Brezza CBG: ಮಾರುತಿ ಸುಜುಕಿ ಬ್ರೆಜ್ಜಾ ಸಿಬಿಜಿ ಕಾರು ಪ್ರದರ್ಶನ.. ಇದು ಚಲಿಸಲು ಪೆಟ್ರೋಲ್, ವಿದ್ಯುತ್ ಬೇಕಿಲ್ಲ!
ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಎಕ್ಸ್‌ಪೋ (Bharat Mobility Expo 2024)ದಲ್ಲಿ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ (Maruti Suzuki) ವ್ಯಾಗನ್ಆರ್ ಫ್ಲೆಕ್ಸ್ ಫ್ಯುಯೆಲ್ (Flex-Fuel Wagon R) ಸೇರಿದಂತೆ ವಿವಿಧ ಕಾರು ಮಾದರಿಗಳನ್ನು ಪ್ರದರ್ಶನ ಮಾಡಿದೆ.
ಈಗ, ಮಾರುತಿ ಸುಜುಕಿಯು ಜನಪ್ರಿಯ ಎಸ್‌ಯುವಿಯಾಗಿರುವ ಬ್ರೆಜ್ಜಾದ ಭವಿಷ್ಯದ ಆವೃತ್ತಿಯನ್ನು ಬಹಿರಂಗಪಡಿಸಿದೆ. ಈ ಕಾರು ಸಾಂಪ್ರದಾಯಿಕ ಇಂಧನದಿಂದ ಚಲಿಸುವುದಿಲ್ಲ. ಇದು ಸಿಬಿಜಿ (ಕಂಪ್ರೆಸ್ಸ್ಡ್ ಬಯೋಮಿಥೇನ್ ಗ್ಯಾಸ್ - Compressed Biomethane Gas) ಸಹಾಯದಿಂದ ಓಡಲಿದೆ. ಈ ಬ್ರೆಜ್ಜಾ ಸಿಬಿಜಿ ಮಾದರಿಯೂ ಎಲ್ಎಕ್ಸ್ಐ, ವಿಎಕ್ಸ್ಐ ಹಾಗೂ ಝಡ್ಎಕ್ಸ್ಐ ರೂಪಾಂತರದ ಆಯ್ಕೆಯಲ್ಲಿ ಸಿಗುವ ಸಾಧ್ಯತೆಯಿದೆ.

ಮಾರುತಿ ಸುಜುಕಿ ಬ್ರೆಜ್ಜಾ ಸಿಬಿಜಿ ಕಾರು (Maruti Suzuki Brezza CBG), 1.5 - ಲೀಟರ್ 4 - ಸಿಲಿಂಡರ್ ಕೆ15ಸಿ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಸಿಎನ್‌ಜಿಯಂತೆ ಸಿಬಿಜಿ ಮಾದರಿ ಸಹ 87 ಬಿಹೆಚ್‌ಪಿ ಪವರ್, 121 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿರದ್ದು, 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಪಡೆದಿರಲಿದೆ ಎಂದು ವರದಿಯಾಗಿದೆ.
ಮಾರುತಿ ಸುಜುಕಿ ಬ್ರೆಜ್ಜಾ ಸಿಬಿಜಿ ಕಾರು ವಿನ್ಯಾಸ ಮತ್ತು ವೈಶಿಷ್ಟ್ಯದಲ್ಲಿ ಈಗಿರುವ ಮಾದರಿಯಂತೆ ಆಕರ್ಷಕವಾಗಿ ಇರಲಿದ್ದು, ಅಲ್ಪ - ಸ್ಪಲ್ವ ಬದಲಾವಣೆಯನ್ನು ಹೊಂದಿರಲಿದೆ. ಸಿಬಿಜಿ (ಕಂಪ್ರೆಸ್ಸ್ಡ್ ಬಯೋಮಿಥೇನ್ ಗ್ಯಾಸ್)ಗಾಗಿ 55 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ. ಕಂಪನಿಯು ಈ ಕಾರಿನ ಬಿಡುಗಡೆ ಹಾಗೂ ಉತ್ಪಾದನೆ ಸಂಬಂಧ ಯಾವುದೇ ಮಾಹಿತಿಯಿಲ್ಲ. ಮುಂಬರುವ ತಿಂಗಳಲ್ಲಿ ಲಾಂಚ್ ಆಗಬಹುದು.
ಹಲವರಿಗೆ ಸಿಬಿಜಿ (ಕಂಪ್ರೆಸ್ಸ್ಡ್ ಬಯೋಮಿಥೇನ್ ಗ್ಯಾಸ್) ಅಂದರೆ ಏನು ಎಂಬ ಗೊಂದಲವಿರುತ್ತದೆ. ಅದಕ್ಕೆ ಉತ್ತರ ನೀಡುವ ಸಣ್ಣ ಪ್ರಯತ್ನವನ್ನು ಮಾಡಿದ್ದೇವೆ. ಸಿಬಿಜಿ ಸಹ ಸಿಎನ್‌ಜಿಯಂತೆ ಇರುತ್ತದೆ. ಆದರೆ, ಸಿಎನ್‌ಜಿ ಪೆಟ್ರೋಲಿಯಂ ಉತ್ಪನ್ನವಾದರೆ, ಸಿಬಿಜಿಯನ್ನು ಹಸುವಿನ ಸಗಣಿ, ಕೃಷಿ ಮತ್ತು ಒಳಚರಂಡಿ ಸಂಸ್ಕರಣಾ ಘಟಕದಿಂದ ಹೊರಬರುವ ತ್ಯಾಜ್ಯದಿಂದ ತಯಾರಿಸಲಾಗುತ್ತದೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಬ್ರೆಜ್ಜಾ ಕಾರಿನ ಬಗ್ಗೆ ಹೇಳುವುದಾದರೆ, ಇದು ರೂ.8.34 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಒಳಗೊಂಡಂತೆ 4 ರೂಪಾಂತರ, ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ, ಪರ್ಲ್ ಮಿಡ್ನೈಟ್ ಬ್ಲಾಕ್ ಸೇರಿದಂತೆ ವಿವಿಧ ರೂಪಾಂತರ ಆಯ್ಕೆಯಲ್ಲಿ ಸಿಗುತ್ತದೆ.
ಈ ಮಾರುತಿ ಸುಜುಕಿ ಬ್ರೆಜ್ಜಾ ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್ ಟ್ರೇನ್ ಹೊಂದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ. 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, ಪೆಟ್ರೋಲ್ ರೂಪಾಂತರಗಳು 17.38 ಕೆಎಂಪಿಎಲ್ - 19.8 ಕೆಎಂಪಿಎಲ್, ಸಿಎನ್‌ಜಿ ರೂಪಾಂತರಗಳು 25.51 ಕಿ.ಮೀ/ಕೆಜಿ ಮೈಲೇಜ್ ನೀಡುತ್ತವೆ.
ಬ್ರೆಜ್ಜಾ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 4-ಸ್ಪೀಕರ್ ಸೌಂಡ್ ಸಿಸ್ಟಮ್, ಪ್ಯಾಡಲ್ ಶಿಫ್ಟರ್, ಸಿಂಗಲ್ - ಪೇನ್ ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ಸಲುವಾಗಿ 6 ಏರ್‌ಬ್ಯಾಗ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications