ಹೆಚ್ಚು ಮೈಲೇಜ್ ನೀಡುವ ಬೆಸ್ಟ್ ಬಜೆಟ್ ಕಾರು.. ಲೀಟರ್‌ಗೆ 26 ಕಿ.ಮೀ.. ಬೆಲೆ ತುಂಬಾ ಕಡಿಮೆ!

ಭಾರತದಲ್ಲಿ ಒಂದು ಕಾಲದಲ್ಲಿ ಕಾರು ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಕಾರನ್ನು ಅವಶ್ಯಕತೆ ಮತ್ತು ಸ್ಥಿತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕ್ರಮದಲ್ಲಿ ವಿವಿಧ ಕಾರು ಕಂಪನಿಗಳು ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಫೀಚರ್‌ಗಳು ಇರುವ ವಾಹನಗಳನ್ನು ತಯಾರಿಸಿ ಮಾರಾಟವನ್ನು ಹೆಚ್ಚಿಸಿಕೊಂಡಿವೆ.

ವಾಹನಗಳು ಎಷ್ಟೇ ಅಗ್ಗವಾಗಿ ಸಿಗಲಿ ಜನ ಮಾತ್ರ ಮೊದಲು ನೋಡುವುದು ಅದರ ಮೈಲೇಜ್, ಮಧ್ಯಮ ವರ್ಗದ ಜನರು ಬಜೆಟ್ ಬೆಲೆಯಲ್ಲಿ ಬೆಸ್ಟ್ ಮೈಲೇಜ್ ನೀಡುವ ಕಾರಿಗೆ ಹೆಚ್ಚಾಗಿ ಆದ್ಯತೆ ನೀಡುತ್ತಾರೆ. ಅಂಥವರಿಗಾಗಿ ರೂ. 5 ಲಕ್ಷದೊಳಗೆ ಸಿಗುವ ಅತ್ಯುತ್ತಮ ಮೈಲೇಜ್ ಕಾರನ್ನು ಹುಡುಕಿತಂದಿದ್ದೇವೆ. ಇದು ಭಾರತದಲ್ಲಿ ಹೆಚ್ಚು ಇಂಧನ ದಕ್ಷತೆಯ ಕಾರು ಎಂದು ಗುರುತಿಸಲ್ಪಟ್ಟಿದೆ. ಅದೇ ಮಾರುತಿ ಸುಜುಕಿ ಸೆಲೆರಿಯೊ.

maruti-suzuki-celerio-best-budget-car-with-most-fuel-efficient-in-india

ಬೆಲೆ ಎಷ್ಟು?: ಮಾರುತಿ ಸುಜುಕಿ ಸೆಲೆರಿಯೊ ಬೆಲೆ ರೂ. 5.37 ಲಕ್ಷ (ಎಕ್ಸ್ ಶೋ ರೂಂ) ರೂ.ನಿಂದ ಪ್ರಾರಂಭವಾಗುತ್ತದೆ. ಟಾಪ್-ಟ್ರಿಮ್ ಬೆಲೆ ರೂ. 7.14 ಲಕ್ಷ (ಎಕ್ಸ್ ಶೋ ರೂಂ) ಇದೆ. ಮಾರುತಿ ಸುಜುಕಿ ಸೆಲೆರಿಯೊ LXi, VXi, ZXi, ZXi+ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಉಳಿದಂತೆ ಸೆಲೆರಿಯೊ 7 ಮೊನೊಟೋನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ವಾಹನವನ್ನು ಕೆಫೀನ್ ಬ್ರೌನ್, ಪರ್ಲ್ ಮಿಡ್ನೈಟ್ ಬ್ಲಾಕ್, ಗ್ಲಿಸ್ಟೆನಿಂಗ್ ಗ್ರೇ, ಸಿಲ್ಕಿ ಸಿಲ್ವರ್, ಸ್ಪೀಡಿ ಬ್ಲೂ, ಸಾಲಿಡ್ ಫೈರ್ ರೆಡ್, ಆರ್ಕ್ಟಿಕ್ ವೈಟ್ ಬಣ್ಣಗಳಲ್ಲಿ ಖರೀದಿಸಬಹುದು. ಈ ವಾಹನವು ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಟಾಟಾ ಟಿಯಾಗೊ, ಮಾರುತಿ ವ್ಯಾಗನ್ ಆರ್ ಮತ್ತು ಸಿಟ್ರೊಯೆನ್ ಸಿ3 ಮಾದರಿಗಳೊಂದಿಗೆ ಸ್ಪರ್ಧಿಸುತ್ತದೆ.

maruti-suzuki-celerio-best-budget-car-with-most-fuel-efficient-in-india

ವೈಶಿಷ್ಟ್ಯಗಳು: ಮಾರುತಿ ಸುಜುಕಿ ಸೆಲೆರಿಯೊ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು 313 ಲೀಟರ್ ಬೂಟ್ ಸ್ಪೇಸ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಕೀಲೆಸ್ ಎಂಟ್ರಿ, ಮ್ಯಾನ್ಯುವಲ್ ಎಸಿಯಂತಹ ವಿಶೇಷತೆಗಳನ್ನು ಒಳಗೊಂಡಿದೆ. ಹಾಗೆಯೇ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, EBD ಜೊತೆಗೆ ABS, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಇವೆ.

ಮೈಲೇಜ್ ಎಷ್ಟು: ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾ (ARAI) ಮಾಹಿತಿಯ ಪ್ರಕಾರ, ಮಾರುತಿ ಸುಜುಕಿ ಸೆಲೆರಿಯೊ 5-ಸ್ಪೀಡ್ AMT ರೂಪಾಂತರವು 26 kmpl ಮೈಲೇಜ್ ನೀಡುತ್ತದೆ. ಈ ಹ್ಯಾಚ್‌ಬ್ಯಾಕ್‌ನ 5-ಸ್ಪೀಡ್ MT ರೂಪಾಂತರವು 24.97 kmpl ಮೈಲೇಜ್ ಅನ್ನು ನೀಡುತ್ತದೆ ಎಂದು ಹೇಳಿದೆ.

maruti-suzuki-celerio-best-budget-car-with-most-fuel-efficient-in-india

ಎಂಜಿನ್: ಮಾರುತಿ ಸುಜುಕಿ ಸೆಲೆರಿಯೊ 1-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 67 bhp ಪವರ್ ಮತ್ತು 89 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಾಹನವು 5 ಸ್ಪೀಡ್ ಮ್ಯಾನುವಲ್ ಅಥವಾ 5 ಸ್ಪೀಡ್ AMT ಗೇರ್‌ಬಾಕ್ಸ್ ಘಟಕದೊಂದಿಗೆ ಖರೀಗೆ ಲಭ್ಯವಿದೆ.

ಅತ್ಯುತ್ತಮ ಮೈಲೇಜ್, ಸರಾಸರಿಗಿಂತ ಹೆಚ್ಚಿನ ಸುರಕ್ಷತೆ, ಸಮಂಜಸವಾದ ಬಜೆಟ್ ಈ ವಾಹನದ ಪ್ಲಸ್ ಪಾಯಿಂಟ್‌ಗಳಾಗಿವೆ. ಇದರ ಮೈನಸಸ್‌ಗಳು ಸೀಮಿತ ವೈಶಿಷ್ಟ್ಯಗಳು, ಸಾಧಾರಣ ಕಾರ್ಯಕ್ಷಮತೆ ಮತ್ತು ಸ್ಪರ್ಧಾತ್ಮಕ ಮಾದರಿಗಳಿಗಿಂತ ಕಡಿಮೆ ಪವರ್ ಇದೆ. ಆದರೆ ಹೊಸ ತಲೆಮಾರಿನ ಸೆಲೆರಿಯೊ ಅತ್ಯುತ್ತಮ ರೈಡ್ ಗುಣಮಟ್ಟದೊಂದಿಗೆ ಪ್ರಭಾವ ಬೀರುತ್ತದೆ. ಉತ್ತಮ ಬೂಟ್ ಸ್ಪೇಸ್, ​​ಎಂಜಿನ್ ಪರಿಷ್ಕರಣೆ ಮತ್ತು ಬಜೆಟ್ ಬೆಲೆಯಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟವನ್ನು ಪಡೆಯುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 24, 2024, 15:10 [IST]
English summary
Maruti suzuki celerio best budget car with most fuel efficient in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+