26 ಕಿ.ಮೀ ಮೈಲೇಜ್ ನೀಡುವ ಕಾರಿಗೆ ಮುಗಿಬಿದ್ದ ಜನ... 10 ಲಕ್ಷ ಕಾರುಗಳ ಮಾರಾಟ... ದೇಶದ ನಂ.1 MPV

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ತನ್ನ ಎರ್ಟಿಗಾ MPV (ಮಲ್ಟಿ-ಪರ್ಪಸ್ ವೆಹಿಕಲ್)ಯ 10 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲು ದಾಟಿದೆ. ಎರ್ಟಿಗಾ ಮಧ್ಯಮ ಗಾತ್ರದ MPV ವಿಭಾಗದಲ್ಲಿ ನಂ.1 ಸ್ಥಾನದಲ್ಲಿ ಮುನ್ನುಗ್ಗುತ್ತಿದ್ದು, ಅದರ ಬಲವಾದ ಪರ್ಫಾಮೆನ್ಸ್‌ನೊಂದಿಗೆ ಭಾರತೀಯ ಕುಟುಂಬಗಳ ವಿಶ್ವಾಸವನ್ನು ಗಳಿಸಿದೆ ಎಂದು Maruti Suzuki ಹೇಳಿಕೊಂಡಿದೆ.

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಅದರ ಸೊಗಸಾದ ಆಕರ್ಷಣೆ ಮತ್ತು ಸುಧಾರಿತ ತಂತ್ರಜ್ಞಾನದ ವೈಶಿಷ್ಟ್ಯಗಳು ಎರ್ಟಿಗಾ ಗ್ರಾಹಕರ ವೈವಿಧ್ಯಮಯ ಅವಶ್ಯಕತೆಗಳಿಗೆ ಸರಿಹೊಂದುವಂತೆ ವ್ಯಾಪಕ ಗ್ರಾಹಕರನ್ನು ಹೊಂದಿದೆ. ಮಾರುತಿ ಸುಜುಕಿ ಎರ್ಟಿಗಾವು ನೆಕ್ಸ್ಟ್ - ಜೆನ್ K - ಸಿರೀಸ್ 1.5L ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್ ಜೊತೆಗೆ ಪ್ರೋಗ್ರೆಸ್ಸಿವ್ ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯನ್ನು ಹೊಂದಿದೆ.

maruti-suzuki-ertiga-crosses-1-million-sales-milestone-india-s-fastest-selling-mpv

ಈ ಟೆಕ್ನಾಲಜಿ ಹೊಂದಿರುವ ಕಾರಣ ಕಾರು 20.51 km ವರೆಗೆ ಮೈಲೇಜ್ ನೀಡುತ್ತದೆ. ಹಾಗೆಯೇ CNG ಯಲ್ಲಿ ಈ ಅಂಕಿ ಅಂಶಗಳನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಬರೋಬ್ಬರಿ 26.11 km/kg ಮೈಲೇಜ್ ಹಿಂದಿರುಗಿಸುತ್ತದೆ. ಇದೇ ಕಾರಣಕ್ಕೆ ಭಾರತ ಮಾತ್ರವಲ್ಲದೆ, ಮಾರುತಿ ಸುಜುಕಿ ಎರ್ಟಿಗಾವನ್ನು ವಿಶ್ವಾದ್ಯಂತ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ಮಾರುತಿ ಸುಜುಕಿ ಎರ್ಟಿಗಾ ವಿಶೇಷತೆಗಳು: ಅರ್ಕಾಮಿಸ್ ಸರೌಂಡ್ ಸೆನ್ಸ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 17.78 cm (7-inch) ಸ್ಮಾರ್ಟ್‌ ಪ್ರೋ ಟಚ್ ಸ್ಕ್ರೀನ್ ಇನ್‌ಫೋಟೈನ್ಮೆಂಟ್ ಸಿಸ್ಟಮ್‌ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಎರ್ಟಿಗಾದ ಟಾಪ್-ಎಂಡ್ ವೇರಿಯೆಂಟ್‌ಗಳು ಗ್ರಾಹಕರಲ್ಲಿ ಸೂಪರ್ ಹಿಟ್ ಆಗಿವೆ.

maruti-suzuki-ertiga-crosses-1-million-sales-milestone-india-s-fastest-selling-mpv

ಏಕೆಂದರೆ ಈ ಟಾಪ್‌ ವೇರಿಯೆಂಟ್‌ಗಳಲ್ಲಿ ನಮಗೆ MID ಜೊತೆಗೆ ಟರ್ನ್ - ಬೈ - ಟರ್ನ್ ನ್ಯಾವಿಗೇಶನ್, ಸುಜುಕಿ ಕನೆಕ್ಟ್ 40+ ವೈಶಿಷ್ಟ್ಯಗಳೊಂದಿಗೆ, ರಿಮೋಟ್ A/C, ಆಟೋ ಹೆಡ್‌ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಮೆಷಿನ್ಡ್ ಟು-ಟೋನ್ ಅಲಾಯ್ ವೀಲ್‌ಗಳು ಸೇರಿದಂತೆ ಅನೇಕ ವೈಶಿಷ್ಟ್ಯಗಳು ಸೇರಿವೆ.

ಏರ್-ಕೂಲ್ಡ್ ಕಪ್ ಹೋಲ್ಡರ್‌ಗಳು, ಯುಟಿಲಿಟಿ ಬಾಕ್ಸ್‌ನೊಂದಿಗೆ ಮುಂಭಾಗದ ಸಾಲಿನ ಆರ್ಮ್‌ರೆಸ್ಟ್, ಬಾಟಲ್ ಹೋಲ್ಡರ್‌ಗಳು ಮತ್ತು ಪ್ರತಿ ಸಾಲಿನಲ್ಲಿನ ಆಕ್ಸೆಸರಿ ಸಾಕೆಟ್‌ಗಳಂತಹ ಯುಟಿಲಿಟಿ ಸ್ಪೇಸ್‌ಗಳಲ್ಲಿಯೂ ಎರ್ಟಿಗಾ ಹೆಚ್ಚು ಪ್ರೀಮಿಯಂ ಆಗಿದೆ. ಹಿಂಬದಿಯ ಪ್ರಯಾಣಿಕರಿಗೆ ಅಡ್ಜಸ್ಟಬಲ್ ಏರ್ ವೆಂಟ್‌ಗಳು ಮತ್ತು 3-ಸ್ಟೆಪ್ ಸ್ಪೀಡ್ ಕಂಟ್ರೋಲ್‌ನೊಂದಿಗೆ ಎರಡನೇ-ಸಾಲಿನ ರೂಫ್-ಮೌಂಟೆಡ್ ಎಸಿಯು ಎರ್ಟಿಗಾದ ರೂಮಿ ಕ್ಯಾಬಿನ್ ಹಿಂಭಾಗದ ಪ್ರಯಾಣಿಕರಿಗೂ ಆರಾಮದಾಯಕವಾಗಿಸುತ್ತದೆ.

maruti-suzuki-ertiga-crosses-1-million-sales-milestone-india-s-fastest-selling-mpv

ಮೂರನೇ ಸಾಲಿನ ಆಸನಗಳೊಂದಿಗೆ MPV ಯ ವಿಶಾಲವಾದ ಕ್ಯಾಬಿನ್ ಒರಗಿಕೊಳ್ಳುವ ಮತ್ತು ಫ್ಲಾಟ್-ಫೋಲ್ಡ್ ಫಂಕ್ಷನ್ ಮತ್ತು ಸೌಕರ್ಯದ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದಲ್ಲದೆ, ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎರ್ಟಿಗಾವನ್ನು ಗ್ರಾಹಕರಿಗೆ ಮತ್ತಷ್ಟು ಹತ್ತಿರ ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮಾರುತಿ ಸುಜುಕಿ ಇಂಡಿಯಾ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಮಾತನಾಡಿ, ಎರ್ಟಿಗಾ MPV ಮೊದಲ ಬಾರಿಗೆ ಶೇ41 ರಷ್ಟು ಗ್ರಾಹಕರನ್ನು ಹೆಚ್ಚಿಸಿದೆ, ಅದರಲ್ಲೂ ನಗರ ಗ್ರಾಹಕರು ಈ ಕಾರನ್ನು ಹೆಚ್ಚಾಗಿ ಖರೀದಿಸಿದ್ದಾರೆ. ಸ್ಟೈಲಿಶ್ ಮತ್ತು ವಿಶ್ವಾಸಾರ್ಹ ಎರ್ಟಿಗಾ ಎಂಪಿವಿ' ನಗರ ಮತ್ತು ಗ್ರಾಮೀಣ ಮಾರುಕಟ್ಟೆಗಳಲ್ಲಿ ದೇಶದಾದ್ಯಂತ ಜನಪ್ರಿಯವಾಗಿದೆ, ಶೇ 37.5 ರಷ್ಟು MPV ಸೆಗ್ಮೆಂಟ್ ಮಾರುಕಟ್ಟೆ ಪಾಲನ್ನು ಹೊಂದಿದೆ ಎಂದರು.

maruti-suzuki-ertiga-crosses-1-million-sales-milestone-india-s-fastest-selling-mpv

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, February 9, 2024, 15:30 [IST]
English summary
Maruti suzuki ertiga crosses 1 million sales milestone india s fastest selling mpv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+