ಐದು ಮಂದಿ ಪ್ರಯಾಣಕ್ಕೆ ಬೆಸ್ಟ್ ಕಾರು: 34.43 ಕಿ.ಮೀ ಮೈಲೇಜ್: ಬೆಲೆ ಕೇವಲ 4.99 ಲಕ್ಷ!
ಮಾರುತಿ ಸುಜುಕಿ ನೀಡುವ ಅತ್ಯಂತ ಅಗ್ಗದ ಬೆಲೆಯ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಸೆಲೆರಿಯೊ ಕೂಡ ಒಂದು. ಐದು ಮಂದಿ ಆರಾಮವಾಗಿ ಪ್ರಯಾಣಿಸಬಹುದಾದ ಈ ಕಾರು ಉತ್ತಮ ಫೀಚರ್ಸ್ ಹಾಗೂ ಅತ್ಯುತ್ತಮ ಮೈಲೇಜ್ ನೀಡುತ್ತದೆ. ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಭಾರತದಲ್ಲಿ ರೂ. 4.99 ಲಕ್ಷದಿಂದ ರೂ. 7.04 ಲಕ್ಷ ಎಕ್ಸ್ ಶೋರೂಂ ದರವಿದ್ದು, ಮಧ್ಯಮ ಹಾಗೂ ಬಡ ವರ್ಗದ ಹಲವರ ಕಾರು ಖರೀದಿಸುವ ಕನಸನ್ನು ನನಸು ಮಾಡಿದೆ. ಪ್ರತಿ ತಿಂಗಳು ಉತ್ತಮ ಮಾರಾಟ ಕಾಣುವ ಈ ಕಾರಿನ ಕುರಿತ ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.
ಹೊಸ ಮಾರುತಿ ಸುಜುಕಿ ಸೆಲೆರಿಯೊ ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ + ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಪುಟ್ಟ ಕಾರು ಸಿಎನ್‌ಜಿ ಆಯ್ಕೆಯಲ್ಲೂ ಲಭ್ಯವಿದ್ದು, ಇದನ್ನು ವಿಎಕ್ಸ್‌ಐ ಟ್ರಿಮ್‌ನಲ್ಲಿ ಖರೀದಿಸಬಹುದು. ಸದ್ಯ ಈ ಕಾರಿಗೆ ಟಾಟಾ ಟಿಯಾಗೊ, ಮಾರುತಿ ವ್ಯಾಗನ್‌ಆರ್ ಮತ್ತು ಸಿಟ್ರನ್ ಸಿ3 ಕಾರುಗಳು ಪ್ರತಿಸ್ಪರ್ಧಿಗಳಾಗಿವೆ.

ಮಾರುತಿ ಸುಜುಕಿ ಸೆಲೆರಿಯೊ ಫೀಚರ್ಸ್: ಸಣ್ಣ ಕಾರಾದರೂ ಗ್ರಾಹಕರಿಗೆ ಮನರಂಜನೆ ನೀಡಲು 7 ಇಂಚಿನ ಟಚ್ ಸ್ಕ್ರೀನ್, ಮ್ಯಾನುವಲ್ ಎಸಿ, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್, ಕೀಲೆಸ್ ಎಂಟ್ರಿಯನ್ನು ಹೊಂದಿದೆ. ಸೆಲೆರಿಯೊದ ಬೇಸ್ ಸ್ಪೆಕ್ ಡ್ರೀಮ್ ಎಡಿಷನ್ ಪಯೋನೀರ್‌ನಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಹೆಚ್ಚುವರಿ ಸ್ಪೀಕರ್‌ಗಳನ್ನು ನೀಡಲಾಗಿದೆ.
ಮಾರುತಿ ಸುಜುಕಿ ಸೆಲೆರಿಯೊ ಸುರಕ್ಷತೆ: ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್, ಇಬಿಡಿಯೊಂದಿಗೆ ಎಬಿಎಸ್ ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಒಳಗೊಂಡಿದೆ. ಇದರ ಡ್ರೀಮ್ ಎಡಿಷನ್ ವೇರಿಯೆಂಟ್‌ನಲ್ಲಿ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಸಹ ನೀಡಲಾಗಿದ್ದು, ಸುರಕ್ಷಿತ ಪ್ರಯಾಣಕ್ಕೆ ಇವು ಸಾಕೆನಿಸುತ್ತವೆ.

ಹೊಸ ಮಾರುತಿ ಸುಜುಕಿ ಸೆಲೆರಿಯೊ ಪುಟ್ಟ ಕಾರಾದರೂ ದೂರದ ಪ್ರಯಾಣದಲ್ಲಿ ಗ್ರಾಹಕರಿಗೆ ಸಾಗಿಸಲು ಉತ್ತಮ ಬೂಟ್ ಸ್ಪೇಸ್ ನೀಡಲಾಗಿದೆ. ಇದು 313 ಲೀಟರ್ ಬೂಟ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಸೆಲೆರಿಯೊವನ್ನು ಸ್ಪೀಡಿ ಬ್ಲೂ, ಸಾಲಿಡ್ ಫೈರ್ ರೆಡ್, ಆರ್ಕ್ಟಿಕ್ ವೈಟ್ ಕೆಫೀನ್ ಬ್ರೌನ್, ಬ್ಲೂ ಬ್ಲ್ಯಾಕ್, ಗ್ಲಿಸಿಂಗ್ ಗ್ರೇ, ಸಿಲ್ಕಿ ಸಿಲ್ವರ್‌ನಂತಹ ಏಳು ಮೊನೊಟೋನ್ ಬಣ್ಣಗಳಲ್ಲಿ ಖರೀದಿಸಬಹುದು.
ಎಂಜಿನ್: ಹೊಸ ಮಾರುತಿ ಸುಜುಕಿ ಸೆಲೆರಿಯೊ 1-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 67 ಪಿಎಸ್ ಪವರ್ ಹಾಗೂ 89 ಎನ್ಎಂ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಎಎಂಟಿಯೊಂದಿಗೆ ಲಭ್ಯವಿದೆ. ಸಿಎನ್‌ಜಿ ವೇರಿಯೆಂಟ್ ಅನ್ನು ಕೇವಲ 5-ಸ್ಪೀಡ್ ಮ್ಯಾನುವಲ್‌ನಲ್ಲಿ ಮಾತ್ರ ನೀಡಲಾಗುತ್ತದೆ.

ಮೈಲೇಜ್: ಕಂಪನಿ ಹೇಳಿಕೊಂಡಿರುವಂತೆ ಹೊಸ ಮಾರುತಿ ಸುಜುಕಿ ಸೆಲೆರಿಯೊ ಪೆಟ್ರೋಲ್ ಎಂಟಿನಲ್ಲಿ 25.24 ಕಿ.ಮೀ (ವಿಎಕ್ಸ್ಐ, ಎಲ್ಎಕ್ಸ್ಐ, ಝಡ್ಎಕ್ಸ್ಐ) ಮೈಲೇಜ್ ಹಾಗೂ ಝಡ್ಎಕ್ಸ್ಐ +ನಲ್ಲಿ 24.97 ಕಿಮೀ ಮೈಲೇಜ್ ನೀಡುತ್ತದೆ. ಪೆಟ್ರೋಲ್ ಆಟೋಮ್ಯಾಟಿಕ್‌ನಲ್ಲಿ 26.68 (VXi) ಕಿ.ಮೀ ಹಾಗೂ 26 ಕಿ.ಮೀ (ZXi, ZXi+) ಮೈಲೇಜ್ ನೀಡುತ್ತದೆ. ಕೊನೆಯದಾಗಿ ಸಿಎನ್‌ಜಿನಲ್ಲಿ ಬರೋಬ್ಬರಿ 34.43 ಕಿ.ಮೀ/ಕೆ.ಜಿ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications