ಬೈಕ್‌ನ ಬೆಲೆಗೆ 5 ಸೀಟರ್‌ ಕಾರು, 35.6 ಕಿಮೀ ಮೈಲೇಜ್: ಸಾಮಾನ್ಯ ವರ್ಗದ ಬಡವರ ಅಂಬಾರಿ!

ಭಾರತೀಯ ಸಾಮಾನ್ಯ ಕುಟುಂಬಗಳಿಗೆ ಒಂದು ಕಾರು ಕೊಳ್ಳಬೇಕು ಎಂಬ ಬಹುದೊಡ್ಡ ಕನಸಿರುತ್ತದೆ. ತಮ್ಮ ಬಳಿ ಇರುವ ಅಲ್ಪ ಸ್ವಲ್ಪ ಉಳಿತಾಯದ ಹಣವನ್ನು ತೆಗೆದುಕೊಂಡು ಶೋ ರೂಮ್‌ಗೆ ಹೋದಾಗಲೇ ತಿಳಿಯುವುದು ತಮ್ಮ ತಮ್ಮ ಬಜೆಟ್‌ಗೆ ಸಿಗುವ ಕಾರುಗಳ ಆಯ್ಕೆ ಬಹಳಷ್ಟು ಕಡಿಮೆ ಎಂಬುವುದು.

ಆ ಸಂಧರ್ಭದಲ್ಲಿ ಬಡವರ ಕೈ ಹಿಡಿಯುವ ಕಾರು ನಿರ್ಮಾಣ ಕಂಪನಿ ಎಂದರೆ ಅದು ಮಾರುತಿ ಸುಜುಕಿ. ಇದರಲ್ಲಿ ಮಾರುತಿ ಸುಜುಕಿ ಸೆಲೆರಿಯೋ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಹೆಚ್ಚು ಪ್ರಸಿದ್ದವಾಗಿರುವ ಕಾರು. ತನ್ನದೇ ಆದ ವಿನ್ಯಾಸ ಮತ್ತು ಉತ್ತಮ ಮೈಲೇಜ್‌ ನೀಡುವ ಈ ಕಾರು ಮಧ್ಯಮ ವರ್ಗದ ಕುಟುಂಬದ ನೆಚ್ಚಿನ ಕಾರಾಗಿ ಬದಲಾಗಿದ್ದು, ಬಹುತೇಕರು ಈ ಕಾರನ್ನು ಕೊಳ್ಳುವಲ್ಲಿ ಮನಸ್ಸು ಮಾಡುತ್ತಿದ್ದಾರೆ.

Maruti Suzuki Celerio Spacious 5-seater top mileage and budget-friendly pricing

ಈ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರನ್ನು (Maruti Suzuki Celerio) ಕೊಳ್ಳಲು ಇರುವ ಪ್ರಮುಖ ಕಾರಣಗಳು ಹಲವು. ಇದರಲ್ಲಿ ಮೊದಲನೆಯದು ಇದರ ಬೆಲೆ. ರಾಯಲ್‌ ಎನ್‌ಫೀಲ್ಡ್‌ ಕಂಪನಿಯ ಬೈಕ್‌ಗಳಿಗಿಂತ ಈ ಬೈಕ್‌ನ ಬೆಲೆ ಕಮ್ಮಿ ಎನ್ನಬಹುದು. ಈ ಕಾರು ನಿಮಗೆ ಸುಮಾರು 5 ಲಕ್ಷ ರೂ ಆಸುಪಾಸಿನಲ್ಲಿ ಆರಂಭವಾಗುತ್ತದೆ.

ಮಾರುತಿ ಸುಜುಕಿ ಸೆಲೆರಿಯೊ ಬೆಲೆ ರೂ. 5.37 ಲಕ್ಷ (ಎಕ್ಸ್ ಶೋ ರೂಂ) ರೂ.ನಿಂದ ಪ್ರಾರಂಭವಾಗುತ್ತದೆ. ಟಾಪ್-ಟ್ರಿಮ್ ಬೆಲೆ ರೂ. 7.14 ಲಕ್ಷ (ಎಕ್ಸ್ ಶೋ ರೂಂ) ಇದೆ. ಮಾರುತಿ ಸುಜುಕಿ ಸೆಲೆರಿಯೊ LXi, VXi, ZXi, ZXi+ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಉಳಿದಂತೆ ಸೆಲೆರಿಯೊ 7 ಮೊನೊಟೋನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Maruti Suzuki Celerio Spacious 5-seater top mileage and budget-friendly pricing

ಈ ಕಾರು ಸಾಮಾನ್ಯ ಜನರಿಗೆ ಇಷ್ಟವಾಗಲು ಮತ್ತೊಂದು ಕಾರಣವೇನು ಎಂದರೆ, ಇದರ ಮೈಲೇಜ್‌. ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾ (ARAI) ಮಾಹಿತಿಯ ಪ್ರಕಾರ, ಮಾರುತಿ ಸುಜುಕಿ ಸೆಲೆರಿಯೊ 5-ಸ್ಪೀಡ್ AMT ರೂಪಾಂತರವು 26 kmpl ಮೈಲೇಜ್ ನೀಡುತ್ತದೆ. ಈ ಹ್ಯಾಚ್‌ಬ್ಯಾಕ್‌ನ 5-ಸ್ಪೀಡ್ MT ರೂಪಾಂತರವು 24.97 kmpl ಮೈಲೇಜ್ ಅನ್ನು ನೀಡುತ್ತದೆ ಎಂದು ಹೇಳಿದೆ.

ಇದೇ ಕಾರಿನ ಸಿಎನ್‌ಜಿ ವೇರಿಯಂಟ್ ಪ್ರತೀ ಕೆಜಿ‌ಗೆ ಸುಮಾರು 35.6 ಕಿಮೀ ಸಿಗುತ್ತದೆ. ಸಾಧಾರಣವಾಗಿರುವ ಒಂದು ಸಾಮಾನ್ಯ ಕುಟುಂಬಕ್ಕೆ ಈ ಮೈಲೇಜ್‌ ವರದಾನವೇ ಎನ್ನಬಹುದು. ಅತ್ಯುತ್ತಮ ಮೈಲೇಜ್, ಸರಾಸರಿಗಿಂತ ಹೆಚ್ಚಿನ ಸುರಕ್ಷತೆ, ಸಮಂಜಸವಾದ ಬಜೆಟ್ ಈ ವಾಹನದ ಪ್ಲಸ್ ಪಾಯಿಂಟ್‌ಗಳಾಗಿವೆ. ಇದರ ಮೈನಸ್‌ಗಳು ಸೀಮಿತ ವೈಶಿಷ್ಟ್ಯಗಳು, ಸಾಧಾರಣ ಕಾರ್ಯಕ್ಷಮತೆ ಮತ್ತು ಸ್ಪರ್ಧಾತ್ಮಕ ಮಾದರಿಗಳಿಗಿಂತ ಕಡಿಮೆ ಪವರ. ಆದರೆ ಹೊಸ ತಲೆಮಾರಿನ ಸೆಲೆರಿಯೊ ಅತ್ಯುತ್ತಮ ರೈಡ್ ಗುಣಮಟ್ಟದೊಂದಿಗೆ ಪ್ರಭಾವ ಬೀರುತ್ತದೆ.

Maruti Suzuki Celerio Spacious 5-seater top mileage and budget-friendly pricing

ಮಾರುತಿ ಸುಜುಕಿ ಸೆಲೆರಿಯೊ 1-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 67 bhp ಪವರ್ ಮತ್ತು 89 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಾಹನವು 5 ಸ್ಪೀಡ್ ಮ್ಯಾನುವಲ್ ಅಥವಾ 5 ಸ್ಪೀಡ್ AMT ಗೇರ್‌ಬಾಕ್ಸ್ ಘಟಕದೊಂದಿಗೆ ಖರೀಗೆ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, March 7, 2024, 11:22 [IST]
English summary
Maruti suzuki celerio spacious 5 seater top mileage and budget friendly pricing
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+