8 ಲಕ್ಷ.. ಎರಡು ಕುಟುಂಬ ಪ್ರಯಾಣಿಸುವ ಎರ್ಟಿಗಾ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?

ಮಾರುತಿ ಸುಜುಕಿ ಇಂಡಿಯಾ (Maruti Suzuki India), ಅರೆನಾ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸುವ ಎರ್ಟಿಗಾ (Ertiga) ಜನಪ್ರಿಯ ಎಂಪಿವಿಯಾಗಿ ಹೊರಹೊಮ್ಮಿದೆ. ಇದೊಂದು ಫ್ಯಾಮಿಲಿ ಕಾರಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ನೀವು 'ಎರ್ಟಿಗಾ' ಎಂಪಿವಿ ಮನೆಗೆ ತರಲು ಪ್ಲ್ಯಾನ್ ಮಾಡಿದ್ದೀರಾ.. ನಾವಿಲ್ಲಿ ಈ ಕಾರಿನ ಮೈಲೇಜ್ (Mileage), ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿಯ ವಿವಿಧ ರೂಪಾಂತರಗಳು (ವೇರಿಯೆಂಟ್) ಗ್ರಾಹಕರ ಖರೀದಿಗೆ ಲಭ್ಯವಿವೆ. ಇದರ ಎಲ್ಎಕ್ಸ್ಐ (ಒ) ಪೆಟ್ರೋಲ್ ರೂಪಾಂತರ, ರೂ.10.49 ಲಕ್ಷದವರೆಗೆ ಆನ್-ರೋಡ್ ಬೆಲೆವನ್ನು ಹೊಂದಿದೆ. ರೂ.5 ಲಕ್ಷ ಡೌನ್ ಪೇಮೆಂಟ್ ಪಾವತಿ ಮಾಡಿ ಈ ಕಾರನ್ನು ಖರೀದಿ ಮಾಡಿದರೆ, ರೂ.5.50 ಲಕ್ಷದವರೆಗೆ ಸಾಲವಿರುತ್ತದೆ. ಶೇಕಡ 8% ಅಂದಾಜು ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.11,000 ವರೆಗೆ ಇಎಂಐ ಕಟ್ಟಬೇಕು.

Maruti Suzuki Ertiga Mpv Mileage Variants wise On-Road Price Emi Details

ಎರ್ಟಿಗಾ ಕಾರಿನ ವಿಎಕ್ಸ್ಐ (ಒ) ಪೆಟ್ರೋಲ್ ರೂಪಾಂತರ, ರೂ.11.85 ಲಕ್ಷದವರೆಗೆ ಆನ್-ರೋಡ್ ದರವನ್ನು ಒಳಗೊಂಡಿದೆ. ನೀವು ರೂ.5 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಈ ಕಾರನ್ನು ಮನೆಗೆ ತಂದರೆ, ರೂ.6.85 ಲಕ್ಷದವರೆಗೆ ಸಾಲ ಬಾಕಿಯಿರುತ್ತದೆ. ಅದಕ್ಕೆ 8% ಬಡ್ಡಿ ಹಾಕಿ, 5 ವರ್ಷಗಳಿಗೆ ಮಾಸಿಕ ರೂ.14,000 ವರೆಗೆ ಇಎಂಐ ಪಾವತಿಸಬೇಕು.

ನೂತನ ಎರ್ಟಿಗಾ ಎಂಪಿವಿಯ ಝಡ್ಎಕ್ಸ್ಐ (ಒ) ಪೆಟ್ರೋಲ್ ರೂಪಾಂತರ, ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ರೂ.13.65 ಲಕ್ಷದವರೆಗೆ ಆನ್-ರೋಡ್ ಬೆಲೆವನ್ನು ಹೊಂದಿದೆ. ಇದನ್ನು ರೂ.5 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಕೊಂಡುಕೊಂಡರೆ, ರೂ.8.65 ಲಕ್ಷದವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.17,500 ವರೆಗೆ ಇಎಂಐ ಪಾವತಿ ಮಾಡಬೇಕು.

Maruti Suzuki Ertiga Mpv Mileage Variants wise On-Road Price Emi Details

ಹೊಸ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯ ವಿಎಕ್ಸ್ಐ (ಒ) ಸಿಎನ್‌ಜಿ ರೂಪಾಂತರ, ರೂ.13.45 ಲಕ್ಷದವರೆಗೆ ಆನ್-ರೋಡ್ ದರವನ್ನು ಒಳಗೊಂಡಿದೆ. ಈ ಕಾರನ್ನು ರೂ.5 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಮನೆಗೆ ತಂದರೆ, ರೂ.8.45 ಲಕ್ಷದವರೆಗೆ ಸಾಲದ ಮೊತ್ತ ಬಾಕಿ ಉಳಿಯುತ್ತದೆ. ಅದಕ್ಕೆ 8% ಬಡ್ಡಿ ಹಾಕಿ, 5 ವರ್ಷದ ಅವಧಿಗೆ ಮಾಸಿಕ 17,000 ವರೆಗೆ ಇಎಂಐ ಕಟ್ಟಬೇಕು.

ಈ ಎರ್ಟಿಗಾ ಕಾರಿನ ಝಡ್ಎಕ್ಸ್ಐ (ಒ) ಸಿಎನ್‌ಜಿ ರೂಪಾಂತರ, ರೂ.14.80 ಲಕ್ಷದವರೆಗೆ ಆನ್-ರೋಡ್ ಬೆಲೆಯನ್ನು ಪಡೆದಿದೆ. ಇದನ್ನು ರೂ.5 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಖರೀದಿ ಮಾಡಿದರೆ, ರೂ.9.80 ಲಕ್ಷದವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಗಳಿಗೆ ತಿಂಗಳಿಗೆ ರೂ.20,000 ವರೆಗೆ ಇಎಂಐ ಪಾವತಿಸಬೇಕು.

Maruti Suzuki Ertiga Mpv Mileage Variants wise On-Road Price Emi Details

ನೂತನ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ವಿಶೇಷತೆ ಬಗ್ಗೆ ಹೇಳುವುದಾದರೆ, ಇದು 1.5-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಕಾರಿನ ಪೆಟ್ರೋಲ್ ಚಾಲಿತ ರೂಪಾಂತರಗಳು 20.3 ರಿಂದ 20.51 ಕೆಎಂಪಿಎಲ್ ಹಾಗೂ ಸಿಎನ್‌ಜಿ ಚಾಲಿತ ರೂಪಾಂತರಗಳು 26.11 ಕೆಎಂ/ಕೆಜಿವರೆಗೆ ಮೈಲೇಜ್ ನೀಡುತ್ತವೆ. ಇದರಲ್ಲಿ7 ಜನರು ಓಡಾಟ ನಡೆಸಬಹುದು.

ಈ ಕಾರು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (7-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪ್ಯಾಡಲ್ ಶಿಫ್ಟರ್‌, ಕ್ರೂಸ್ ಕಂಟ್ರೋಲ್ & ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 4 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಹಾಗೂ ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಪಡೆದಿದೆ.

ನಿಮ್ಮ ಗಮನಕ್ಕೆ.. ಇಲ್ಲಿ ಕೆಲವು ಮಾರುತಿ ಸುಜುಕಿ ಎರ್ಟಿಗಾ ರೂಪಾಂತರಗಳ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಕುರಿತಂತೆ ಮಾತ್ರ ತಿಳಿಸಿಕೊಟ್ಟಿದ್ದೇವೆ. ಈ ಸಂಬಂಧ ಯಾವುದೇ ಗೊಂದಲವಿದ್ದರೂ ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

Article Published On: Tuesday, November 19, 2024, 16:17 [IST]
English summary
Maruti suzuki ertiga mpv mileage variants wise on road price emi details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+