34 ಕಿ.ಮೀ ಮೈಲೇಜ್ ನೀಡುವ ಬೆಸ್ಟ್ ಮಾರುತಿ ಕಾರು: ಬೆಲೆ ಕೇವಲ 4.99 ಲಕ್ಷ!
ಐದು ಮಂದಿ ಆರಾಮವಾಗಿ ಪ್ರಯಾಣಿಸಬಹುದಾದ ಈ ಕಾರು ಉತ್ತಮ ಫೀಚರ್ಸ್ ಹಾಗೂ ಅತ್ಯುತ್ತಮ ಮೈಲೇಜ್ ನೀಡುತ್ತದೆ. ಪ್ರತಿ ತಿಂಗಳು ಉತ್ತಮ ಮಾರಾಟ ಕಾಣುವ ಈ ಕಾರಿನ ಬೆಲೆಯು ಕೇವಲ ರೂ. 4.99 ಲಕ್ಷದಿಂದ ರೂ. 7.04 ಲಕ್ಷ ಎಕ್ಸ್ ಶೋರೂಂ ದರವಿದ್ದು, ಸದ್ಯ ಭಾರತದಲ್ಲಿ ಬೆಸ್ಟ್ ಮಾರುತಿ ಸುಜುಕಿ ಕಾರು ಎನಿಸಿಕೊಂಡಿದೆ. ಅಷ್ಟಕ್ಕು ಈ ಕಾರು ಯಾವುದು ಗೊತ್ತಾ ಮಾರುತಿ ಸುಜುಕಿ ನೀಡುವ ಅತ್ಯಂತ ಅಗ್ಗದ ಬೆಲೆಯ ಹ್ಯಾಚ್‌ಬ್ಯಾಕ್ ಸೆಲೆರಿಯೊ. ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಕುರಿತ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಹೊಸ ಮಾರುತಿ ಸುಜುಕಿ ಸೆಲೆರಿಯೊ 313 ಲೀಟರ್ ಬೂಟ್ ಸಾಮರ್ಥ್ಯವನ್ನು ಹೊಂದಿದ್ದು, ಪುಟ್ಟ ಕಾರಾದರೂ ದೂರದ ಪ್ರಯಾಣದಲ್ಲಿ ಗ್ರಾಹಕರಿಗೆ ಸಾಗಿಸಲು ಉತ್ತಮ ಬೂಟ್ ಸ್ಪೇಸ್ ನೀಡಲಾಗಿದೆ. ಹೊಸ ಮಾರುತಿ ಸುಜುಕಿ ಸೆಲೆರಿಯೊ ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ + ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿ ಸುಜುಕಿ ಸೆಲೆರಿಯೊ ಸುರಕ್ಷತೆ ಬಗ್ಗೆ ಹೇಳುವುದಾದರೆ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್, ಇಬಿಡಿಯೊಂದಿಗೆ ಎಬಿಎಸ್ ಒಳಗೊಂಡಿದೆ. ಇದರ ಡ್ರೀಮ್ ಎಡಿಷನ್ ವೇರಿಯೆಂಟ್‌ನಲ್ಲಿ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಸಹ ನೀಡಲಾಗಿದ್ದು, ಸುರಕ್ಷಿತ ಪ್ರಯಾಣಕ್ಕೆ ಇವು ಸಾಕೆನಿಸುತ್ತವೆ.
ಈ ಪುಟ್ಟ ಕಾರು ಸಿಎನ್‌ಜಿ ಆಯ್ಕೆಯಲ್ಲೂ ಲಭ್ಯವಿದ್ದು, ಇದನ್ನು ವಿಎಕ್ಸ್‌ಐ ಟ್ರಿಮ್‌ನಲ್ಲಿ ಖರೀದಿಸಬಹುದು. ಹಾಗೆಯೇ ಸೆಲೆರಿಯೊವನ್ನು ಸ್ಪೀಡಿ ಬ್ಲೂ, ಸಾಲಿಡ್ ಫೈರ್ ರೆಡ್, ಆರ್ಕ್ಟಿಕ್ ವೈಟ್ ಕೆಫೀನ್ ಬ್ರೌನ್, ಬ್ಲೂ ಬ್ಲ್ಯಾಕ್, ಗ್ಲಿಸಿಂಗ್ ಗ್ರೇ, ಸಿಲ್ಕಿ ಸಿಲ್ವರ್‌ನಂತಹ ಏಳು ಮೊನೊಟೋನ್ ಬಣ್ಣಗಳಲ್ಲಿ ಖರೀದಿಸಬಹುದು. ಸದ್ಯ ಈ ಕಾರಿಗೆ ಟಾಟಾ ಟಿಯಾಗೊ, ಮಾರುತಿ ವ್ಯಾಗನ್‌ಆರ್ ಮತ್ತು ಸಿಟ್ರನ್ ಸಿ3 ಕಾರುಗಳು ಪ್ರತಿಸ್ಪರ್ಧಿಗಳಾಗಿವೆ.

ಮಾರುತಿ ಸುಜುಕಿ ಸೆಲೆರಿಯೊ ಫೀಚರ್ಸ್ ಬಗ್ಗೆ ಹೇಳುವುದಾದ್ರೆ, ಸೆಲೆರಿಯೊದ ಬೇಸ್ ಸ್ಪೆಕ್ ಡ್ರೀಮ್ ಎಡಿಷನ್ ಪಯೋನೀರ್‌ನಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಹೆಚ್ಚುವರಿ ಸ್ಪೀಕರ್‌ಗಳನ್ನು ನೀಡಲಾಗಿದೆ. ಸ್ಟ್ಯಾಂಡರ್ಡ್ ಆಗಿ ಗ್ರಾಹಕರಿಗೆ ಮನರಂಜನೆ ನೀಡಲು ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್, 7 ಇಂಚಿನ ಟಚ್ ಸ್ಕ್ರೀನ್, ಮ್ಯಾನುವಲ್ ಎಸಿ, ಕೀಲೆಸ್ ಎಂಟ್ರಿಯನ್ನು ಹೊಂದಿದೆ.
5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಎಎಂಟಿಯೊಂದಿಗೆ ಲಭ್ಯವಿರುವ ಹೊಸ ಮಾರುತಿ ಸುಜುಕಿ ಸೆಲೆರಿಯೊ 1-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 67 ಪಿಎಸ್ ಪವರ್ ಹಾಗೂ 89 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಸಿಎನ್‌ಜಿ ವೇರಿಯೆಂಟ್ ಅನ್ನು ಕೇವಲ 5-ಸ್ಪೀಡ್ ಮ್ಯಾನುವಲ್‌ನಲ್ಲಿ ಮಾತ್ರ ನೀಡಲಾಗುತ್ತದೆ.

ಕಂಪನಿ ಹೇಳಿಕೊಂಡಿರುವಂತೆ ಹೊಸ ಮಾರುತಿ ಸುಜುಕಿ ಸೆಲೆರಿಯೊ ಝಡ್ಎಕ್ಸ್ಐ +ನಲ್ಲಿ 24.97 ಕಿಮೀ ಮೈಲೇಜ್ ಹಾಗೂ ಪೆಟ್ರೋಲ್ ಎಂಟಿನಲ್ಲಿ 25.24 ಕಿ.ಮೀ (ವಿಎಕ್ಸ್ಐ, ಎಲ್ಎಕ್ಸ್ಐ, ಝಡ್ಎಕ್ಸ್ಐ) ಮೈಲೇಜ್ ನೀಡುತ್ತದೆ. ಪೆಟ್ರೋಲ್ ಆಟೋಮ್ಯಾಟಿಕ್‌ನಲ್ಲಿ 26.68 (VXi) ಕಿ.ಮೀ ಹಾಗೂ 26 ಕಿ.ಮೀ (ZXi, ZXi+) ಮೈಲೇಜ್ ನೀಡುತ್ತದೆ. ಸಿಎನ್‌ಜಿನಲ್ಲಿ ಬರೋಬ್ಬರಿ 34.43 ಕಿ.ಮೀ/ಕೆ.ಜಿ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications