ಕಡಿಮೆ ಖರ್ಚಿನಲ್ಲಿ ನಿಮ್ಮೂರಿಗೆ ಹೋಗಿಬರಬಹುದು: ಬರುತ್ತಿದೆ ಹೊಸ ಮಾರುತಿ ಎಲೆಕ್ಟ್ರಿಕ್ ಕಾರು!
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಹೆಚ್ಚಾಗುತ್ತಿದೆ. ಪ್ರಪಂಚದ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳ ರೀತಿಯಲ್ಲೇ ಭಾರತದಲ್ಲೂ ಐಷಾರಾಮಿ ಕಾರು ಬ್ರಾಂಡ್‌ಗಳು ತಮ್ಮ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಕಂಪನಿಯು ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಮಾರುತಿ ಸುಜುಕಿ ಕಂಪನಿಯು ಫೆಬ್ರವರಿಯಲ್ಲಿ ನಡೆದ 2024ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ eVX ಎಂಬ ಎಲೆಕ್ಟ್ರಿಕ್ ಕಾರು ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಿತು.
2023ರ ಆಟೋ ಎಕ್ಸ್‌ಪೋದಲ್ಲಿ ತನ್ನ ಆರಂಭಿಕ ಚೊಚ್ಚಲ ಪ್ರದರ್ಶನವನ್ನು ಮತ್ತು ನಂತರದ ಪ್ರಸ್ತುತಿಯನ್ನು ಟೋಕಿಯೊದಲ್ಲಿ ಜಪಾನ್ ಮೊಬಿಲಿಟಿ ಶೋನಲ್ಲಿ ಪ್ರದರ್ಶಿಸಿತು. ಉತ್ಪಾದನಾ ಮಾದರಿಯನ್ನು ಜನವರಿ 2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋದ 2025 ಆವೃತ್ತಿಯಲ್ಲಿ ಅನಾವರಣಗೊಳಿಸಲಾಗುತ್ತದೆ. 2025ರ ಮಧ್ಯಭಾಗದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲು ಈಗಾಗಲೇ eVX ನ ಮೂಲಮಾದರಿಗಳನ್ನು ಸಕ್ರಿಯವಾಗಿ ಪರೀಕ್ಷಿಸುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಚೊಚ್ಚಲ ಪ್ರವೇಶದ ಮೊದಲು, eVX ಅನ್ನು ಜಪಾನ್, ಯುರೋಪ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗುವುದು. ಇತ್ತೀಚಿನ ಸ್ಪೈ ಚಿತ್ರಗಳು ಪರೀಕ್ಷಾ ಮೂಲಮಾದರಿಗಳ ಅಭಿವೃದ್ಧಿಯನ್ನು ಬಹಿರಂಗಪಡಿಸುತ್ತವೆ, ವಾಹನವು ಉತ್ಪಾದನಾ ಸಿದ್ಧತೆಯನ್ನು ಸಮೀಪಿಸುತ್ತಿದೆ. ಸ್ಪೈ ಚಿತ್ರಗಳಲ್ಲಿ ಕಾಣುವ ಎಲೆಕ್ಟ್ರಿಕ್ SUV ಅಥವಾ ಮಾರುತಿ ಸುಜುಕಿ ಇವಿಎಕ್ಸ್ eVX (Maruti Suzuki eVX)ಟೆಸ್ಟ್ ಮ್ಯೂಲ್ ಹಿಂದಿನ ಚಿತ್ರಗಳಿಗಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತದೆ.
ಚಿತ್ರಗಳಲ್ಲಿ ಚಕ್ರಗಳ ವಿನ್ಯಾಸವು ಭಿನ್ನವಾಗಿ ಕಾಣುತ್ತದೆ. ಇಲ್ಲಿ ಕಂಡುಬರುವ ಚಕ್ರಗಳು ನಾವು ಉತ್ಪಾದನಾ ಆವೃತ್ತಿಯಲ್ಲಿ ನೋಡುವಂತಹವುಗಳಾಗಿರಬಹುದು. ಎಲೆಕ್ಟ್ರಿಕ್ SUV ಡ್ರ್ಯಾಗ್ ಅನ್ನು ಕಡಿಮೆ ಮಾಡಲು ಏರೋಡೈನಾಮಿಕ್ ವಿನ್ಯಾಸದೊಂದಿಗೆ 5-ಸ್ಪೋಕ್ ಅಲಾಯ್ ಚಕ್ರಗಳನ್ನು ಪಡೆಯುವ ನಿರೀಕ್ಷೆಯಿದೆ. ಇದು ಡ್ಯುಯಲ್-ಟೋನ್ ಅಥವಾ ಮೊನೊಟೋನ್ ವೀಲ್ ಆಗಿರುತ್ತದೆಯೇ ಎಂಬುದನ್ನು ನಾವು ಸದ್ಯಕ್ಕೆ ಖಚಿತಪಡಿಸಲು ಸಾಧ್ಯವಿಲ್ಲ. ಈ ಚಿತ್ರದಲ್ಲಿನ ಚಕ್ರಗಳನ್ನು ಹೊರತುಪಡಿಸಿ ನಾವು eVX ನಲ್ಲಿ ಇತರ ವಿಶೇಷತೆಗಳು ಹೊರಗೆ ಕಾಣ ಸಿಗುವುದಿಲ್ಲ.

ಮಾರುತಿ ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಮಾರುತಿಗೆ ಗೇಮ್ ಚೇಂಜರ್ ಆಗುವ ನಿರೀಕ್ಷೆಯಿದೆ. ತಯಾರಕರು ಪ್ರಸ್ತುತ ತಮ್ಮ ಕಾರುಗಳಲ್ಲಿ ಪೆಟ್ರೋಲ್, ಸಿಎನ್‌ಜಿ, ಸ್ಮಾರ್ಟ್ ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನವನ್ನು ನೀಡುತ್ತಾರೆ. ಇವಿಎಕ್ಸ್ ಕಾರು ಮಾರುತಿಯ ಉತ್ಪಾದನಾ ಶ್ರೇಣಿಯನ್ನು ತಲುಪಿದ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. eVX ಗ್ರ್ಯಾಂಡ್ ವಿಟಾರಾ ಎಸ್‍ಯುವಿಯಂತೆಯೇ ಅದೇ ಆಯಾಮಗಳನ್ನು ಹೊಂದಿರುವ ಎಸ್‍ಯುವಿ ಆಗಿರುತ್ತದೆ.
ಮುಂಬರುವ eVX ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಸುಜುಕಿ ಲೋಗೋದೊಂದಿಗೆ ಮುಚ್ಚಿದ ಮುಂಭಾಗದ ಗ್ರಿಲ್, ಮಸ್ಕುಲರ್ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹಿಂಭಾಗದ ಬಾಗಿಲುಗಳಿಗೆ ಪಿಲ್ಲರ್-ಮೌಂಟೆಡ್ ಡೋರ್ ಹ್ಯಾಂಡಲ್‌ಗಳನ್ನು ಕಾಣಬಹುದಾಗಿದೆ. ಮಾರುತಿ ಸುಜುಕಿ ಇವಿಎಕ್ಸ್ ಬಗ್ಗೆ ನೊಡುವುದಾದರೆ, ಭಾರತೀಯ ರಸ್ತೆಗಳಲ್ಲಿ ಈ ಕಾರು ಟೆಸ್ಟ್‌ರನ್ ಮಾಡುತ್ತಿರುವ ಚಿತ್ರಗಳು ಈ ಹಿಂದೆಯೇ ಸೋರಿಕೆಯಾಗಿತ್ತು.

ಈ ಪರೀಕ್ಷಾ ಸಮಯದಲ್ಲಿ ಕಾರಿನ ಕೆಲವು ಚಿತ್ರಗಳು ಹೊರಬಂದಿದ್ದು, ಈ ಚಿತ್ರಗಳು ಕೆಲವು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿವೆ. ಮಾರುತಿ ಇವಿಎಕ್ಸ್ ದೊಡ್ಡ ಇಂಟೀರಿಯರ್, ಹೊಸ 2 - ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್ ಕಾಣಿಸಿಕೊಂಡಿದೆ. ಇವಿಷ್ಟೇ ಅಲ್ಲದೇ ಡ್ರೈವ್ ಮೋಡ್‌ಗಳಿಗಾಗಿ ರೋಟರಿ ಡಯಲ್, ಹೊಸ ಫ್ರೀಸ್ಟಾಂಡಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಇಂಟೀರಿಯರ್ ಕ್ರೋಮ್ ಡೋರ್ ಹ್ಯಾಂಡಲ್‌ಗಳು ಮತ್ತು ಆಟೋ - ಡಿಮ್ಮಿಂಗ್ ಐಆರ್‌ವಿಎಂ ಅನ್ನು ಒಳಗೊಂಡಿದೆ.
ಹಾಗೆಯೇ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಹೊಸ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ ಅಲಾಯ್ ವೀಲ್‌ಗಳು, ಶಾರ್ಕ್ - ಫಿನ್ ಆಂಟೆನಾ ಮತ್ತು ಎಲ್‌ಇಡಿ ಟೈಲ್ ಲೈಟ್‌ಗಳನ್ನು ಹೊಂದಿದೆ. ಮಾರುತಿ ಸುಜುಕಿ ತನ್ನ ಇವಿಎಕ್ಸ್ ಕಾರಿನ ಸಂಪೂರ್ಣ ತಾಂತ್ರಿಕ ವಿಶೇಷತೆಗಳನ್ನು ಬಹಿರಂಗಪಡಿಸಿಲ್ಲ. ಈ ಮಾದರಿಯು ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾದ 60 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನಿಂದ ಚಾಲನೆಗೊಳ್ಳಲಿದೆ, ಇದು ಸಿಂಗಲ್ ಪೂರ್ಣ ಚಾರ್ಜ್‌ನಲ್ಲಿ 550 ಕಿ.ಮೀ ರೇಂಜ್ ನೀಡಲಿದೆ.


Click it and Unblock the Notifications