Maruti Suzuki: ಮಾರುತಿ ಸುಜುಕಿಯ ಗೇಮ್ ಚೇಂಜರ್ ಈ ಜನಪ್ರಿಯ ಕಾರು.. ರೂ.7.51 ಲಕ್ಷ ಬೆಲೆ, 28 Km ಮೈಲೇಜ್

ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಕೊಂಡಿದೆ. ನೆಕ್ಸಾ ಹಾಗೂ ಅರೆನಾ ಡೀಲರ್‌ಶಿಪ್ ಮೂಲಕ ಆಲ್ಟೊ, ಸೆಲೆರಿಯೊ, ಬಲೆನೊ, ವ್ಯಾಗನ್ಆರ್, ಇಗ್ನಿಸ್, ಜಿಮ್ನಿ ಸೇರಿದಂತೆ ವಿವಿಧ ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಎಸ್‌ಯುವಿಗಳನ್ನು ಮಾರಾಟ ಮಾಡುತ್ತಿದೆ. ಇವು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಪಡೆದುಕೊಂಡಿರುವುದರಿಂದ ಗ್ರಾಹಕರು ಕೂಡ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಸದ್ಯ ಕಂಪನಿಯ 'ಫ್ರಾಂಕ್ಸ್' ಗೇಮ್ ಚೇಂಜರ್ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಜೊತೆಗೆ ಐತಿಹಾಸಿಕ ದಾಖಲೆಯೊಂದನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನದಾಗಿಸಿಕೊಳ್ಳುವ ಸನಿಹದಲ್ಲಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಕಾಂಪ್ಯಾಕ್ಟ್ ಎಸ್‌ಯುವಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಬಲೆನೊ ಆಧಾರಿತವಾಗಿರುವ ಈ ಕಾರನ್ನು 2023ರ ಮೊದಲರ್ಧದಲ್ಲಿ ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಫ್ರಾಂಕ್ಸ್ ಎಸ್‌ಯುವಿ ಮಾರಾಟದಲ್ಲಿ ಕಂಪನಿಯು ಹಿಂದಿರುಗಿ ನೋಡಿದ್ದೇ ಇಲ್ಲ. 2024ರ ಏಪ್ರಿಲ್ ಅಂತ್ಯದವರೆಗೆ ಬರೋಬ್ಬರಿ 1,49,021 ಯುನಿಟ್ ಕಾರುಗಳನ್ನು ಮಾರಿದೆ. 1.50 ಲಕ್ಷ ಯುನಿಟ್ ಮೈಲಿಗಲ್ಲನ್ನು ತಲುಪುವುದಕ್ಕೆ ಕೇವಲ 979 ಯುನಿಟ್ ಮಾರಾಟಗೊಳಿಸಬೇಕಾಗಿದೆ.

Maruti Suzuki Fronx Car Become Game Changer Rs 7 51 Lakh Price 28 Km Mileage

ಫ್ರಾಂಕ್ಸ್ ಎಸ್‌ಯುವಿ ಮಾರಾಟದ ವೇಗವನ್ನು ಗಮನಿಸಿದರೆ, ಈಗಾಗಲೇ ಈ ದಾಖಲೆಯನ್ನು ಸರಿಗಟ್ಟಿರಬೇಕು ಎಂದು ಅಂದಾಜಿಸಲಾಗಿದೆ. ಆದಾಗ್ಯೂ ಕಂಪನಿಯ ಕಡೆಯಿಂದ ನೂತನ ಮೈಲಿಗಲ್ಲಿನ ಕುರಿತಂತೆ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಜನವರಿ 2024ರಲ್ಲಿ ಫ್ರಾಂಕ್ಸ್ ಬಿಡುಗಡೆಯಾಗಿ 10 ತಿಂಗಳಲ್ಲಿ ಸರಿ ಸುಮಾರು 1 ಲಕ್ಷ ಯುನಿಟ್ ಕಾರುಗಳನ್ನು ಮಾರಾಟ ಮಾಡಿ, ಐತಿಹಾಸಿಕ ದಾಖಲೆಯನ್ನು ನಿರ್ಮಿಸಲಾಗಿತ್ತು.

ಪ್ರಸ್ತುತ ದೇಶೀಯವಾಗಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಎಸ್‌ಯುವಿ, ರೂ.7.51 ಲಕ್ಷದಿಂದ ರೂ.13.04 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಈ ಕಾರು ಸಿಗ್ಮಾ ಮತ್ತು ಡೆಲ್ಟಾ ಪ್ಲಸ್ (ಒ) ಸೇರಿದಂತೆ ವಿವಿಧ ರೂಪಾಂತರ (ವೇರಿಯೆಂಟ್)ಗಳೊಂದಿಗೆ ದೊರೆಯಲಿದ್ದು, ನೆಕ್ಸಾ ಬ್ಲೂ, ಅರ್ಥನ್ ಬ್ರೌನ್, ಆರ್ಕ್ಟಿಕ್ ವೈಟ್ ಒಳಗೊಂಡಂತೆ ಹಲವು ಬಣ್ಣಗಳನ್ನು ಸಹ ಪಡೆದಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

Maruti Suzuki Fronx Car Become Game Changer Rs 7 51 Lakh Price 28 Km Mileage

ಈ ಫ್ರಾಂಕ್ಸ್ ಎಸ್‌ಯುವಿಯು 1-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಪೆಟ್ರೋಲ್ ಆವೃತ್ತಿಗಳು 20.1 ರಿಂದ 22.89 ಕೆಎಂಪಿಎಲ್‌ ಹಾಗೂ ಸಿಎನ್‌ಜಿ ಮಾದರಿಗಳು ಕೆಎಂ/ಕೆಜಿ ಮೈಲೇಜ್ ಕೊಡುತ್ತವೆ.

ಮಾರುತಿ ಸುಜುಕಿ ಫ್ರಾಂಕ್ಸ್ ಕಾರು 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರವಾಸದ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 308 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಪಡೆದಿದೆ.

Maruti Suzuki Fronx Car Become Game Changer Rs 7 51 Lakh Price 28 Km Mileage

ಈ ಕಾರು ಸುರಕ್ಷತೆಗೂ ಖ್ಯಾತಿಗಳಿಸಿದೆ. 6 ಏರ್‌ಬ್ಯಾಗ್‌, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಹೋಲ್ಡ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ ಒಳಗೊಂಡಂತೆ ಹಲವು ವೈಶಿಷ್ಟ್ಯಗಳಿವೆ. ಫ್ರಾಂಕ್ಸ್ ಎಸ್‌ಯುವಿಗೆ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಕಾರುಗಳು ದೊಡ್ಡ ಎದುರಾಳಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 15, 2024, 10:55 [IST]
English summary
Maruti suzuki fronx car become game changer rs 7 51 lakh price 28 km mileage
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+