Toyota: ಟೊಯೊಟಾದಿಂದ ಅತ್ಯಂತ ಕಡಿಮೆ ಬೆಲೆಗೆ ಹೊಸ ಕಾರು? ಟೀಸರ್ ಬಿಡುಗಡೆ.. ಬುಧವಾರ ಪರಿಚಯ!

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor - TKM) ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇನ್ನೋವಾ, ರೂಮಿಯನ್ ಸೇರಿದಂತೆ ಹಲವು ಕಾರುಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟಗೊಳಿಸುತ್ತಿದ್ದು, ಇನ್ನಷ್ಟು ಗ್ರಾಹಕರನ್ನು ಸೆಳೆಯಲು ಕೆಲವೇ ದಿನದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಹೊಸ ಕಾರೊಂದನ್ನು ಲಾಂಚ್ ಮಾಡಲು ಸಿದ್ದತೆಯನ್ನು ನಡೆಸುತ್ತಿದೆ.

ಸದ್ಯ, ಟೊಯೊಟಾ ಕಂಪನಿಯು ಮುಂಬರಲಿರುವ ಅರ್ಬನ್ ಕ್ರೂಸರ್ ಟೈಸರ್ (Urban Cruiser Taisor) ಹೆಸರಿನ ನೂತನ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಇದೊಂದು ಕಾಂಪ್ಯಾಕ್ಟ್ ಕ್ರಾಸ್ಒವರ್‌ ಎಸ್‌ಯುವಿಯಾಗಿದ್ದು, ಮಾರುತಿ ಸುಜುಕಿ ಫ್ರಾಂಕ್ಸ್‌ (Maruti Suzuki Fronx) ಕಾರಿನ ರೀ-ಬ್ಯಾಡ್ಜ್ ಆವೃತ್ತಿಯಾಗಿದೆ. ಏಪ್ರಿಲ್ 3ರಂದು (ಬುಧವಾರ) ಅದ್ದೂರಿಯಾಗಿ ಮಾರುಕಟ್ಟೆಗೆ ಬರಲಿದೆ.

Maruti Suzuki Fronx Based Toyota Urban Cruiser Taisor Car Teaser Out April 3 Launch

ಟೊಯೊಟಾ ಹಾಗೂ ಮಾರುತಿ ಸುಜುಕಿ ಕಂಪನಿಗಳು ಪಾಲುದಾರಿಕೆಯನ್ನು ಹೊಂದಿದ್ದು, ಅದರ ಭಾಗವಾಗಿ ಈ ಹೊಸ ಕಾರು ಹೊರಬರುತ್ತಿದೆ. ನೂತನ ಅರ್ಬನ್ ಕ್ರೂಸರ್ ಟೈಸರ್ ವಿನ್ಯಾಸ ಬಹುತೇಕ ಫ್ರಾಂಕ್ಸ್‌ ಎಸ್‌ಯುವಿಗೆ ಹೋಲಿಕೆಯಾದರೂ ಇವೆರೆಡು ಮಾದರಿಗಳು ಬೇರೆ-ಬೇರೆ ಎಂದು ತೋರಿಸಲು ಒಂದಷ್ಟು ಬದಲಾವಣೆಯನ್ನು ಪಡೆದಿರುವ ಸಾಧ್ಯತೆಯಿದ್ದು, ನವೀನವಾದ ಗ್ರಿಲ್ ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ನೂತನ ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಕಾರಿನ ಒಳಭಾಗದ ವಿನ್ಯಾಸವು ಫ್ರಾಂಕ್ಸ್‌ ಕಾರಿಗೆ ಹೋಲಿಕೆಯಾಗಲಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ ಮತ್ತು ಹೆಡ್ಸ್-ಅಪ್ ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಹೊಸ ಟೊಯೊಟಾ ಎಸ್‌ಯುವಿ ಕೂಡ ಫ್ರಾಂಕ್ಸ್‌ ಕಾರಿನಂತೆ ರೂ.7.51 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.

Maruti Suzuki Fronx Based Toyota Urban Cruiser Taisor Car Teaser Out April 3 Launch

ಈ ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಕಾರು ಸಹ ಫ್ರಾಂಕ್ಸ್‌ ರೀತಿಯಲ್ಲಿ ಎಂಜಿನ್ ಹೊಂದಿರಲಿದೆ ಎನ್ನಲಾಗಿದೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಫ್ರಾಂಕ್ಸ್‌ ಎಸ್‌ಯುವಿ, 1-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.2-ಲೀಟರ್ ಡುಯಲ್ಜೆಟ್ ಪೆಟ್ರೋಲ್/ ಸಿಎನ್‌ಜಿ ಆಯ್ಕೆಯಲ್ಲಿ ಸಿಗಲಿದ್ದು, 5-ಸ್ವೀಡ್ ಮ್ಯಾನುವಲ್, 5-ಸ್ವೀಡ್/ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಟೊಯೊಟಾ ಕಂಪನಿ ಮಾರಾಟಗೊಳಿಸುವ ರೂಮಿಯನ್ (Rumion) ಎಂಪಿವಿ ಕೂಡ 'ಮಾರುತಿ ಸುಜುಕಿ ಎರ್ಟಿಗಾ'ದ ರೀ-ಬ್ಯಾಡ್ಜ್ ಮಾದರಿಯಾಗಿದೆ. ಇದು ರೂ.10.44 ಲಕ್ಷದಿಂದ ರೂ.13.73 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 1.5-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, ಪೆಟ್ರೋಲ್ ಮಾದರಿಗಳು 20.11 ರಿಂದ 20.51 ಕೆಎಂಪಿಎಲ್, ಸಿಎನ್‌ಜಿ ಚಾಲಿತ ರೂಪಾಂತರ 26.11 ಕೆಜಿ/ಕೆಎಂ ಮೈಲೇಜ್ ನೀಡುತ್ತದೆ.

Maruti Suzuki Fronx Based Toyota Urban Cruiser Taisor Car Teaser Out April 3 Launch

ಈ ಟೊಯೊಟಾ ರೂಮಿಯನ್ ಎಂಪಿವಿ, ವಿವಿಧ ಆಕರ್ಷಕ ಬಣ್ಣಗಳೊಂದಿಗೆ ಲಭ್ಯವಿದ್ದು, 7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಹಾಗೂ ಪ್ಯಾಡಲ್ ಶಿಫ್ಟರ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 4 ಏರ್‌ಬ್ಯಾಗ್‌ ಪಡೆದಿದೆ.

ಮಾರುತಿ ಸುಜುಕಿಯು 'ಟೊಯೊಟಾ ಇನ್ನೋವಾ ಹೈಕ್ರಾಸ್' ರೀ-ಬ್ಯಾಡ್ಜ್ ಆವೃತ್ತಿಯಾದ ಇನ್ವಿಕ್ಟೋ (Invicto) ಎಂಪಿವಿಯನ್ನು ಮಾರಾಟ ಮಾಡುತ್ತದೆ. ಇದು ರೂ.25.21 ರಿಂದ ರೂ.28.92 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 2-ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 23.24 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, April 1, 2024, 15:50 [IST]
English summary
Maruti suzuki fronx based toyota urban cruiser taisor car teaser out april 3 launch
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+