂದ 238 ದಿನಗಳು ಬೇಕಾಗುತ್ತವೆ.

ಸದ್ಯ ದೇಶೀಯವಾಗಿ ಹೊಚ್ಚ ಹೊಸ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಎಸ್‌ಯುವಿ ರೂ.8.34 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ಝಡ್ಎಕ್ಸ್ಐ ಸೇರಿದಂತೆ ವಿವಿಧ ರೂಪಾಂತರಗಳನ್ನು ಹೊಂದಿದ್ದು, ಹಲವು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಪಡೆದಿದೆ.

Maruti Suzuki Brezza Best Selling Suv In August 2024 Rs 8 Lakh Price 25 Km Mileage 5 Seater

ಈ ಕಾರು 1.5-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 17.38 ರಿಂದ 25.51 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಎಫ್‌ಡಬ್ಲ್ಯೂಡಿ (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

ನೂತನ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 328 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

Maruti Suzuki Brezza Best Selling Suv In August 2024 Rs 8 Lakh Price 25 Km Mileage 5 Seater

ಹೊಸ ಕಾರು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, 6-ಸ್ಪೀಕರ್ ಸೆಟಪ್, ಸನ್‌ರೂಫ್, ಕ್ರೂಸ್ ಕಂಟ್ರೋಲ್ ಹಾಗೂ ಆಟೋಮೆಟಿಕ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌, ಸೀಟ್ ಬೆಲ್ಟ್ ರಿಮೈಂಡರ್ಸ್, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, September 3, 2024, 14:58 [IST]
English summary
Maruti suzuki brezza best selling suv in august 2024 rs 8 lakh price 25 km mileage 5 seater
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+