8.69 ಲಕ್ಷ ರೂ. ಬೆಲೆಯ ಬೆಸ್ಟ್‌ 7-ಸೀಟರ್... 26 ಕಿ.ಮೀ ಮೈಲೇಜ್, ಆಧುನಿಕ ಫೀಚರ್ಸ್!

ಭಾರತೀಯ ಆಟೋ ಉದ್ಯಮದಲ್ಲಿ ಮಾರುತಿ ಸುಜುಕಿ ನಂ.1 ಸ್ಥಾನದಲ್ಲಿ ಮುಂದುವರಿಯುತ್ತಿದೆ. ಬ್ರಾಂಡ್‌ನ ಬಹುತೇಕ ಎಲ್ಲಾ ಕಾರುಗಳು ಉತ್ತಮ ಮಾರಾಟ ಕಾಣುತ್ತವೆ, ಇನ್ನು ಮಾರುತಿಯ ಎಂಪಿವಿ ವಿಭಾಗದಲ್ಲಿ ಭಾರೀ ಹೆಸರು ಮಾಡಿರುವ ಎರ್ಟಿಗಾ ಸಖತ್ ಸದ್ದು ಮಾಡುತ್ತಿದೆ. ಕಡಿಮೆ ಬೆಲೆ, ಉತ್ತಮ ಫೀಚರ್ಸ್, ಆರಾಮದಾಯಕ ಒಳಾಂಗಣ, ಅತ್ಯುತ್ತಮ ಮೈಲೇಜ್ ಹೀಗೆ ಹಲವು ವಿಷಯಗಳಲ್ಲಿ ಕಾರು ಬೆಸ್ಟ್ ಎನಿಸಿಕೊಂಡಿದೆ. ಆದರೆ ಸುರಕ್ಷತೆಯಲ್ಲಿ ಮಾತ್ರ ಹಿಂದುಳಿದಿದೆ, ಇದೊಂದು ವಿಷಯವನ್ನು ಬಿಟ್ಟರೆ ಮಾರುತಿ ಎರ್ಟಿಗಾ ಯಾವ ವಿಷಯದಲ್ಲೂ ಗ್ರಾಹಕರನ್ನು ನಿರಾಸೆಗೊಳಿಸುವುದಿಲ್ಲ. ಹಾಗಾದ್ರೆ ಈ ಫ್ಯಾಮಿಲಿ ಕಾರು ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ನೋಡೋಣ.

ಮೊದಲಿಗೆ ಈ ಕಾರು ಎಷ್ಟು ಜನಪ್ರಿಯತೆ ಪಡೆದಿದೆ ಎಂದರೆ ಭಾರತದಲ್ಲಿ ಮಾರುತಿಯ ಪಾರುದಾರರಾದ ಟೊಯೋಟಾ ಕೂಡ ಈ ಕಾರನ್ನು ರೀಬ್ಯಾಡ್ಜ್ ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಹೌದು. ಟೊಯೋಟಾ ರೂಮಿಯಾನ್ ಎಂಬ ಹೆಸರಲ್ಲಿ ಎರ್ಟಿಗಾದ ರೀಬ್ಯಾಡ್ಜ್ 7-ಸೀಟರ್ ಎಂಪಿವಿಯನ್ನು ಬಿಡುಗಡೆ ಮಾಡಿದೆ. ಈ ಕಾರು ಕೂಡ ಉತ್ತಮ ಮಾರಾಟ ಕಾಣುತ್ತಿದೆ.

maruti-suzuki-ertiga-price-features-mileage-engine-details

ಬೆಲೆ & ವೇರಿಯೆಂಟ್‌ಗಳು: ಮಾರುತಿ ಎರ್ಟಿಗಾ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.8.69 ಲಕ್ಷದಿಂದ ರೂ.13.03 ಲಕ್ಷಗಳಾಗಿದೆ. ಇದು LXi, VXi, ZXi, ಮತ್ತು ZXi+ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. VXi ಮತ್ತು ZXi ಟ್ರಿಮ್‌ಗಳು ಸಿಎನ್‌ಜಿ ಕಿಟ್‌ ಆಯ್ಕೆಯೊಂದಿಗೆ ಬರುತ್ತವೆ.

ವೈಶಿಷ್ಟ್ಯಗಳು: ಹೊಸ ಎರ್ಟಿಗಾದಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಪ್ಯಾಡಲ್ ಶಿಫ್ಟರ್‌ಗಳು, ಕ್ರೂಸ್ ಕಂಟ್ರೋಲ್, ಆಟೋ ಎಸಿ ಮತ್ತು ಎರಡನೇ ಸಾಲಿನ ಪ್ರಯಾಣಿಕರಿಗೆ ರೂಫ್-ಮೌಂಟೆಡ್ ಎಸಿ ವೆಂಟ್‌ಗಳನ್ನು ಒಳಗೊಂಡಿದೆ.

maruti-suzuki-ertiga-price-features-mileage-engine-details

ಎಂಜಿನ್ & ಮೈಲೇಜ್: ಇದು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5 - ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 103 ಪಿಎಸ್ ಪವರ್ ಹಾಗೂ 137 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

ಇನ್ನು ಇದೇ ಎಂಜಿನ್ ಸಿಎನ್‌ಜಿ ಆಯ್ಕೆಯಲ್ಲಿ ಬಂದಾಗ 88 ಬಿಹೆಚ್‌ಪಿ ಪವರ್ ಮತ್ತು 121.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಮೈಲೇಜ್ ವಿಷಯಕ್ಕೆ ಬಂದರೆ ಪೆಟ್ರೋಲ್ MT 20.51 ಕಿ.ಮೀ., ಪೆಟ್ರೋಲ್ AT 20.3 ಕಿ.ಮೀ, ಸಿಎನ್‌ಜಿ MT ನಲ್ಲಿ 26.11 ಕಿ.ಮೀ/ಕೆ.ಜಿ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ.

maruti-suzuki-ertiga-price-features-mileage-engine-details

ಸುರಕ್ಷತೆ: ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ) ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಒಳಗೊಂಡಿದೆ. ಹೆಚ್ಚಿನ ಟ್ರಿಮ್‌ಗಳು ಹೆಚ್ಚುವರಿಯಾಗಿ ಎರಡು ಸೈಡ್ ಏರ್ ಬ್ಯಾಗ್‌ಗಳನ್ನು ಪಡೆಯುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, August 3, 2024, 18:31 [IST]
English summary
Maruti suzuki ertiga price features mileage engine details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+