7 ಜನರಿಗೆ ಆರಾಮ ಪ್ರಯಾಣ: 26 ಕಿ.ಮೀ ಮೈಲೇಜ್... ಇಷ್ಟು ಕಡಿಮೆ ಬೆಲೆಯೇ?

ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳಿಗೆ ಭರ್ಜರಿ ಬೇಡಿಕೆಯಿದೆ. ಅದರಲ್ಲೂ ಸಿಎನ್‌ಜಿ ಕಾರುಗಳ ಬಗ್ಗೆ ಹೇಳುವುದೇ ಬೇಡ, ಕಂಪನಿಯು ತನ್ನ ಬಹುತೇಕ ಎಲ್ಲಾ ಕಾರುಗಳಲ್ಲಿಯೂ CNG ಆಯ್ಕೆಯನ್ನು ನೀಡುತ್ತಿದೆ. ಬೈಕ್‌ನಂತೆ ಮೈಲೇಜ್ ನೀಡುವ ಈ CNG ಕಾರುಗಳು ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳಲ್ಲಿ ಪ್ರಮುಖವಾಗಿ ಮಾರುತಿ ಎರ್ಟಿಗಾ ಭಾರೀ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಗ್ರಾಹಕರ ಬೇಡಿಕೆಯನ್ನು ಪೂರೈಸಲಾಗದೇ ಕಂಪನಿ ಸಾವಿರಾರು ಡೆಲಿವರಿಗಳನ್ನು ಉಳಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಕಾರುಗಳ ನಿರ್ಮಾಣ ವೇಗವನ್ನು ಹೆಚ್ಚಿಸಲಾಗಿದೆ ಎಂದು ಕಂಪನಿ ಹೇಳಿದೆ.

ಮಾರುತಿ ಸುಜುಕಿ ಎರ್ಟಿಗಾ CNG (Maruti Suzuki Ertiga CNG) ಕಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಬುಕಿಂಗ್‌ಗಳು ಹೆಚ್ಚಾಗಿವೆ. 2024ರ ಜುಲೈನಲ್ಲಿ ಮಾರುತಿ ಸುಜುಕಿ ಇನ್ನೂ 43,000 ಗ್ರಾಹಕರಿಗೆ ಎರ್ಟಿಗಾ ಸಿಎನ್‌ಜಿ ಕಾರುಗಳನ್ನು ತಲುಪಿಸಬೇಕಾಗಿದೆ. 43,000 ಕ್ಕೂ ಹೆಚ್ಚು ಗ್ರಾಹಕರು ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿಯನ್ನು ಬುಕ್ ಮಾಡಿ, ವಿತರಣೆಗಾಗಿ ಕಾಯುತ್ತಿದ್ದಾರೆ.

maruti-suzuki-ertiga-cng-car-price-features-mileage-details

ಬೆಲೆ & ವಿಶೇಷತೆಗಳು: ಈ 7-ಸೀಟರ್ ಸಾಮರ್ಥ್ಯದ ಕಾರು ನಿಜಕ್ಕೂ ಹಲವು ವಿಶೇಷತೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಹೆಚ್ಚಿನ ಮೈಲೇಜ್ ಹಾಗೂ ಕಡಿಮೆ ನಿರ್ವಹಣಾ ವೆಚ್ಚವು ಕಾರಿನ ಇಷ್ಟು ಬೇಡಿಕೆಗೆ ಪ್ರಮುಖ ಕಾರಣವೆಂದು ಹೇಳಬಹುದು. ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ VXi (O) ಮತ್ತು ZXi (O) ಎಂಬ 2 ರೂಪಾಂತರಗಳಲ್ಲಿ ಲಭ್ಯವಿದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ VXi (O) ರೂಪಾಂತರದ ಬೆಲೆಯು ರೂ.10.78 ಲಕ್ಷ (ಎಕ್ಸ್ ಶೋರೂಂ)ಗಳಾದರೆ, ZXi (O) ರೂಪಾಂತರದ ಬೆಲೆಯು ರೂ.11.88 ಲಕ್ಷ (ಎಕ್ಸ್ ಶೋರೂಂ)ಗಳಾಗಿದೆ. ಆನ್ - ರೋಡ್ ಬೆಲೆ ಇದಕ್ಕಿಂತ ಸ್ವಲ್ಪ ಹೆಚ್ಚು ಬರಲಿದೆ ಎಂಬುದು ಇಲ್ಲಿ ಉಲ್ಲೇಖಿಸಬೇಕಾದ ಅಂಶವಾಗಿದೆ.

maruti-suzuki-ertiga-cng-car-price-features-mileage-details

ಮಾರುತಿ ಎರ್ಟಿಗಾ VXi (O) CNG ಎಂಜಿನ್ 1462 cc ಎಂಜಿನ್‌ನಿಂದ ಚಾಲಿತವಾಗಿದ್ದು, ಇದು ಮ್ಯಾನುಯಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ಈ ಎಂಜಿನ್ 86.63bhp ಪವರ್ ಮತ್ತು 121.5Nm ಟಾರ್ಕ್ ಉತ್ಪಾದಿಸುತ್ತದೆ. ಎರ್ಟಿಗಾದಲ್ಲಿನ ಸಿಎನ್‌ಜಿ ಎಂಜಿನ್ ಪ್ರತಿ ಕೆ.ಜಿ.ಗೆ 26.11 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ.

ಎರ್ಟಿಗಾ VXi (O) CNG ಕಾರು ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟಬಲ್ ಎಕ್ಸ್ಟೀರಿಯರ್ ರಿಯರ್ ವ್ಯೂ ಮಿರರ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ( ಎಬಿಎಸ್), ಪವರ್ ವಿಂಡೋಸ್ ರಿಯರ್, ಪವರ್ ವಿಂಡೋಸ್ ಫ್ರಂಟ್, ವೀಲ್ ಕವರ್‌ಗಳು ಸೇರಿದಂತೆ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

maruti-suzuki-ertiga-cng-car-price-features-mileage-details

ಪ್ರಸ್ತುತ ಮಾರುತಿ ಸುಜುಕಿ ಡೀಸೆಲ್ ಕಾರುಗಳನ್ನು ಮಾರಾಟ ಮಾಡುತ್ತಿಲ್ಲ. ಬದಲಾಗಿ, ಇದು ಸಿಎನ್‌ಜಿ ಎಂಜಿನ್ ಹೊಂದಿರುವ 12 ಕಾರುಗಳನ್ನು ಮಾರಾಟ ಮಾಡುತ್ತಿದೆ. ಅವುಗಳನ್ನು ನೋಡುವುದಾದ್ರೆ, XL6, ಗ್ರ್ಯಾಂಡ್ ವಿಟಾರಾ, ಫ್ರಾಂಕ್ಸ್, ಬಲೆನೊ, ಡಿಜೈರ್, ವ್ಯಾಗನ್ ಆರ್, ಬ್ರೆಝಾ, ಸೆಲೆರಿಯೊ, ಇಕೋ, ಆಲ್ಟೋ ಕೆ 10, ಎಸ್-ಪ್ರೆಸ್ಸೊ ಮತ್ತು ಎರ್ಟಿಗಾ ಸೇರಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 8, 2024, 12:10 [IST]
English summary
Maruti suzuki ertiga cng car price features mileage details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+