Maruti Suzuki: ಈ ಜನಪ್ರಿಯ ಫ್ಯಾಮಿಲಿ ಕಾರಿಗೆ 1 ಸ್ಟಾರ್ ಸೇಫ್ಟಿ ರೇಟಿಂಗ್.. ಯಾವುದು?

ಭಾರತದಲ್ಲಿ ತಯಾರಿಸುವ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿಯನ್ನು ಗ್ಲೋಬಲ್ ಎನ್‌ಸಿಎಪಿ (Global NCAP) ದಕ್ಷಿಣ ಆಫ್ರಿಕಾ ಮಾರುಕಟ್ಟೆಗಾಗಿ ಮರುಪರೀಕ್ಷೆಗೆ ಒಳಪಡಿಸಿದೆ. ಕಠಿಣ ಮಾನದಂಡಗಳ ಅನ್ವಯ ಸುರಕ್ಷತಾ ಪರೀಕ್ಷೆ ನಡೆಸಲಾಗಿದೆ. ಈ ಹಿಂದೆ, ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) ನೀಡಿದ್ದ 3-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು 1-ಸ್ಟಾರ್‌ಗೆ ಪರಿಷ್ಕರಿಸಲಾಗಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) ಕೂಡ 3-ಸ್ಟಾರ್ ರೇಟಿಂಗ್‌ನ್ನು 2-ಸ್ಟಾರ್‌ಗೆ ಇಳಿಸಲಾಗಿದೆ.

2019ರಲ್ಲಿ ಮಾರುತಿ ಸುಜುಕಿ ಎರ್ಟಿಗಾ ಕಾರನ್ನು ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ 3-ಸ್ಟಾರ್ ಸೇಫ್ಟಿ ರೇಟಿಂಗ್‌ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಜುಲೈ 2022ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕಟ್ಟುನಿಟ್ಟಾದ ವಾಹನ ಸುರಕ್ಷತಾ ಪರೀಕ್ಷೆ ನಿಯಮಗಳನ್ನು ರೂಪಿಸಿತ್ತು. ಸದ್ಯ, ಆ ಪ್ರಕಾರವಾಗಿ ಎರ್ಟಿಗಾವನ್ನು ಪರೀಕ್ಷಿಸಲಾಗಿದೆ. ಫಲಿತಾಂಶವು ಕೊಂಚ ನೀರಸವಾಗಿದೆ.

Maruti Suzuki Ertiga Mpv Re-Test Global Ncap 1 Star Safety Rating

2024ರ ಎರ್ಟಿಗಾ ಎಂಪಿವಿ ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 23.63 ಅಂಕ ಗಳಿಸುವ ಮೂಲಕ 1-ಸ್ಟಾರ್‌ ರೇಟಿಂಗ್ ಪಡೆದಿದೆ. ಅದೇ ರೀತಿಯಲ್ಲಿ ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 19.4 ಅಂಕ ಪಡೆದು 2-ಸ್ಟಾರ್‌ ಗಳಿಸಿದೆ. 2019ರಲ್ಲಿ ವಯಸ್ಕರ ರಕ್ಷಣೆ ವಿಭಾಗದಲ್ಲಿ 17ಕ್ಕೆ 9.25 ಅಂಕ ಗಳಿಸುವ ಮೂಲಕ 3-ಸ್ಟಾರ್ ರೇಟಿಂಗ್‌ ಪಡೆದಿತ್ತು. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 25.16 ಅಂಕ ಪಡೆದು 3-ಸ್ಟಾರ್ ರೇಟಿಂಗ್‌ನ್ನು ಹೊಂದಿತ್ತು.

ಚಾಲಕ ಹಾಗೂ ಪ್ರಯಾಣಿಕರ ತಲೆ, ಕುತ್ತಿಗೆ ಭಾಗಕ್ಕೆ ಒಳಪಡಿಸಿದ್ದ ಪರೀಕ್ಷೆಯಲ್ಲಿ ಎರ್ಟಿಗಾ ಕಾರು ಉತ್ತಮ ರಕ್ಷಣೆ ನೀಡುತ್ತಿರುವುದು ಕಂಡುಬಂತು. ಆದಾಗ್ಯೂ ಬೇರೆ ಕಡೆಗಳಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿಲ್ಲ. ಗ್ಲೋಬಲ್ ಎನ್‌ಸಿಎಪಿ ಮಾರುತಿ ಎರ್ಟಿಗಾ ಆರಂಭಿಕ ಶ್ರೇಣಿ ರೂಪಾಂತರವನ್ನು ಪರೀಕ್ಷೆಗೆ ಒಳಪಡಿಸಿದೆ ಎಂದು ವರದಿಯಾಗಿದೆ. ಇದು ಡುಯಲ್ ಏರ್‌ಬ್ಯಾಗ್‌, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್) ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಐಎಸ್‌ಒಫಿಕ್ಸ್ ಚೈಲ್ಡ್-ಸೀಟ್ ಮೌಂಟ್‌ಗಳನ್ನು ಹೊಂದಿದೆ.

Maruti Suzuki Ertiga Mpv Re-Test Global Ncap 1 Star Safety Rating

ಎರ್ಟಿಗಾದ ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಎಂಡ್ ವೇರಿಯೆಂಟ್) ಸೈಡ್ ಏರ್‌ಬ್ಯಾಗ್‌ಗಳೊಂದಿಗೆ ಒಟ್ಟು 4 ಏರ್‌ಬ್ಯಾಗ್‌ನ್ನು ಪಡೆದಿದೆ. ದೇಶದಲ್ಲಿಯೂ ವಾಹನ ಸುರಕ್ಷತಾ ತಪಾಸಣೆ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP) ಕಾರ್ಯನಿರ್ವಹಿಸುತ್ತಿದ್ದು, ಒಂದೊಮ್ಮೆ ಈ ಕಾರಿನ ಪರೀಕ್ಷೆ ನಡೆಸಿದರೆ, ಯಾವ ಸ್ಟಾರ್ ರೇಟಿಂಗ್ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ದೇಶೀಯವಾಗಿ ಮಾರುತಿ ಸುಜುಕಿ ಎರ್ಟಿಗಾ ರೂ.8.69 ಲಕ್ಷದಿಂದ ರೂ.13.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್‌ ಆಯ್ಕೆಯನ್ನು ಪಡೆದಿದೆ. ಪೆಟ್ರೋಲ್ ಮಾದರಿಗಳು 20.3 ರಿಂದ 20.51 ಕೆಎಂಪಿಎಲ್ ಹಾಗೂ ಸಿಎನ್‌ಜಿ ರೂಪಾಂತರಗಳು 26.11 ಕೆಎಂ/ಕೆಜಿ ಮೈಲೇಜ್ ಕೊಡುತ್ತವೆ.

ಈ ಕಾರು 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಸಿಗಲಿದ್ದು, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್ನೈಟ್ ಬ್ಲಾಕ್, ಪರ್ಲ್ ಆರ್ಕ್ಟಿಕ್ ವೈಟ್ ಸೇರಿದಂತೆ ವಿವಿಧ ಬಣ್ಣಗಳನ್ನು ಹೊಂದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಪ್ಯಾಡಲ್ ಶಿಫ್ಟರ್‌, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿಯಂತಹ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, July 31, 2024, 18:14 [IST]
English summary
Maruti suzuki ertiga mpv re test global ncap 1 star safety rating
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+