6 ಲಕ್ಷಕ್ಕೆ 27 ಕಿಮೀ ಮೈಲೇಜ್: ಈ ಫ್ಯಾಮಿಲಿ ಕಾರಿನ ಇಎಂಐ, ಬೈಕ್‌ಗಿಂಲೂ ಕಡಿಮೆ ಗೊತ್ತಾ?
ಒಂದು ಕುಟುಂಬ ತಮ್ಮ ಲಗೇಜ್ ಜೊತೆಗೆ ಯಾವುದೇ ತೊಂದರೆ ಇಲ್ಲದೆ ಪ್ರಯಾಣ ಮಾಡಲು ಕಡಿಮೆ ಬೆಲೆಯಲ್ಲ ಸಿಗುವ ಕಾರ ಮಾರುತಿ ಸುಜುಕಿಯ ಇಕೋ. ಈ ಕಾರು ಭಾರತೀಯ ಮಧ್ಯಮ ವರ್ಗದವರಿಗೆ ಚಿರಪರಿಚಿತ. ಇಂದಿನ ಲೇಖನದಲ್ಲಿ ಈ ಕಾರಿನ ಇಎಂಐ ಮತ್ತು ಡೌನ್‌ಪೇಮೆಂಟ್‌ಗಳ ಕುರಿತಾಗಿ ನೋಡೋಣ ಬನ್ನಿ.
ಮೊದಲಿಗೆ ಮಾರುತಿ ಸುಜುಕಿ ಇಕೋ ಕಾರಿನ ಎಕ್ಸ್ ಶೋರೂಮ್ ಬೆಲೆ ನೋಡುವುದಾದರೆ ಸುಮಾರು 5,32,000 ಲಕ್ಷ ರೂಪಾಯಿಗಳು. ಇದಕ್ಕೆ ಕರ್ನಾಟಕದ ಆರ್‌ಟಿಒ ಟ್ಯಾಕ್ಸ್ ನೋಡುವುದಾದರೆ ಅದು ಸುಮಾರು 82,674 ರೂಪಾಯಿಗಳಷ್ಟು ಬರುತ್ತದೆ. ಈ ಕಾರಿನ ಇನ್ಸ್ಯುರೆನ್ಸ್ ಸುಮಾರು 36,162 ರೂಗಳು. ಇವೆಲ್ಲಾ ಸೇರಿ ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಇಕೋ ಸುಮಾರು 6,51,436 ರೂಗಳಿಂದ ರೂಗಳಷ್ಟಾಗುತ್ತದೆ.

ಇನ್ನು ಈ ಕಾರಿನ ಇಎಂಐ ಮತ್ತು ಕುರಿತಾಗಿ ನೋಡುವುದಾದರೆ ನೀವು ಈ ಕಾರಿಗೆ ಕನಿಷ್ಟವೆಂದರೂ 1,00,000 ರೂಗಳನ್ನು ಡೌನ್ ಪೇಮೆಂಟ್ ರೀತಿಯಲ್ಲಿ ಕಟ್ಟಬೇಕಾಗುತ್ತದೆ. ನೀವು 9.8% ಬಡ್ಡಿ ದರದಲ್ಲಿ ಸುಮಾರು ೭ ವರ್ಷಗಳ ಕಾಲಾವಧಿಗೆ ಲೋನ್ ಮಾಡಿದರೆ, ಪ್ರತೀ ತಿಂಗಳು ಸುಮಾರು 9,098 ರೂಗಳನ್ನು ಇಎಂಐ ರೂಪದಲ್ಲಿ ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ.
ಇನ್ನು ಮಾರುತಿ ಸುಜುಕಿ ಇಕೋ ಕಾರಿನ ಬಗ್ಗೆ ನ ನೋಡುವುದಾದರೆ, ಈ ಕಾರು ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ಹೇಳಿ ಮಾಡಿಸಿದ ಕಾರು ಎಂದರೆ ತಪ್ಪಾಗಲಾರದು. ಇದಕ್ಕೆ ಮೊದಲ ಕಾರಣ ಈ ಕಾರಿನಲ್ಲಿ ಸುಮಾರು ಐದರಿಂದ ಏಳು ಮಂದಿ ಆರಾಮವಾಗಿ ಕುಳಿತುಕೊಂಡು ಹೋಗಬಹುದು. ಇನ್ನೊಂದು ಕಾರಣ ಇದರ ಬೆಲೆ. ಈ ಕಾರು ನಿಮಗೆ ಸುಮಾರು 5.72 ಲಕ್ಷದಿಂದ 6.53 ಲಕ್ಷ ರೂ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಿದೆ. ಹಾಗಾಗಿ ಎರ್ಟಿಗಾ ತೆಗೆದುಕೊಳ್ಳಲು ಬಜೆಟ್ ಇಲ್ಲದೇ ಇರುವವರು ಮಾರುತಿ ಇಕೋ ಕಾರನ್ನು ಪರಿಗಣಿಸಬಹುದಾಗಿದೆ.

ಮಾರುತಿ ಸುಜುಕಿ ಇಕೋ ವ್ಯಾನ್ (Maruti Suzuki Eeco), 5-ಸೀಟರ್ ಸ್ಟ್ಯಾಂಡರ್ಡ್ (ಒ), 5-ಸೀಟರ್ ಎಸಿ (ಒ), 5-ಸೀಟರ್ ಎಸಿ ಸಿಎನ್‌ಜಿ (ಒ) ಹಾಗೂ 7-ಸೀಟರ್ ಸ್ಟ್ಯಾಂಡರ್ಡ್ (ಒ) ರೂಪಾಂತರ (Variants) ಆಯ್ಕೆಯಲ್ಲಿ ದೊರೆಯುತ್ತದೆ. ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಮಿಡ್ನೈಟ್ ಬ್ಲ್ಯಾಕ್, ಮೆಟಾಲಿಕ್ ಬ್ರಿಸ್ಕ್ ಬ್ಲೂ, ಮೆಟಾಲಿಕ್ ಸಿಲ್ಕಿ ಸಿಲ್ವರ್ ಸೇರಿದಂತೆ 5 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಈ ಮಾರುತಿ ಸುಜುಕಿ ಇಕೋ ವ್ಯಾನ್ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ನೊಂದಿಗೆ ಸಿಗುತ್ತದೆ. 1.2 - ಲೀಟರ್ ಪೆಟ್ರೋಲ್ ಎಂಜಿನ್ 81 PS ಗರಿಷ್ಠ ಪವರ್, 104.4 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 5 - ಸ್ವೀಡ್ ಮ್ಯೂನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.

ಮಧ್ಯಮ ವರ್ಗದ ನೆಚ್ಚಿನ ಕಾರೆಂದು ಕರೆಯಲು ಇನ್ನೊಂದು ಪ್ರಮುಖ ಕಾರಣ ಎಂದರೆ ಇದರ ಮೈಲೇಜ್. ಮೈಲೇಜ್ ಬಗ್ಗೆ ಹೇಳುವುದಾರೆ ಮಾರುತಿ ಸುಜುಕಿ ಈಕೊ ಪೆಟ್ರೋಲ್ ರೂಪಾಂತರ ಸುಮಾರು 19.71 kmpl ಮತ್ತು ಸಿಎನ್‌ಜಿ ರೂಪಾಂತರದಲ್ಲಿ 26.78 km/kg ಮೈಲೇಜ್ ನೀಡುತ್ತದೆ. ಇದೂ ಸಹ ಭಾರತದಲ್ಲಿ ಮಾರುತಿ ಸುಜುಕಿ ಈಕೊ ವಾಹನವನ್ನು ಜನಪ್ರಿಯ ಮಟ್ಟಕ್ಕೆ ಏರಿಸಲು ಸಹಾಯಕವಾಗಿರುವುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications