ಕೇವಲ 5.32 ಲಕ್ಷಕ್ಕೆ 7 ಸೀಟರ್ ಕಾರು: 27 ಕಿ.ಮೀ ಮೈಲೇಜ್, ದೊಡ್ಡ ಕುಟುಂಬಕ್ಕೆ ಆರಾಮ ಪ್ರಯಾಣ!
2010 ರಲ್ಲಿ ಬಿಡುಗಡೆಯಾಗಿ ಮಧ್ಯಮ ವರ್ಗದ ಫೇವರೆಟ್ ಫ್ಯಾಮಿಲಿ ಕಾರೆನಿಸಿಕೊಂಡಿರುವ ಮಾರುತಿ ಸುಜುಕಿ ಇಕೋ (Maruti Suzuki Eeco) 7 ಮಂದಿಯ ಆರಾಮ ಪ್ರಯಾಣಕ್ಕೆ ಹೇಳಿಮಾಡಿಸಿದ ಕಾರಾಗಿದೆ. ತನ್ನ ವಿಶಾಲವಾದ 7 - ಸೀಟ್ ವಿನ್ಯಾಸ, ಕೈಗೆಟುಕುವ ಬೆಲೆ ಮತ್ತು ಅತ್ಯುತ್ತಮ ಮೈಲೇಜ್‌ಗೆ ಹೆಸರುವಾಸಿಯಾಗಿದೆ. ಮಾರುತಿ ಇಕೋ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ಬೇಸ್ ವೇರಿಯೆಂಟ್ ರೂ. 5.32 ಲಕ್ಷದಿಂದ ಆರಂಭವಾಗಿ ರೂ. 6.58 ಲಕ್ಷಗಳಾಗಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಲಭ್ಯವಿದೆ.
ಮಾರುತಿ ಇಕೋ ಕಾರಿನ ಮೈಲೇಜ್ ವಿಷಯಕ್ಕೆ ಬಂದರೆ ಪೆಟ್ರೋಲ್ ಎಂಜಿನ್‌ನಲ್ಲಿ 20 - ಕಿ.ಮೀ ಮತ್ತು ಸಿಎನ್‌ಜಿನಲ್ಲಿ 27 - ಕಿ.ಮೀ ಮೈಲೇಜ್ ನೀಡಲಿದೆ. ಈ ಕಾರು 1.2 - ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 81 ಬಿಹೆಚ್ ಪವರ್ ಮತ್ತು 104.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮಾರುತಿ ಇಕೋ ಸಿಎನ್‌ಜಿ ಆವೃತ್ತಿಯ ಎಂಜಿನ್ 72 ಬಿಹೆಚ್ ಪವರ್ ಹಾಗೂ 95 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಾರುತಿ ಸುಜುಕಿ ಇಕೋ ಇದರ ಪ್ರಾಯೋಗಿಕತೆಯು ವೈಯಕ್ತಿಕ ಮತ್ತು ವಾಣಿಜ್ಯ ಬಳಕೆಗೆ ಸರಿಹೊಂದುತ್ತದೆ, ಇದು ವಿಶ್ವಾಸಾರ್ಹ ಮತ್ತು ಆರ್ಥಿಕ ಆಯ್ಕೆಯಾಗಿದೆ. ಇದು 5 - ಸೀಟರ್ ಸ್ಟ್ಯಾಂಡರ್ಡ್ (ಒ), 5 - ಸೀಟರ್ ಎಸಿ (ಒ), 5 - ಸೀಟರ್ ಎಸಿ ಸಿಎನ್‌ಜಿ (ಒ) ಮತ್ತು 7 - ಸೀಟರ್ ಸ್ಟ್ಯಾಂಡರ್ಡ್ (ಒ) ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.
ಸುರಕ್ಷತಾ ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ. ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ ಸೆಮಿ-ಡಿಜಿಟಲ್ ಸ್ಪೀಡೋಮೀಟರ್, ರಿಕ್ಲೈನಿಂಗ್ ಫ್ರಂಟ್ ಸೀಟ್‌ಗಳು, ಮ್ಯಾನುವಲ್ ಎಸಿ ಮತ್ತು 12 ವಿ ಚಾರ್ಜಿಂಗ್ ಸಾಕೆಟ್ ಪ್ರಮುಖ ವೈಶಿಷ್ಟ್ಯಗಳಾಗಿವೆ.

ವಾರಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 275 ರಿಂದ 540 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಕೂಡ ಪಡೆದಿದೆ. ಒಟ್ಟಾರೆ ಈ ಕಾರು ದೊಡ್ಡ ಕುಟುಂಬಕ್ಕೆ ಅವಸರವಾಗುವಷ್ಟು ಸ್ಥಳಾವಕಾಶದೊಂದಿಗೆ ಲಾಂಗ್‌ಡ್ರೈವ್‌ಗಳಲ್ಲಿ ಅತ್ಯುತ್ತಮ ಅನುಭವ ನೀಡುತ್ತದೆ. ಅಷ್ಟೇ ಅಲ್ಲದೇ ಇದರ ಅಗ್ಗದ ಬೆಲೆಯು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಕೈಗೆಟುಕುವ ಬೆಲೆ, ಇಂಧನ ದಕ್ಷತೆ ಮತ್ತು ಬಹುಮುಖತೆಯನ್ನು ಬಯಸುವವರಿಗೆ ಮಾರುತಿ ಸುಜುಕಿ ಇಕೋ ಸೂಕ್ತವಾಗಿದ್ದು, ಸದ್ಯ ತನ್ನ ವಿಭಾಗದಲ್ಲಿ ಮಾರುತಿ ಇಕೋ ಯಾವುದೇ ನೇರ ಪ್ರತಿಸ್ಪರ್ಧಿ ಕಾರುಗಳನ್ನು ಹೊಂದಿಲ್ಲ. ಮೆಟಾಲಿಕ್ ಗ್ಲಿಸಿಂಗ್ ಗ್ರೇ, ಬ್ಲೂಯಿಶ್ ಬ್ಲ್ಯಾಕ್, ಮೆಟಾಲಿಕ್ ಬ್ರಿಸ್ಕ್ ಬ್ಲೂ, ಮೆಟಾಲಿಕ್ ಸಿಲ್ಕಿ ಸಿಲ್ವರ್, ಸಾಲಿಡ್ ವೈಟ್ ಎಂಬ ಮೊನೊಟೋನ್ ಬಣ್ಣಗಳ ಆಯ್ಕೆಗಳೊಂದಿಗೆ ಬರುತ್ತದೆ.

ಭಾರತದಲ್ಲಿ ಬಹುತೇಕರ ಕಾರು ಖರೀದಿಸುವ ಕನಸನ್ನು ನನಸು ಮಾಡಿರುವ ಮಾರುತಿ ಸುಜುಕಿ, ತನ್ನ ಅಗ್ಗದ ಬೆಲೆಯ ಕಾರುಗಳನ್ನು ನೀಡುವ ಮೂಲಕ ಕಾರು ಮಾರಾಟದಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿಯುತ್ತಿದೆ. ಕಂಪನಿ ನೀಡುವ ಬೆಸ್ಟ್ ಫ್ಯಾಮಿಲಿ ಕಾರುಗಳಲ್ಲಿ, 2010 ರಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಇಕೋ ಸದ್ಯ ಬಡವರ ಕಾರಾಗಿ ಗುರ್ತಿಸಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications