ಟೊಯೊಟಾ ಟೈಸರ್ C/O ಮಾರುತಿ ಫ್ರಾಂಕ್ಸ್: ಮತ್ತೊಂದು ಮೈಲಿಗಲ್ಲಿನ ಲಾಂಚ್ ದಿನಾಂಕ ಬಹಿರಂಗ
ಮಾರುತಿ ಸುಜುಕಿ ಇತ್ತೀಚೆಗೆ ಮಾರುಕಟ್ಟೆಗೆ ತಂದಂತಹ ಕಾರುಗಳಲ್ಲಿ ಬಹಳ ಪ್ರಸಿದ್ಧವಾದ ಮಾಡೆಲ್‌ಗಳೆಂದರೆ ಒಂದು ಮಾರುತಿ ಸುಜುಕಿ ಜಿಮ್ನಿ ಮತ್ತು ಇನ್ನೊಂದು ಮಾರುತಿ ಸುಜುಕಿ ಫ್ರಾಂಕ್ಸ್. ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಸಾಕಷ್ಟು ಬುಕಿಂಗ್ ಅನ್ನು ಪಡೆದುಕೊಂಡಿರುವ ಈ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು ಇದೀಗ ಸುದ್ದಿಯಲ್ಲಿದೆ.
ಹೌದು, ಟೊಯೊಟಾ ಮತ್ತು ಮಾರುತಿ ಸುಜುಕಿ ಸಹಭಾಗಿತ್ವದಲ್ಲಿ ಭಾರತದಲ್ಲಿ ಈಗಾಗಲೇ ಕೆಲವು ಕಾರುಗಳು ಮಾರುಕಟ್ಟೆಗೆ ಬಂದಿದೆ. ಮಾರುತಿ ಸುಜುಕಿ ಬಲೆನೋ ಕಾರನ್ನು ಟೊಯೊಟಾ ಕಂಪನಿಯು ಗ್ಲಾಂನ್ಸಾ ಎಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಅದೇ ರೀತಿ ಗ್ರಾಂಡ್ ವಿಟಾರಾ, ಹೈರೈಡರ್ ಆಗಿಯೂ, ಇನ್ನೋವಾ ಹೈಕ್ರಾಸ್ ಕಾರನ್ನು ಮಾರುತಿ ಸುಜುಕಿ ಇನ್ವಿಕ್ಟೋ ಆಗಿಯೂ ಮಾರುಕಟ್ಟೆಯಲ್ಲಿದೆ.

ಇದೀಗ ಈ ಪಟ್ಟಿಗೆ ಮತ್ತೊಂದು ಕಾರು ಸೇರ್ಪಡೆಯಾಗುತ್ತಿದೆ. ಹೌದು, ಸದ್ಯಕ್ಕೆ ಮಾರುತಿ ಸುಜುಕಿ ಫ್ರಾಂಕ್ಸ್ ಕಾರನ್ನು ಟೊಯೊಟಾ ಕಂಪನಿಯು ಟೈಸರ್ (Toyota Taisor) ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ತರಲಿದ್ದು, ಇದೀಗ ಈ ಕಾರಿನ ಬಿಡುಗಡೆಯ ದಿನಾಂಕವೂ ಹೊರಬಿದ್ದಿದೆ. ಮಾಹಿತಿಗಳ ಪ್ರಕಾರ ಟೊಯೊಟಾ ಮುಂದಿನ ತಿಂಗಳು ಎಂದರೆ ಏಪ್ರಿಲ್ 3, 2024 ರಂದು ಟೈಸರ್ ಕಾಂಪಾಕ್ಟ್ ಎಸ್‌ಯುವಿಯನ್ನು ಲಾಂಚ್ ಮಾಡಲಿದೆ ಎಂದು ತಿಳಿದು ಬಂದಿದೆ.
ಮಾಹಿತಿಗಳ ಪ್ರಕಾರ ಹೊಸ ಟೈಸರ್ ಕಾರಿನ ಡಿಸೈನ್ ಮತ್ತು ಫೀಚರ್‌ಗಳು ಮಾರುತಿ ಸುಜುಕಿ ಫ್ರಾಂಕ್ಸ್ ರೀತಿಯಲ್ಲಿಯೇ ಇರಲಿದ್ದು, ಕಾರಿನ ಫ್ರಂಟ್ ಫಾಸಿಯಾದಲ್ಲಿ ಸಣ್ಣ ಪುಟ್ಟ ಬದಲಾವಣೆಗಳಿರಲಿವೆ ಎಂದು ತಿಳಿದು ಬಂದಿದೆ. ಕಾರಿನ ಲೋಗೋ ಸಹ ಬದಲಾಗಲಿದ್ದು, ಮಾರುತಿ ಸುಜುಕಿ ಬದಲು ಟೊಯೊಟಾ ಲೋಗೋ ಬರಲಿದೆ. ಈ ಹಿಂದೆಯೂ ಸಹ ಇದೇ ರೀತಿಯ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಟೊಯೊಟಾ ಕಾರುಗಳನ್ನು ಲಾಂಚ್ ಮಾಡಿತ್ತು.

ಇನ್ನು ಮಾರುತಿ ಸುಜುಕಿ ಫ್ರಾಂಕ್ಸ್ ಬಗ್ಗೆ ನೋಡುವುದಾದರೆ, ಮಾರುತಿ ಸುಜುಕಿ ಫ್ರಾಂಕ್ಸ್ ಮುಂಭಾಗದ ವಿನ್ಯಾಸ ಬಹುತೇಕ ಗ್ರಾಂಡ್ ವಿಟಾರಾ ಎಸ್‌ಯುವಿಗೆ ಹೋಲಿಕೆಯಾಗಲಿದ್ದು, ಅದೇ ರೀತಿಯ ಲುಕ್ ಹೊಂದಿದೆ . ಕ್ರೋಮ್ ಸ್ಟ್ರಿಪ್‌ನ ಗ್ರೀಲ್ ಮೇಲ್ಭಾಗವಿರುವ ಸುಜುಕಿ ಬ್ಯಾಡ್ಜ್‌ಗೆ ಟ್ರಿಪಲ್ ಎಲ್ಇಡಿ DRLs ಕನೆಕ್ಟ್ ಆಗಿದೆ. ಇದಿಷ್ಟೇ ಅಲ್ಲದೆ, ಬಂಪರ್ ಬದಿಯಲ್ಲಿ ಆಕರ್ಷಕ ಹೆಡ್‌ಲ್ಯಾಂಪ್‌ನ್ನು ಪಡೆದಿದೆ. ಸೈಡ್ ನಿಂದ ನೋಡಿದಾಗ, ಬಲೆನೊದಂತೆ ಕಾಣಲಿದ್ದು, ಅದೇ ರೀತಿಯ ಸಿ ಪಿಲ್ಲರ್ ಆಕಾರವನ್ನು ಹೊಂದಿದೆ.
ಫ್ರಾಂಕ್ಸ್ ಕೂಡ ಮಾರುಕಟ್ಟೆಗೆ ಬರುವ ಹೊಸ ಕಾರುಗಳಂತೆ ಅತ್ಯಾಕರ್ಷಕ ವೈಶಿಷ್ಟ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಎರಡಕ್ಕೂ ಸಪೋರ್ಟ್ ಮಾಡುವ ದೊಡ್ಡದಾದ 9 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ಹೊಂದಿದೆ. 40+ ಕನೆಕ್ಟ್ದ್ ಕಾರ್ ಫೀಚರ್ಸ್, 360 ಡಿಗ್ರಿ ಕ್ಯಾಮೆರಾ, ಹೆಡ್ಸ್ ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪಡೆದಿದೆ. ಆಟೋಮೆಟಿಕ್ ರೂಪಾಂತರಗಳಲ್ಲಿ ಪ್ಯಾಡ್ & ಪ್ಯಾಡಲ್ ಶಿಫ್ಟರ್ ಅನ್ನು ಹೊಂದಿದೆ.

ಎಂಜಿನ್ ಕಾರ್ಯಕ್ಷಮತೆ ಹಾಗೂ ಸುತ್ತಳತೆ: ಮಾರುತಿ ಸುಜುಕಿಯ ಫ್ರಾಂಕ್ಸ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆದಿದೆ. ಅವುಗಳೆಂದರೆ, 1.2 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಕೆ12ಸಿ ಎಂಜಿನ್ ಹಾಗೂ ನವೀಕರಿಸುವ ಬಲೆನೊ RS ರೂಪಾಂತರ ಪಡೆದಿರುವಂತೆ 998 ಸಿಸಿ ಟರ್ಬೊಚಾರ್ಜ್ಡ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಜೊತೆಗೆ ಇವೆರಡು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರುವುದು ವಿಶೇಷವಾಗಿದೆ.
ಈ ಕಾರಿನ 1.2 ಲೀಟರ್ ಎಂಜಿನ್, 88.5 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 5 ಸ್ಪೀಡ್ ಮ್ಯಾನುವಲ್/ ಆಟೋಮ್ಯಾಟಿಕ್ (AMT) ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಮತ್ತೊಂದು 998ಸಿಸಿ ಟರ್ಬೊಚಾರ್ಜ್ಡ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್, 98.7 ಪವರ್, 147.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications