ವಿಶ್ವಗುರುವಾಗಲು ಮುನ್ನುಗ್ಗುತ್ತಿದೆ ಭಾರತ: ದೇಶದಲ್ಲಿ ತಯಾರದ ಕಾರುಗಳಿಗೆ ವಿದೇಶದಲ್ಲಿ ಬಾರೀ ಬೇಡಿಕೆ!

ಮಾರುತಿ ಸುಜುಕಿ (Maruti Suzuki) ಭಾರತದಲ್ಲಿ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ಅತಿ ಹೆಚ್ಚು ವಾಹನಗಳನ್ನು ತಯಾರಿಸಿ ಮಾರಾಟ ಮಾಡುವ ಕಂಪನಿಯಾಗಿದೆ. ಇದೀಗ ಮಾರುತಿ ಸುಜುಕಿ ಮತ್ತ್ರೊಂದು ದಾಖಲೆಯನ್ನು ಬರೆದಿದೆ. ಮಾರುತಿ ಸುಜುಕಿ ಭಾರತದಿಂದ ವಿವಿಧ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ 30 ಲಕ್ಷ ಕಾರುಗಳನ್ನು ರಫ್ತು ಮಾಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಮಾರುತಿ ಸುಜುಕಿಯು ಹಲವು ವರ್ಷಗಳಿಂದ ಭಾರತದಲ್ಲಿ ವಾಹನಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದರಿಂದ ಈ ಮೈಲಿಗಲ್ಲು ಅತ್ಯಂತ ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.

ಮಾರುತಿ ಸುಜುಕಿ ಕಂಪನಿಯು 1986 ರಲ್ಲಿ ತನ್ನ ಮೊದಲ ರಫ್ತು ಪ್ರಾರಂಭಿಸಿದಾಗ 500 ಕಾರುಗಳನ್ನು ಹಂಗೇರಿಗೆ ರಫ್ತು ಮಾಡಿತು. ಮಾರುತಿ ಸುಜುಕಿ ಕಂಪನಿಯು ವಿದೇಶಗಳಿಗೆ ಭಾರತೀಯ ಕಾರುಗಳನ್ನು ರಫ್ತು ಮಾಡುವಲ್ಲಿ ನಾವು ಹಲವಾರು ಸಮಸ್ಯೆಗಳನ್ನು ಎದುರಿಸಿತು. ನಂತರದ ಸಾವಲುಗಳಮ್ಮ್ ಮೆಟ್ಟಿ ನಿಂತು ಫ್ತು ಸಂಖ್ಯೆಯನ್ನು ಸ್ಥಿರವಾಗಿ ಹೆಚ್ಚಿಸಿಕೊಂಡಿತು. 2012-13ರ ಆರ್ಥಿಕ ವರ್ಷದಲ್ಲಿ ಮೊದಲ 10 ಲಕ್ಷದ ರಫ್ತು ಮೈಲಿಗಲ್ಲನ್ನು ಸಾಧಿಸಿಕೊಂಡಿತು.

Maruti Suzuki

ನಂತರದ 10 ಲಕ್ಷ ಕಾರುಗಳನ್ನು ರಫ್ತು ಮಾಡಲು ಎಂಟು ವರ್ಷಗಳನ್ನು ತೆಗೆದುಕೊಂಡಿತು. ಇಪ್ಪತ್ತು ಲಕ್ಷ ರಫ್ತು ಮೈಲಿಗಲ್ಲು 2020ಕ್ಕೆ ಸಾಧಿಸಿತು. ಇದೀಗ ಮಾರುತಿ ಸುಜುಕಿ ಕಂಪನಿಯು ಒಟ್ಟು 30 ಲಕ್ಷ ಕಾರುಗಳನ್ನು ರಫ್ತು ಮಾಡಿ ಹೊಸ ಮೈಲಿಗಲ್ಲು ಸಾಧಿಸಿದೆ. ಭಾರತೀಯ ನಿರ್ಮಿತ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಇರು ತೋರಿಸುತ್ತದೆ.

ಮಾರುತಿ ಸುಜುಕಿ ಕಂಪನಿಯು ಸೆಲೆರಿಯೊ, ಫ್ರಾಂಕ್ಸ್, ಬಲೆನೊ, ಸಿಯಾಜ್, ಡಿಸೈರ್ ಮತ್ತು ಎಸ್ಪ್ರೆಸೊದಂತಹ ಜನಪ್ರಿಯ ಮಾದರಿಗಳನ್ನು ರಫ್ತು ಮಾಡುತ್ತಿದೆ. ಮಾರುತಿ ಸುಜುಕಿ ಕಂಪನಿಯು ಮುಖ್ಯವಾಗಿ ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೇರಿಕಾ ಮತ್ತು ಪಶ್ಚಿಮ ಏಷ್ಯಾದಾದ್ಯಂತ ರಾಷ್ತೃಗಳಿಗೆ ರಫ್ಟು ಮಾಡುತ್ತಿದ್ದಾರೆ. ಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ ಮತ್ತು ಚಿಲಿಯಂತಹ ದೇಶಗಳು ಸುಜುಕಿ ಬ್ಯಾಡ್ಜ್ ಅಡಿಯಲ್ಲಿ ವಾಹನಗಳನ್ನು ಸ್ವೀಕರಿಸುತ್ತವೆ.

Maruti Suzuki

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳ ಸ್ವೀಕಾರ ಮತ್ತು ಜನಪ್ರಿಯತೆಯನ್ನು ಒತ್ತಿಹೇಳುತ್ತದೆ ಎಂದರೆ ತಪ್ಪಾಗಲ್ಲಾ. ಇತ್ತೀಚೆಗೆ, ಮಾರುತಿ ತನ್ನ ರಫ್ತು ಮಾಡಲಾದ ಮಾದರಿಗಳ ಪಟ್ಟಿಗೆ ಗ್ರಾಂಡ್ ವಿಟಾರಾ ಮತ್ತು ಜಿಮ್ಮಿಯನ್ನು ಸೇರಿಸಿದೆ. ಈ ಹೊಸ ಸೇರ್ಪಡೆಗಳನ್ನು ಈಗ ವಿವಿಧ ದೇಶಗಳಿಗೆ ರಫ್ತು ಮಾಡಲು ಪ್ರಾರಂಭಿಸಿದೆ. ಕಳೆದ ಮೂರು ವರ್ಷಗಳಲ್ಲಿ, ಮಾರುತಿ ಸುಜುಕಿ ಕಾರುಗಳಿಗೆ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಬೇಡಿಕೆಯಿಂದಾಗಿ ಅದರ ರಫ್ತು ಮೂರು ಪಟ್ಟು ಹೆಚ್ಚಾಗಿದೆ.

ಉತ್ಪಾದನೆಗೆ ಸಿದ್ಧಗೊಂಡಿರುವ ಹೊಚ್ಚ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಇ ವಿಟಾರಾ (e Vitara) ಅನಾವರಣಗೊಳಿಸಲು ಮಹೂರ್ತ ನಿಗದಿಪಡಿಸಿದೆ. ನೂತನ ಕಾರನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಯೋಜಿಸಿರುವ 'ಭಾರತ್ ಮೊಬಿಲಿಟಿ ಎಕ್ಸ್‌ಪೋ 2025' ರಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ವರದಿಯಾಗಿದೆ. ನೂತನ ಮಾರುತಿ ಸುಜುಕಿ ಇ ವಿಟಾರಾ (Maruti Suzuki e Vitara) ಹೊರಭಾಗದಲ್ಲಿ ಆಕರ್ಷಕ ವಿನ್ಯಾಸ (ಡಿಸೈನ್) ಹೊಂದಿದೆ.

Maruti Suzuki

ಈ ಕಾರನ್ನು ಇಟಲಿಯ ಮಿಲನ್‌ನಲ್ಲಿ ಆಯೋಜಿಸಿದ್ದ ಐಕ್ಮಾ 2024 (EICMA 2024) ಶೋನಲ್ಲಿ ಪ್ರದರ್ಶಿಸಲಾಗಿತ್ತು. ಹೊಸ ಇ ವಿಟಾರಾ ಮುಂಭಾಗ (ಫ್ರಂಟ್) 'ವೈ' ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಕನೆಕ್ಟ್ಡ್ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ. ಹಿಂಭಾಗ (ರೇರ್) ಹೆಚ್ಚು ದಪ್ಪವಾಗಿರುವ ಬಂಪರ್‌ನ್ನು ಪಡೆದಿದೆ. ಹೊಚ್ಚ ಹೊಸ ಮಾರುತಿ ಸುಜುಕಿ ಇ ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಆರಂಭದಲ್ಲಿ 'ಇವಿಎಕ್ಸ್' ಎಂದು ಹೆಸರಿಸಲಾಗಿತ್ತು.

ಈ ಕಾರು 4,275 ಎಂಎಂ ಉದ್ದ, 1,800 ಎಂಎಂ ಅಗಲ ಹಾಗೂ 1,635 ಎಂಎಂ ಎತ್ತರವಿದೆ. 2,700 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಜೊತೆಗೆ 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಸಹ ಇದೆ. ನೂತನ ಮಾರುತಿ ಇ ವಿಟಾರಾ ಎಲೆಕ್ಟ್ರಿಕ್ ಕಾರು ಶಕ್ತಿಯುತ 49 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 61 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಇದರ 49 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 142 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 189 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸಲಿದೆ ಎನ್ನಲಾಗಿದೆ. ವಿಶೇಷವಾಗಿ ಈ ಬ್ಯಾಟರಿಯನ್ನು 2ಡಬ್ಲ್ಯೂಡಿ (ಟೂ-ವೀಲ್ ಡ್ರೈವ್) ಟೆಕ್ನಾಲಜಿಯೊಂದಿಗೆ ಹೊಂದಿಸಲಾಗಿದೆ.

ಮತ್ತೊಂದು 2ಡಬ್ಲ್ಯೂಡಿ ಟೆಕ್ನಾಲಜಿ ಹಾಗೂ 61 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ ಪಡೆದಿರುವ ಕಾರಿನಲ್ಲಿ ಉಪಯೋಗಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್, 172 ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 189 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಇದೇ ಬ್ಯಾಟರಿಯೊಂದಿಗೆ 4ಡಬ್ಲ್ಯೂಡಿ (ಫೋರ್-ವೀಲ್ ಡ್ರೈವ್) ಟೆಕ್ನಾಲಜಿಯನ್ನು ಪಡೆದುಕೊಂಡಿರುವ ಕಾರು, 300 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

Article Published On: Tuesday, November 26, 2024, 12:00 [IST]
English summary
Maruti suzuki exports 30 lakh units from india details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+