28 ಕಿ.ಮೀ ಮೈಲೇಜ್ ನೀಡುವ ಕಾರಿಗೆ ಮುಗಿಬಿದ್ದ ಜನ: 10 ತಿಂಗಳಲ್ಲಿ 1 ಲಕ್ಷ ಕಾರುಗಳ ಮಾರಾಟ
ಮಾರುತಿ ಸುಜುಕಿ FRONX SUV 2023 ಏಪ್ರಿಲ್ 24 ರಂದು ಬಿಡುಗಡೆಯಾದಾಗಿನಿಂದ ಇಲ್ಲಿಯವರಗೆ 1 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ ಭಾರತದ ವೇಗದ ಪ್ರಯಾಣಿಕ ವಾಹನವಾಗಿ ದಾಖಲೆ ನಿರ್ಮಿಸಿದೆ. ಕೇವಲ 10 ತಿಂಗಳುಗಳಲ್ಲಿ ಈ ಮೈಲಿಗಲ್ಲನ್ನು ಸಾಧಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಮಾರುತಿ ಫ್ರಾಂಕ್ಸ್ ಭವಿಷ್ಯದ ವಿನ್ಯಾಸ, ಉನ್ನತ ಗ್ರೌಂಡ್ ಕ್ಲಿಯರೆನ್ಸ್, ಸುಧಾರಿತ ತಂತ್ರಜ್ಞಾನನೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. SUV ಉತ್ಸಾಹಿಗಳ ಆದ್ಯತೆಗಳನ್ನು ಪೂರೈಸಲು FRONX ಮಾರುಕಟ್ಟೆಯಲ್ಲಿ ಟ್ರೆಂಡ್‌ಸೆಟರ್ ಆಗಿ ಮಾರ್ಪಟ್ಟಿದೆ. ಬಹು ಪವರ್‌ಟ್ರೇನ್ ಆಯ್ಕೆಯನ್ನು ನೀಡುತ್ತಿರುವ ಜೊತೆಗೆ ಟೆಕ್-ಲೋಡೆಡ್ ಪ್ರೀಮಿಯಂ ಫೀಚರ್‌ಗಳಿಂದಾಗಿ ಗ್ರಾಹಕರಲ್ಲಿ ಇದರ ಜನಪ್ರಿಯತೆಯು ಗಗನಕ್ಕೇರಿದೆ ಎಂದು ಮಾರುತಿ ಹೇಳಿದೆ.

ಫ್ರಾಂಕ್ಸ್‌ನ ಆಟೋಮ್ಯಾಟಿಕ್ ವೇರಿಯೆಂಟ್‌ಗಳು ಶೇ24 ರಷ್ಟು ಮಾರಾಟಕ್ಕೆ ಕೊಡುಗೆ ನೀಡಿವೆ. ಮಾರುತಿ ಸುಜುಕಿ ಫ್ರಾಂಕ್ಸ್ ಹೆಚ್ಚಾಗಿ 1.0L ಟರ್ಬೊ ಬೂಸ್ಟರ್‌ಜೆಟ್ ಎಂಜಿನ್‌ಗೆ ಸಾಕಷ್ಟು ಬೇಡಿಕೆಯನ್ನು ಕಂಡಿದೆ. ಹೆಚ್ಚುವರಿಯಾಗಿ, ಇತ್ತೀಚೆಗೆ ಪರಿಚಯಿಸಲಾದ S-CNG ಆಯ್ಕೆಯು ಇಂಧನ-ಸಮರ್ಥ ಮತ್ತು ಪರಿಸರ ಸ್ನೇಹಿ SUV ಗಾಗಿ ಹುಡುಕುತ್ತಿರುವವರ ಅಗತ್ಯಗಳನ್ನು ಪೂರೈಸಿದೆ. ಏಕೆಂದರೆ ಇದು 28.51 km/kg ನ ಅತ್ಯುತ್ತಮ ಮೈಲೇಜ್ ನೀಡುತ್ತದೆ.
'ಮೇಕ್ ಇನ್ ಇಂಡಿಯಾ' ಸರ್ಕಾರದ ಪ್ರಯತ್ನಗಳೊಂದಿಗೆ ಹೊಂದಿಕೊಂಡು, ಮಾರುತಿ ಸುಜುಕಿ ಇತ್ತೀಚೆಗೆ ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾದ ಮಾರುಕಟ್ಟೆಗಳಿಗೆ FRONX ಕಾರುಗಳ ರಫ್ತುಗಳನ್ನು ಪ್ರಾರಂಭಿಸಿದೆ. ಇಲ್ಲಿಯವರೆಗೆ, ಮಾರುತಿ ಸುಜುಕಿಯು FRONX ನ 9,000 ಘಟಕಗಳನ್ನು ರಫ್ತು ಮಾಡಿರುವುದಾಗಿ ಹೇಳಿಕೊಂಡಿದೆ.

ಮಾರುತಿ ಸುಜುಕಿ FRONX ವಿವಿಧ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಸುಧಾರಿತ ನೆಕ್ಸ್ಟ್ - ಜೆನ್ ಪವರ್‌ಟ್ರೇನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಪರ್ಫಾಮೆನ್ಸ್ ಉತ್ಸಾಹಿಗಳಿಗೆ ಪ್ರೋಗ್ರೆಸಿವ್ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಒಳಗೊಂಡಿರುವ ಹೊಸ 1.0L K-Series Boosterjet ಪೆಟ್ರೋಲ್ ಎಂಜಿನ್ ಅನ್ನು ನೀಡುತ್ತಿದೆ.
ಕಾರಿನಲ್ಲಿ ಗ್ರಾಹಕರು ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನೊಂದಿಗೆ ಹೆಡ್-ಅಪ್ ಡಿಸ್‌ಪ್ಲೇ, 360 ವ್ಯೂ ಕ್ಯಾಮೆರಾ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಮತ್ತು 22.86 cm (9") HD ಸ್ಮಾರ್ಟ್ ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಂ ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದ ಜೊತೆಗೆ ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳನ್ನು ಇದರಲ್ಲಿ ಪಡೆಯಬಹುದು.

ಮಾರುತಿ ಫ್ರಾಂಕ್ಸ್ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ, ಕೇವಲ 10 ತಿಂಗಳುಗಳಲ್ಲಿ 1 ಲಕ್ಷ ಮಾರಾಟವನ್ನು ಸಾಧಿಸುವುದು ನಮ್ಮ ಗ್ರಾಹಕರೊಂದಿಗೆ FRONX ಕಂಡುಕೊಂಡ ಅಸಾಧಾರಣ ಸಂಪರ್ಕವನ್ನು ತೋರಿಸುತ್ತದೆ. ಮಾರುತಿ ಸುಜುಕಿಯ SUV ವಿಭಾಗದ ಪಾಲನ್ನು 2022 ರಲ್ಲಿ ಶೇ10.4 ರಿಂದ CY2023 ರಲ್ಲಿ ಶೇ19.7 ಕ್ಕೆ ದ್ವಿಗುಣಗೊಳಿಸುವಲ್ಲಿ FRONX ಪ್ರಮುಖ ಪಾತ್ರ ವಹಿಸಿದೆ ಎಂದರು.
ಆಧುನಿಕ ವಿನ್ಯಾಸದ ಸಂಪೂರ್ಣ ಪ್ಯಾಕೇಜ್, ಟೆಕ್-ಲೋಡೆಡ್ ಪ್ರೀಮಿಯಂ ಮತ್ತು ಬಹು ಪವರ್‌ಟ್ರೇನ್ ಆಯ್ಕೆಗಳೊಂದಿಗೆ FRONX ತನ್ನ ಅನನ್ಯ ಆಯ್ಕೆಗಳೊಂದಿಗೆ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ನಮ್ಮ ಗ್ರಾಹಕರ ನಿರಂತರ ಬೆಂಬಲಕ್ಕಾಗಿ ನಾವು ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. FRONX ಇದೇ ವೇಗವನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಶಶಾಂಕ್ ಶ್ರೀವಾಸ್ತವ ಹೇಳಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications