ಕಡಿಮೆ ಬೆಲೆಯಲ್ಲಿ ಮಾರುತಿಯಿಂದ 3 ಹೊಸ ಎಲಿಕ್ಟ್ರಿಕ್ ಕಾರುಗಳು ಬಿಡುಗಡೆ ಸಜ್ಜಾಗುತ್ತಿವೆ!
ಮಾರುತಿ ಸುಜುಕಿ ಇಂಧನ ಚಾಲಿತ ವಾಹನ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆಯಾದ್ರೂ, ಎಲೆಕ್ಟ್ರಿಕ್ ವಿಭಾಗದಲ್ಲಿ ಈವೆರೆಗೆ ಒಂದು ವಾಹನವನ್ನು ಕೂಡ ಪರಿಚಯಿಸಿಲ್ಲ. ಹಾಗೆಂದು ಕಂಪನಿಗೆ ಇದರಲ್ಲಿ ಆಸಕ್ತಿಯಿಲ್ಲ ಎಂದೇನಲ್ಲ. ಸಮಯ ತೆಗೆದುಕೊಂಡು ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ನೋಡುತ್ತಿದೆ. ಬನ್ನಿ ಹಾಗಾದ್ರೆ ಯಾವೆಲ್ಲಾ ಕಾರುಗಳು ಮಾರುತಿಯಿಂದ ಸಜ್ಜಾಗಿವೆ ನೋಡೋಣ.
1. ಮಾರುತಿ ಇವಿಎಕ್ಸ್ ಎಸ್ ಯುವಿ: 2024 ರ ದ್ವಿತಿಯಾರ್ಧದಲ್ಲಿ ಮಾರುತಿ ಸುಜುಕಿ ಇವಿಎಕ್ಸ್ ಎಸ್‌ಯುವಿ (eVX SUV) ಬಿಡುಗಡೆಯಾಗಲಿದೆ. ಇದು ಗೇಮ್ ಚೇಂಜರ್ ಆಗುವ ಸಾಧ್ಯತೆಗಳಿವೆ. ಹ್ಯುಂಡೈ ಕ್ರೆಟಾ ಇವಿ ಮತ್ತು ಟಾಟಾ ಕರ್ವ್ ಇವಿಯಂತಹ ಪ್ರತಿಸ್ಪರ್ಧಿಗಳೊಂದಿಗೆ ನೇರವಾಗಿ ಸ್ಪರ್ಧಿಸಲಿದೆ. ಸುಜುಕಿ ಮತ್ತು ಟೊಯೊಟಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬಾರ್ನ್-ಎಲೆಕ್ಟ್ರಿಕ್ ಪ್ಲಾಟ್ ಫಾರ್ಮ್ ಅನ್ನು ಇದು ಆಧರಿಸಿದೆ.

ಮಾರುತಿ eVX SUV, 48 ಕಿಲೋವ್ಯಾಟ್ ಮತ್ತು 60 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡುವ ನಿರೀಕ್ಷೆಯಿದೆ. ಒಮ್ಮೆ ಚಾರ್ಜ್ ಮಾಡಿದರೆ 550 ಕಿ.ಮೀ ವರೆಗೆ ರೇಂಜ್ ನೀಡಲಿದೆ. ಸುಜುಕಿಯ ಗುಜರಾತ್ ಘಟಕದಲ್ಲಿ ತಯಾರಾಗುತ್ತಿರುವ ಈ ಎಲೆಕ್ಟ್ರಿಕ್ ಎಸ್‌ಯುವಿ ಭಾರತೀಯ ಮಾರುಕಟ್ಟೆ ಮಾತ್ರವಲ್ಲದೆ ಜಪಾನ್ ಮತ್ತು ಯುರೋಪ್‌ಗೂ ರಫ್ತು ಮಾಡಲಾಗುವುದು.
2. ಕೈಗೆಟುಕುವ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್: ಮಾರುತಿ ಸುಜುಕಿ ಕಂಪನಿಯು ಬೆಸ್ಪೋಕ್ ಕೆ-ಇವಿ ಪ್ಲಾಟ್ ಫಾರ್ಮ್ ಆಧಾರಿತ ಮಾದರಿಯೊಂದಿಗೆ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಬಿಡುಗಡೆ ಮಾಡಲು ನೋಡುತ್ತಿದೆ. ಜಪಾನ್ ಮೊಬಿಲಿಟಿ ಶೋನಲ್ಲಿ ಇಡಬ್ಲ್ಯುಎಕ್ಸ್ ಪರಿಕಲ್ಪನೆಯ ಹ್ಯಾಚ್ ಬ್ಯಾಕ್ ಅನ್ನು ಪ್ರದರ್ಶಿಸಿತ್ತು. ಇದು ಟಾಟಾ ಟಿಯಾಗೊ ಇವಿಯಂತಹ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲು ಸಜ್ಜಾಗಿದೆ.

ಬ್ಯಾಟರಿ ಪ್ಯಾಕ್ ಸೇರಿದಂತೆ ಕೆ-ಇವಿ ಪ್ಲಾಟ್ ಫಾರ್ಮ್ ಅನ್ನು ಸ್ಥಳೀಕರಿಸುವ ಮೂಲಕ, ಮಾರುತಿ ಸ್ಪರ್ಧಾತ್ಮಕ ಬೆಲೆಯಲ್ಲಿ ಇದನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ. ವಿಕಸನಗೊಳ್ಳುತ್ತಿರುವ ಇವಿ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ನಂತಹ ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕಲು ಎಲ್ಲಾ ತಯಾರಿಗಳನ್ನು ನಡೆಸುತ್ತಿರುವುದು ತಿಳಿದುಬಂದಿದೆ.
3. ಮಾರುತಿ ಎಲೆಕ್ಟ್ರಿಕ್ ಎಂಪಿವಿ: ಇವಿಎಕ್ಸ್ ನಂತರ, ಮಾರುತಿ ಸುಜುಕಿ ಹೊಸ ಎಲೆಕ್ಟ್ರಿಕ್ ಎಂಪಿವಿಯನ್ನು ಸೆಪ್ಟೆಂಬರ್ 2026 ರಲ್ಲಿ ರಸ್ತೆಗಿಳಿಸಲು ಸಜ್ಜಾಗಿದೆ. ಈ 3-ಸಾಲಿನ ಎಂಪಿವಿ ಬಗ್ಗೆ ವಿವರಗಳು ಪ್ರಸ್ತುತ ವಿರಳವಾಗಿದ್ದರೂ, ಮಾರುತಿ ಸ್ಪರ್ಧಾತ್ಮಕ ಬೆಲೆಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ, ಮೌಲ್ಯ-ಚಾಲಿತ ವಾಹನಗಳನ್ನು ನೀಡುವ ನೀತಿಗೆ ಅನುಗುಣವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಮಾರುತಿ ಸುಜುಕಿಯ ದಿಟ್ಟ ಜಿಗಿತವು ಸುಸ್ಥಿರ ಚಲನಶೀಲತೆಗೆ ಬ್ರ್ಯಾಂಡ್‌ಗಳ ಬದ್ಧತೆಯನ್ನು ತೋರಿಸುತ್ತದೆ. ಪರಿಸರ ಸ್ನೇಹಿ ಸಾರಿಗೆ ಪರಿಹಾರಗಳಿಗಾಗಿ ವಿಕಸನಗೊಳ್ಳುತ್ತಿರುವ ಗ್ರಾಹಕರ ಆದ್ಯತೆಗಳೊಂದಿಗೆ ಹೊಂದಾಣಿಕೆ ಮಾಡುತ್ತಿದೆ. ವಿವಿಧ ಪವರ್‌ಟ್ರೇನ್‌ಗಳನ್ನು ಒಳಗೊಂಡಿರುವ ವೈವಿಧ್ಯಮಯ ಪೋರ್ಟ್‌ಫೋಲಿಯೊದೊಂದಿಗೆ, ಮಾರುತಿಯ "ವಿಷನ್ 3.0" ಮಾರ್ಗಸೂಚಿಯು ಭಾರತದಲ್ಲಿ ಎಲೆಕ್ಟ್ರಿಕ್ ಚಲನಶೀಲತೆಯ ಭರವಸೆಯ ಭವಿಷ್ಯವನ್ನು ಸೂಚಿಸುತ್ತಿದೆ.
ಎಲೆಕ್ಟ್ರಿಕ್ ವಾಹನಗಳು (ಇವಿಗಳು) ಭವಿಷ್ಯದ ಕಾರುಗಳಾಗಿವೆ. ಅವು ಚಲಿಸಲು ಪೆಟ್ರೋಲ್ ಅಥವಾ ಡೀಸೆಲ್ ಅಗತ್ಯವಿಲ್ಲದೆ ಸ್ವಚ್ಛ ಪರಿಸರಕ್ಕೆ ಕೊಡುಗೆ ನೀಡಲಿವೆ. ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ನಾವು ಉಸಿರಾಡುವ ಗಾಳಿಯನ್ನು ಸ್ವಚ್ಛವಾಗಿಸಲು ಎಲೆಕ್ಟ್ರಿಕ್ ವಾಹನಗಳು ಸಹಾಯ ಮಾಡುತ್ತವೆ. ಜೊತೆಗೆ ಇವು ತೆರಿಗೆ ರಿಯಾಯಿತಿಯಲ್ಲಿ ದೊರೆಯುವುದರಿಂದ ಅಗ್ಗವಾಗಿಯೂ ಸಿಗುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications