ಅಗ್ಗದ 7-ಸೀಟರ್ ಕಾರಿಗೆ ಮುಗಿಬಿದ್ದ ಜನ... 26 ಕಿ.ಮೀ ಮೈಲೇಜ್... ಮಾರಾಟದಲ್ಲಿ ನಂ.1
ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳಿಗೆ ಭರ್ಜರಿ ಬೇಡಿಕೆ ಇದೆ. ಮಾರುತಿ ಕಾರುಗಳು ಸುರಕ್ಷತೆ ವಿಚಾರದಲ್ಲಿ ಹಿಂದುಳಿದಿದ್ದರೂ, ಉಳಿದೆಲ್ಲಾ ವಿಚಾರಗಳಲ್ಲಿ ಇತರ ಬ್ರಾಂಡ್‌ಗಳಿಗೆ ಹೋಲಿಸಿಕೊಂಡರೆ ಟಾಪ್ ಸ್ಥಾನವನ್ನು ಪಡೆದಿವೆ. ಕಾರುಗಳ ಬೆಲೆಗಳಿಂದ ಹಿಡಿದು ಮೈಲೇಜ್, ನಿರ್ವಹಣೆ, ಕಂಪನಿಯ ಸೇವಾ ಜಾಲದವರೆಗೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಮಾರುತಿಯ 7-ಸೀಟರ್ ಕಾರು ವಿಚಾರಕ್ಕೆ ಬಂದರೆ ಪ್ರಮುಖವಾಗಿ ಎರ್ಟಿಗಾ ಬಗ್ಗೆ ಹೇಳಲೇಬೇಕಾಗುತ್ತದೆ. ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಮೇ 2024 ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ 7 ಸೀಟರ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೌದು, ಮಾರುತಿ ಸುಜುಕಿ ಕಂಪನಿಯು 2024ರ ಮೇ ತಿಂಗಳ ಎರ್ಟಿಗಾ ಮಾರಾಟದ ವರದಿಯನ್ನು ಬಿಡುಗಡೆಗೊಳಿಸಿದೆ. ಕಂಪನಿಯು 2024ರ ಮೇ ತಿಂಗಳಲ್ಲಿ ಎರ್ಟಿಗಾದ 13,893 ಯುನಿಟ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. 2023 ರ ಇದೇ ಮೇ ತಿಂಗಳಲ್ಲಿ ಈ ಸಂಖ್ಯೆ ಕೇವಲ 10,528 ಆಗಿತ್ತು. ಈ ಮೂಲಕ ಶೇಕಡಾ 32 ರಷ್ಟು ಬೆಳವಣಿಗೆ ಸಾಧಿಸಿದೆ.

ಈ ಮಾರಾಟ ಅಂಕಿ ಅಂಶಗಳನ್ನು ನೋಡಿದ್ರೆ ಇತರ 7 ಸೀಟರ್ ಕಾರುಗಳು ಮಾರುತಿ ಸುಜುಕಿ ಎರ್ಟಿಗಾಗೆ ಹತ್ತಿರವೂ ಇಲ್ಲ. ಆದ್ರೆ ಒಂದೇ ಒಂದು ಕಾರು ಮಾತ್ರ ಎರ್ಟಿಗಾಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಾ ಬರುತ್ತಿದೆ. ಅದೇ ಮಹೀಂದ್ರಾ ಸ್ಕಾರ್ಪಿಯೋ. ಮಹೀಂದ್ರಾ ಕಂಪನಿಯು 2024ರ ಮೇ ತಿಂಗಳಲ್ಲಿ ಸ್ಕಾರ್ಪಿಯೋದ 13,717 ಯುನಿಟ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.
ಎರ್ಟಿಗಾ ವಿಶೇಷತೆಗಳು: ಮಾರುತಿ ಸುಜುಕಿ ಎರ್ಟಿಗಾ ಮಾದರಿಯು LXi(O), VXi(O), ZXi(O), ಮತ್ತು ZXi Plus ಎಂಬ ರೂಪಾಂತರಗಳಲ್ಲಿ ಲಭ್ಯವಿದ್ದು, ಬೆಲೆಯು ರೂ. 8.69 ಲಕ್ಷದಿಂದ ಆರಂಭವಾಗಿ ರೂ. 13.03 ಲಕ್ಷವಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿವೆ. ಇದರಲ್ಲಿ ಮಾರುತಿ ಎಂಪಿವಿಯ CNG ರೂಪಾಂತರಗಳಿಗೆ ಭಾರೀ ಬೇಡಿಕೆ ಇದೆ.

ಮಾರುತಿ ಎರ್ಟಿಗಾ ಕಾರು, 1.5 ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಜೊತೆಗೆ ರೂಪಾಂತರಗಳಿಗೆ ಅನುಗುಣವಾಗಿ, 5 ಸ್ವೀಡ್ ಮ್ಯಾನುವಲ್/ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ. ಪೆಟ್ರೋಲ್ ಮ್ಯಾನುವಲ್ ರೂಪಾಂತರಗಳಲ್ಲಿ ಪ್ರತಿ ಲೀಟರ್‌ಗೆ 20.51 ಕಿ.ಮೀ ಮೈಲೇಜ್ ನೀಡುತ್ತದೆ.
ಮತ್ತೊಂದೆಡೆ, ಕಾರಿನ ಪೆಟ್ರೋಲ್ ಆಟೋಮ್ಯಾಟಿಕ್ ರೂಪಾಂತರಗಳು ಪ್ರತಿ ಲೀಟರ್‌ಗೆ 20.30 ಕಿ.ಮೀ ಮೈಲೇಜ್ ನೀಡುತ್ತವೆ. ಹಾಗೆಯೇ, ಮಾರುತಿ ಸುಜುಕಿ ಎರ್ಟಿಗಾದ ಸಿಎನ್‌ಜಿ ರೂಪಾಂತರಗಳು ಪ್ರತಿ ಕೆಜಿಗೆ 26.11 ಕಿ.ಮೀ ಮೈಲೇಜ್ ನೀಡುತ್ತವೆ. ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಕಡಿಮೆ ಬೆಲೆ, ಉತ್ತಮ ಮೈಲೇಜ್ ಮತ್ತು ಸವಾರಿ ಮಾಡಲು ಸುಲಭವಾದ ಕಾರಣ ಭಾರತದ ಅತ್ಯಂತ ಜನಪ್ರಿಯ ಎಂಪಿವಿಗಳಲ್ಲಿ ಒಂದಾಗಿದೆ.

ಸುಮಾರು 8 ಲಕ್ಷ ರೂ. ಆಸುಪಾಸಿನಲ್ಲಿ ಲಭ್ಯವಿರುವ ಈ 7 ಸೀಟರ್ ವಾಹನವು, ಒಂದು ಕುಟುಂಬಕ್ಕೆ ಆರಾಮದಾಯಕ ಪ್ರಯಾಣಕ್ಕೆ ಬೆಸ್ಟ್ ಆಯ್ಕೆ ಎಂದು ಹೇಳಬಹುದು. ಬೇಕಾಗುವಷ್ಟು ಸ್ಥಳಾವಕಾಶವನ್ನು ಈ ಕಾರು ನೀಡುತ್ತಿದ್ದು, ಬಜೆಟ್ ಫ್ರೆಂಡ್ಲಿ 7 ಸೀಟರ್ ಕಾರಾಗಿದೆ. ನೀವೇನಾದರೂ ನಿಮ್ಮ ಕುಟುಂಬದ ಜೊತೆ ಆಗಾಗ ಪ್ರಯಾಣ ಮಾಡುತ್ತೀರಿ ಎಂದರೆ ಈ ಮಾರುತಿ ಎರ್ಟಿಗಾ ಕಾರು ಉತ್ತಮ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications