ಮಾರುತಿ ಬ್ರೆಝಾಗೆ ಟಕ್ಕರ್‌ ಕೊಟ್ಟ Mahindra XUV 3XO: ಪವರ್‌ನಲ್ಲಿ ಒಂದು ಹಜ್ಜೆ ಮುಂದೆ, ಆದರೆ ಮೈಲೇಜ್‌?

ನಿನ್ನೆಯಷ್ಟೇ ಭಾರತದ ಹೆಮ್ಮೆಯ ಕಾರು ನಿರ್ಮಾಣ ಕಂಪನಿಯಾದ ಮಹೀಂದ್ರಾ ತನ್ನ ಹೊಸ XUV 3XO ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹಿಂದೆ ಮಾರುಕಟ್ಟೆಯಲ್ಲಿದ್ದ ಮಹೀಂದ್ರಾ XUV300 ಕಾರಿನ ನವೀಕರಿಸಿದ ಮಾಡೆಲ್‌ ಆಗಿದ್ದು, ರಾಶಿ ರಾಶಿ ಅತ್ಯಾಧುನಿಕ ಫೀಚರ್‌ಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಇದು ಕಾಲಿಟ್ಟಿದೆ.

ಸದ್ಯಕ್ಕೆ ಈ ಸೆಗ್ಮೆಂಟ್‌ನಲ್ಲಿ ನೆಕ್ಸಾನ್‌, ಕಿಯಾ ಸಾನೆಟ್‌, ಮಾರುತಿ ಸುಜುಕಿ ಬ್ರೆಝಾ ಕಾರುಗಳಿದ್ದು ಇಂದಿನ ಈ ಲೇಖನದಲ್ಲಿ ಮಹೀಂದ್ರಾ XUV 3XO ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರಿನ ಎಂಜಿನ್‌ ಮತ್ತು ಪರ್ಫಾಮೆನ್ಸ್‌ಗಳ ಬಗ್ಗೆ ನೋಡಲಿದ್ದೇವೆ. ಇವುಗಳ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ.

Maruti Suzuki Brezza VS Mahindra XUV 3XO Powertrain Comparison

ಹೊಸ ಮಹೀಂದ್ರಾ XUV 3XO (Mahindra XUV 3XO) ಎಸ್‍ಯುವಿಯು ವಿನ್ಯಾಸವು ಮಹೀಂದ್ರಾದ ಮುಂಬರುವ BE ಎಲೆಕ್ಟ್ರಿಕ್ ಎಸ್‍ಯುವಿಯಿಂದ ಹೆಚ್ಚು ಸ್ಫೂರ್ತಿ ಪಡೆದಿದೆ. ಈ ಹೊಸ ಎಸ್‍ಯುವಿಯಲ್ಲಿ ಮುಂಭಾಗದಲ್ಲಿ, ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್‌ಗಳು (DRL ಗಳು), ಹೊಸದಾಗಿ ವಿನ್ಯಾಸಗೊಳಿಸಲಾದ ಗ್ರಿಲ್, ದೊಡ್ಡ ಸೆಂಟ್ರಲ್ ಏರ್ ಟೆಕ್ ನೊಂದಿಗೆ ಪರಿಷ್ಕೃತ ಬಂಪರ್ ಮತ್ತು LED ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ.

ಈ ಕಾರಿನ ಎಂಜಿನ್‌ ಮತ್ತು ಪರ್ಫಾಮೆನ್ಸ್‌ ಬಗ್ಗೆ ನೋಡುವುದಾದರೆ, ಈ ಮಹೀಂದ್ರಾ XUV 3XO ಎಸ್‍ಯುವಿ 1.2 ಲೀಟರ್ ಟರ್ಬೊ ಪೆಟ್ರೋಲ್, 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಮತ್ತು 1.5 ಡೀಸೆಲ್ ಎಂಜಿನ್ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 108 bhp ಮತ್ತು 200 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Maruti Suzuki Brezza VS Mahindra XUV 3XO Powertrain Comparison

ಇದರೊಂದಿಗೆ 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಎಂಜಿನ್ 129 bhp ಮತ್ತು 230 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ 115 bhp ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ.ಈ ಎಸ್‍ಯುವಿಯು 18.89 ಕಿ.ಮೀ ಮತ್ತು 20.1 ಕಿ.ಮೀ ಮೈಲೇಜ್ ನೀಡುತ್ತದೆ.

ಅದೇ ಮಾರುತಿ ಸುಜುಕಿ ಬ್ರೆಝಾ ಎಂಜಿನ್‌ ನೋಡುವುದಾದರೆ, 5- ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಎಸ್‌ಯುವಿ, 1.5 - ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 103 PS ಗರಿಷ್ಠ ಪವರ್, 137 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ.

Maruti Suzuki Brezza VS Mahindra XUV 3XO Powertrain Comparison

ಸಿಎನ್‌ಜಿ ಚಾಲಿತ ಕಾರು ಸಹ ಇದೇ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಆದರೆ, 88 PS ಪವರ್, 121.5 Nm ಪೀಕ್ ಟಾರ್ಕ್ ಉತ್ಪಾದಿಸಲಷ್ಟೇ ಶಕ್ತವಾಗಿದೆ. ಕೇವಲ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಯಲ್ಲಿ ಸಿಗುತ್ತದೆ. ಪೆಟ್ರೋಲ್ ರೂಪಾಂತರಗಳು 17.38 kmpl - 19.8 kmpl, ಸಿಎನ್‌ಜಿ ರೂಪಾಂತರಗಳು 25.51 km/kg ಮೈಲೇಜ್ ನೀಡುತ್ತವೆ.

ಪವರ್‌ ಮತ್ತು ಪರ್ಫಾಮೆನ್ಸ್ ವಿಭಾಗದಲ್ಲಿ ನೋಡಿದರೆ ಮಹೀಂದ್ರಾ ಕಾರು ಇಲ್ಲಿ ಸ್ವಲ್ಪ ಮುಂದೆ ನಿಲ್ಲುತ್ತದೆ. ಆದರೆ ಕಡಿಮೆ ಸಂಖ್ಯೆ ಈ ಅಂತರ ಹೆಚ್ಚಾಗಿ ಗೊತ್ತಾಗುವುದಿಲ್ಲ ಎಂದೇ ಹೇಳಬಹುದು. ಆದರೆ ಹೆಚ್ಚಿನ ಮೈಲೇಜ್‌ ಮತ್ತು ಮಾರುತಿ ಕಾರುಗಳ ಫ್ಯಾನ್‌ ನೀವಾಗಿದ್ದರೆ, ನಿಮಗೆ ಹೆಚ್ಚಿನ ಮೈಲೇಜ್‌ಗಾಗಿ ಸಿಎನ್‌ಜಿ ಆಯ್ಕೆ ಬೇಕು ಎಂದಾದರೆ ನೀವು ಮಾರುತಿ ಸುಜುಕಿ ಬ್ರೆಝಾ ಕಡೆ ಹೋಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, May 1, 2024, 11:00 [IST]
English summary
Maruti suzuki brezza vs mahindra xuv 3xo powertrain comparison
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+