25 Km ಮೈಲೇಜ್.. 8 ಲಕ್ಷ.. ಈ ಪ್ರಖ್ಯಾತ ಮಾರುತಿ ಕಾರನ್ನು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?

ಮಾರುತಿ ಸುಜುಕಿ ಇಂಡಿಯಾ (Maruti Suzuki India) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಕಂಪನಿಯು ಅರೆನಾ ಡೀಲರ್‌ಶಿಪ್ (Arena Dealership) ಮೂಲಕ ಮಾರಾಟಗೊಳಿಸುವ ಬ್ರೆಝಾ (Brezza) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ಭಾರಿ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ನೀವು ದೀಪಾವಳಿ ಹಬ್ಬಕ್ಕೆ ಹೊಸ ಕಾರನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ 'ಬ್ರೆಝಾ' ಉತ್ತಮ ಆಯ್ಕೆಯಾಗಲಿದೆ. ನಾವಿಲ್ಲಿ ಈ ಕಾರಿನ ಆನ್-ರೋಡ್ ಬೆಲೆ, ಮೈಲೇಜ್ ಹಾಗೂ ಇಎಂಐ ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

ಬೆಂಗಳೂರಿನಲ್ಲಿ ನೂತನ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಎಸ್‌ಯುವಿ ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಎಲ್ಎಕ್ಸ್ಐ (LXi) ಪೆಟ್ರೋಲ್ ರೂಪಾಂತರ, ರೂ.9.97 ಲಕ್ಷ ಆನ್-ರೋಡ್ ಬೆಲೆ ಹೊಂದಿದೆ. ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಈ ಕಾರನ್ನು ಖರೀದಿಸಿದರೆ, ರೂ.7.97 ಲಕ್ಷ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.16,179 ಇಎಂಐ ಕಟ್ಟಬೇಕು.

Maruti Suzuki Brezza Car On Road Price Mileage And Emi Details

ಬ್ರೆಝಾ ಕಾರಿನ ಎಲ್ಎಕ್ಸ್ಐ (LXi) ಎಸ್-ಸಿಎನ್‌ಜಿ ರೂಪಾಂತರ, ರೂ.11,03 ಲಕ್ಷ ಆನ್-ರೋಡ್ ದರ ಪಡೆದಿದೆ. ಇದನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಮನೆಗೆ ತಂದರೆ, ರೂ.9.03 ಲಕ್ಷ ಸಾಲವಿರುತ್ತದೆ. 8% ಬಡ್ಡಿ ಹಾಕಿ 5 ವರ್ಷಗಳಿಗೆ (60 ತಿಂಗಳು) ಮಾಸಿಕ ರೂ.18,323 ಇಎಂಐ ಪಾವತಿ ಮಾಡಬೇಕು.

ಈ ಎಸ್‌ಯುವಿಯ ವಿಎಕ್ಸ್ಐ ಪೆಟ್ರೋಲ್ ರೂಪಾಂತರ, ರೂ.11.59 ಲಕ್ಷ ಆನ್-ರೋಡ್ ಬೆಲೆ ಒಳಗೊಂಡಿದೆ. ಈ ಕಾರನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಗ್ರಾಹಕರು ಖರೀದಿಸಿದರೆ, ರೂ.9.59 ಲಕ್ಷ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.19,449 ಇಎಂಐ ಕಟ್ಟಬೇಕು.

Maruti Suzuki Brezza Car On Road Price Mileage And Emi Details

ನೂತನ ವಿಎಕ್ಸ್ಐ (VXi) ಎಸ್-ಸಿಎನ್‌ಜಿ ರೂಪಾಂತರ, ರೂ.12.90 ಲಕ್ಷ ಆನ್-ರೋಡ್ ದರ ಹೊಂದಿದೆ. ರೂ.2 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಈ ಕಾರನ್ನು ತೆಗೆದುಕೊಂಡರೆ, ರೂ.10.90 ಲಕ್ಷ ಸಾಲವಿರುತ್ತದೆ. 8% ಬಡ್ಡಿ ಹಾಕಿ 5 ವರ್ಷದ ಅವಧಿಗೆ ಮಾಸಿಕ ರೂ.22,108 ಇಎಂಐ ಪಾವತಿಸಬೇಕು.

ಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿಯ ವಿಎಕ್ಸ್ಐ ಎಟಿ ಪೆಟ್ರೋಲ್ ರೂಪಾಂತರ, ರೂ.13.71 ಲಕ್ಷ ಆನ್-ರೋಡ್ ಬೆಲೆ ಒಳಗೊಂಡಿದೆ. ಇದನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿ ಮಾಡಿ ಖರೀದಿ ಮಾಡಿದರೆ, ರೂ.11.71 ಲಕ್ಷ ಸಾಲ ಬಾಕಿಯಿರುತ್ತದೆ. ಅದಕ್ಕೆ ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.23,749 ಇಎಂಐ ಕಟ್ಟಬೇಕು.

Maruti Suzuki Brezza Car On Road Price Mileage And Emi Details

ಹೊಸ ಸುಜುಕಿ ಬ್ರೆಝಾ ಕಾರು, 1.5-ಲೀಟರ್ ಸಾಮರ್ಥ್ಯದ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 19 ರಿಂದ 25 ಕೆಎಂಪಿಎಲ್‌ವರೆಗೆ ಮೈಲೇಜ್ ಕೂಡ ಕೊಡುತ್ತದೆ. ಇದರಲ್ಲಿ 5-ಮಂದಿ ಆರಾಮದಾಯಕವಾಗಿ ಓಡಾಟ ನಡೆಸಬಹುದು.

ಈ ಕಾರು ಬ್ರೇವ್ ಖಾಖಿ, ಪರ್ಲ್ ಮಿಡ್ನೈಟ್ ಬ್ಲಾಕ್, ಮ್ಯಾಗ್ಮಾ ಗ್ರೇ ಹಾಗೂ ಸ್ಪ್ಲೆಂಡಿಡ್ ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿಗೆ ಲಭ್ಯವಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9-ಇಂಚು), 4-ಸ್ಪೀಕರ್ ಸೌಂಡ್ ಸಿಸ್ಟಮ್, ಸಿಂಗಲ್ ಪೇನ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 360-ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ನ್ನು ಹೊಂದಿದೆ.

ನಿಮ್ಮ ಗಮನಕ್ಕೆ.. ಈ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಗಳು ನಗರದಿಂದ ನಗರಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

Article Published On: Wednesday, October 30, 2024, 10:49 [IST]
English summary
Maruti suzuki brezza car on road price mileage and emi details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+