ಮಧ್ಯಮ ವರ್ಗಕ್ಕೆ ಭಾರೀ ಮೈಲೇಜ್‌ನ ಉಡುಗೊರೆ: ಕಡಿಮೆ ಬೆಲೆಗೆ ಸಿಗಲಿದೆ ಮಾರುತಿ ಹೈಬ್ರಿಡ್‌ ಕಾರುಗಳು!

ಮಾರುತಿ ಸುಜುಕಿ ಕಂಪನಿಯು ನಿಮಗೆಲ್ಲಾ ತಿಳಿದಿರುವಂತೆ ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆಯನ್ನು ಮಂದ ಗತಿಯಲ್ಲಿ ಸಾಗಿಸುತ್ತಿದೆ ಎಂದರೆ ತಪ್ಪಾಗಲಾರದು. ಈ ವರ್ಷ ಬಿಡುಗಡೆಯಾಗಬೇಕಿದ್ದ ಮಾರುತಿ ಸುಜುಕಿ ಇವಿಎಕ್ಸ್‌ ಎಂಬ ಎಲೆಕ್ಟ್ರಿಕ್ ಕಾರಿನ ಲಾಂಚ್‌ ಅನ್ನು ಮುಂದಿನ ವರ್ಷಕ್ಕೆ ಮುಂದಕ್ಕೆ ದೂಡಿರುವುದು ಎಲ್ಲರಿಗೂ ತಿಳಿದಿದೆ.

ಆದರೆ, ಮಾರುತಿ ಸುಜುಕಿ (Maruti Suzuki) ಅತ್ಯಂತ ಕ್ರೀಯಾಶೀಲವಾಗಿ ಮತ್ತು ತ್ವರಿತ ಗತಿಯಲ್ಲಿ ಕೆಲಸ ಮಾಡುತ್ತಿರುವುದು ಒಂದೇ ಒಂದು ವಿಷಯದಲ್ಲಿ, ಅದುವೇ ಹೈಬ್ರಿಡ್. ಹೌದು ಈಗಾಗಲೇ ಮಾರುತಿ ಸುಜುಕಿ ಭಾರತದಲ್ಲಿ ಹಲವು ಕಾರು ಮಾದರಿಗಳಲ್ಲಿ ಹೈಬ್ರಿಡ್‌ ಅನ್ನು ತಂದಿದ್ದು ಅದು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಯಶಸ್ಸನ್ನು ತಂದಿದೆ.

Maruti Suzuki Developing Affordable Hybrid cars For Indian Market

ಇದೀಗ ಬಂದಿರುವ ಮಾಹಿತಿಯ ಪ್ರಕಾರ ಮಾರುತಿ ಸುಜುಕಿ ಇನ್ನೂ ಹಲವು ಸಣ್ಣ, ಕಡಿಮೆ ಬಜೆಟ್‌ನ ಹೈಬ್ರಿಡ್‌ ಕಾರುಗಳನ್ನು ಅಭಿವೃದ್ದಿ ಪಡಿಸುತ್ತಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಸಾಮಾನ್ಯ ವರ್ಗದವರಿಗೂ ಹೈಬ್ರಿಡ್ ತಂತ್ರಜ್ಞಾನವನ್ನು ಕೈಗೆಟಕುವ ರೀತಿಯಲ್ಲಿ ಮಾಡಲಿದ್ದೇವೆ ಎಂದು ಮಾರುತಿ ಸುಜುಕಿಯ ಚೇರ್‌ ಪರ್ಸನ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈಗಾಗಲೇ ಇರುವ ಫ್ರಾಂಕ್ಸ್‌, ಬಲೇನೋ ಮುಂತಾದ ಕಾರುಗಳನ್ನು ಸದ್ಯಕ್ಕೆ ಅಭಿವೃದ್ದಿಪಡಿಸುತ್ತಿರುವ ಹೈಬ್ರಿಡ್ ಕಾರುಗಳು ಹೋಲಲಿದೆ ಎಂದು ತಿಳಿದು ಬಂದಿದೆ. ಮಾರುತಿ ಸುಜುಕಿಯು ತನ್ನ ಪೋರ್ಟ್‌ಫೋಲಿಯೊವನ್ನು ಹೆಚ್ಚಿನ ಬೆಲೆಯ ಮಧ್ಯಮ ಗಾತ್ರದ SUV ಗಳಾಗಿ ವಿಸ್ತರಿಸುತ್ತಿರುವುದರಿಂದ, ಪ್ಲಗ್-ಇನ್ ಹೈಬ್ರಿಡ್ ಕೂಡ ಭವಿಷ್ಯದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Maruti Suzuki Developing Affordable Hybrid cars For Indian Market

ಮಾರುತಿ ಸುಜುಕಿಯ MD ಹಿಶಾಹಿ ಟೇಕುಚಿ ಮಾಧ್ಯಮಗಳೊಂದಿಗೆ ಮಾತನಾಡುವ ಸಂಧರ್ಭದಲ್ಲಿ, "ಭಾರತಕ್ಕೆ ಪ್ಲಗ್-ಇನ್ ಹೈಬ್ರಿಡ್ ತಂತ್ರಜ್ಞಾನವನ್ನು ತರುವ ತಕ್ಷಣದ ಯೋಜನೆಯನ್ನು ನಾವು ಹೊಂದಿಲ್ಲ, ಆದರೆ ಇದು ತುಂಬಾ ಆಸಕ್ತಿದಾಯಕ ಪ್ರಾಜೆಕ್ಟ್ ಆಗಿದ್ದು ನಾವು ಇದನ್ನು ನಿಜವಾಗಿಯೂ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ' ಎಂದು ಹೇಳಿದರು.

ಸದ್ಯಕ್ಕೆ ಭಾರತದಲ್ಲಿ ಮಾರುತಿ ಸುಜುಕಿ ಮಾರಾಟ ಮಾಡುತ್ತಿರುವ ಹೈಬ್ರಿಡ್‌ ವಾಹನದಲ್ಲಿ ಹೆಚ್ಚು ಪ್ರಸಿದ್ದವಾಗಿರುವುದು ಮಾರುತಿ ಸುಜುಕಿ ಎರ್ಟಿಗಾ. ಅಂತರಾಷ್ಟ್ರೀಯ ಮಾರುಕಟ್ಟೆಗೆ ಹೊಸ ಎರ್ಟಿಗಾ ಕ್ರೂಸ್‌ ಹೈಬ್ರಿಡ್‌ 7-ಸೀಟರ್ ಫ್ಯಾಮಿಲಿ ಕಾರ್ ಸಹ ಬಿಡುಗಡೆ ಮಾಡಿದ್ದು ಈ ಕಾರಿಗೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Maruti Suzuki Developing Affordable Hybrid cars For Indian Market

ಕಳೆದ ಬಾರಿಯ ಎರ್ಟಿಗಾಗಿಂತ ಹೆಚ್ಚು ಸ್ಟೈಲಿಶ್‌ ಮತ್ತು ಕೊಂಚ ಅಗ್ರೆಸಿವ್‌ ಲುಕ್ ಅನ್ನು ಹೊಂದಿದೆ. ಸದ್ಯಕ್ಕೆ ಈ ಕಾರು ಪರ್ಲ್‌ ವೈಟ್‌ ಮತ್ತು ಕೂಲ್‌ ಬ್ಲಾಕ್‌ ಡ್ಯುಯಲ್‌ ಟೋನ್‌ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಾಗಲಿದೆ. ಹೆಚ್ಚಿನ ಸ್ಪೋರ್ಟಿ ನೋಟ ಈ ಕಾರಿನ ಅಂದವನ್ನು ಹೆಚ್ಚಿಸಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಇದು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲಿದೆ ಎಂದು ಭವಿಷ್ಯ ನುಡಿಯಲಾಗುತ್ತಿದೆ.

ಎರ್ಟಿಗಾ ಕ್ರೂಸ್‌ ಹೈಬ್ರಿಡ್‌ ಈ ಬಾರಿ K15B ಸ್ಮಾರ್ಟ್‌ ಹೈಬ್ರಿಡ್‌ ಎಂಜಿನ್‌ ಜೊತೆಗೆ 10ah ದೊಡ್ಡ ಬ್ಯಾಟರಿಯನ್ನು ಸಹ ಹೊಂದಿದೆ. ಇದರಿಂದಾಗಿ ಈ ಕಾರಿನಿಂದ ಉತ್ತಮ ಮೈಲೇಜ್‌ ಅನ್ನು ಸಹ ನಿರೀಕ್ಷಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ. 1.5 ಲೀಟರ್‌ ಪೆಟ್ರೋಲ್‌ ಎಂಜಿನ್‌ ಜೊತೆ ಬರುತ್ತಿದ್ದು, 104 ಪಿಎಸ್‌ ಪವರ್‌ ಮತ್ತು 138 ಎನ್‌ಎಮ್‌ ಟಾರ್ಕ್‌ ಅನ್ನು ಈ ಕಾರು ಉತ್ಪಾದಿಸಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, April 27, 2024, 10:25 [IST]
English summary
Maruti suzuki developing affordable hybrid cars for indian market
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+