Maruti Suzuki: ಮಾರುತಿ ಸುಜುಕಿ ಕಾರುಗಳಿಗಾಗಿ ಕ್ಯೂ ನಿಂತ ಗ್ರಾಹಕರು.. 8 ಲಕ್ಷದ ಬ್ರೆಝಾ, ಎರ್ಟಿಗಾಗಳೇ ಗೇಮ್ ಚೇಂಜರ್!

ಮಾರುತಿ ಸುಜುಕಿ ಇಂಡಿಯಾ (Maruti Suzuki India) ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಲ್ಟೊ ಕೆ10, ಸೆಲರಿಯೊ, ಸ್ವಿಫ್ಟ್, ಇಗ್ನಿಸ್, ಬಲೆನೊ, ಫ್ರಾಂಕ್ಸ್, ಸಿಯಾಜ್, ಗ್ರ್ಯಾಂಡ್ ವಿಟಾರಾ, ಎಕ್ಸ್ಎಲ್6 ಹಾಗೂ ಜಿಮ್ನಿ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಸೆಪ್ಟೆಂಬರ್ (2024) ತಿಂಗಳ ವಾಹನ ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿದೆ. ಬರೋಬ್ಬರಿ 1,84,727 ಯುನಿಟ್ (ದೇಶೀಯ ಮಾರಾಟ & ರಫ್ತು) ವಾಹನಗಳನ್ನು ಮಾರಾಟಗೊಳಿಸುವ ಮೂಲಕ ಶೇಕಡ 2% ಪ್ರಗತಿ ಸಾಧಿಸಿದೆ. 2023ರ ಇದೇ ಅವಧಿಯಲ್ಲಿ 1,81,343 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

ಮಿನಿ ಕಾರುಗಳಾದ ಆಲ್ಟೊ ಕೆ10 (Alto K10) ಮತ್ತು ಎಸ್-ಪ್ರೆಸ್ಸೊ (S-Presso) ಮಾರಾಟದಲ್ಲಿ ಕಂಪನಿಯು ಸ್ಥಿರತೆ ಕಾಯ್ದುಕೊಂಡಿದೆ. 2023ರ ಸೆಪ್ಟೆಂಬರ್‌ನಲ್ಲಿ ಮಾರಾಟ ಮಾಡಿದ 10,351 ಯುನಿಟ್‌ಗೆ ಹೋಲಿಕೆ ಮಾಡಿದರೆ, ಕಳೆದ ತಿಂಗಳು (ಸೆಪ್ಟೆಂಬರ್ 2024) ಸರಿ ಸುಮಾರು 10,363 ಕಾರುಗಳನ್ನು ಮಾರಾಟಗೊಳಿಸುವಲ್ಲಿ ಯಶಸ್ವಿಯಾಗಿದೆ.

Maruti Suzuki Cars September 2024 Sales Report Brezza And Ertiga Become Game Changer

ಆದರೆ, ಮಾರುತಿ ಸುಜುಕಿ ಇಂಡಿಯಾ ಕಾಂಪ್ಯಾಕ್ಟ್ ಕಾರುಗಳಾದ ಬಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್, ಸ್ವಿಫ್ಟ್, ಟೂರ್ ಎಸ್ ಹಾಗೂ ವ್ಯಾಗನ್ಆರ್ ಮಾರಾಟದಲ್ಲಿ ತೀವ್ರ ಹಿನ್ನೆಡೆ ಅನುಭವಿಸಿದೆ. 2023ರ ಸೆಪ್ಟೆಂಬರ್‌ ತಿಂಗಳಲ್ಲಿ ಮಾರಾಟಗೊಳಿಸಿದ 68,551 ಯುನಿಟ್‌ಗಳಿಗೆ ಹೋಲಿಸಿದರೆ, ಈ ವರ್ಷದ ಸೆಪ್ಟೆಂಬರ್‌ನಲ್ಲಿ 60,480 ಯುನಿಟ್‌ಗೆ ಕುಸಿತವಾಗಿದೆ.

ಯುಟಿಲಿಟಿ ವೆಹಿಕಲ್ (ಎಸ್‌ಯುವಿ & ಎಂಪಿವಿ) ಮಾರಾಟದಲ್ಲಿ ಮಾತ್ರ ಕಂಪನಿಯು ಉತ್ತಮವಾದ ಪ್ರಗತಿ ಸಾಧಿಸಿದೆ. ಈ ಸೆಪ್ಟೆಂಬರ್‌ನಲ್ಲಿ 61,549 ಯುನಿಟ್‌ ಯುಟಿಲಿಟಿ ವೆಹಿಕಲ್‌ಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ 59,272 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 4% ಅಭಿವೃದ್ಧಿ ಕಂಡಿದೆ. ಈ ವಿಭಾಗದಲ್ಲಿ ಬ್ರೆಝಾ, ಎರ್ಟಿಗಾ, ಗ್ರ್ಯಾಂಡ್ ವಿಟಾರಾ ಮತ್ತು ಎಕ್ಸ್‌ಎಲ್6 ಕಾರುಗಳು ಭಾರಿ ಸಂಖ್ಯೆಯಲ್ಲಿ ಮಾರಾಟವಾಗಿವೆ.

Maruti Suzuki Cars September 2024 Sales Report Brezza And Ertiga Become Game Changer

ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಇಕೋ (Eeco) ವ್ಯಾನ್‌ ಕೂಡ ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗಿದೆ. ಕಳೆದ ತಿಂಗಳು (ಸೆಪ್ಟೆಂಬರ್ 2024) ಬರೋಬ್ಬರಿ 11,908 ಯುನಿಟ್ ಇಕೋ ವ್ಯಾನ್‌ಗಳನ್ನು ಮಾರಾಟ ಮಾಡಲಾಗಿದೆ. 2023ರ ಸೆಪ್ಟೆಂಬರ್ 11,147 ಯುನಿಟ್‌ನ್ನು ಮಾರಾಟಗೊಳಿಸಲಾಗಿತ್ತು. ವಿದೇಶಕ್ಕೂ 27,728 ಯುನಿಟ್‌ ವಾಹನಗಳನ್ನು ರಫ್ತು ಮಾಡಲಾಗಿದ್ದು, 3,099 ಯುನಿಟ್ ವಾಣಿಜ್ಯ ವಾಹನಗಳನ್ನು (Commercial Vehicle) ಮಾರಾಟ ಮಾಡಿದೆ.

ಮಾರುತಿ ಸುಜುಕಿ ಈ ಮಟ್ಟದಲ್ಲಿ ಪ್ರಗತಿ ಸಾಧಿಸಲು ಬ್ರೆಝಾ ಹಾಗೂ ಎರ್ಟಿಗಾ ಕಾರುಗಳು ಪ್ರಮುಖವಾದ ಕಾರಣವಾಗಿವೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿ (Maruti Suzuki Brezza Suv) ರೂ.8.34 ರಿಂದ ರೂ.14.14 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 1.5-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಹೊಂದಿದ್ದು, 17.38 ರಿಂದ 25.51 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ (Maruti Suzuki Ertiga Mpv) ಬಗ್ಗೆ ಹೇಳುವುದಾದರೆ, ಈ ಕಾರು ರೂ.8.69 ರಿಂದ ರೂ.13.03 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. 1.5-ಲೀಟರ್ ಪೆಟ್ರೋಲ್ ಸಿಎನ್‌ಜಿ ಎಂಜಿನ್ ಪಡೆದಿದ್ದು, 20.51 ರಿಂದ 26.11 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (7-ಇಂಚು) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 8, 2024, 11:03 [IST]
English summary
Maruti suzuki cars september 2024 sales report brezza and ertiga become game changer
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+