Maruti Suzuki: 7 ಲಕ್ಷ.. 28 Km ಮೈಲೇಜ್, ಈ ಕಾರಿಗೆ ಮುಗಿಬಿದ್ದ ಗ್ರಾಹಕರು.. 17 ತಿಂಗಳಲ್ಲಿ 2,00,000 ಯುನಿಟ್ ಮಾರಾಟ!

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited - MSIL) ಪ್ರಮುಖ ಕಾರು ಮಾರಾಟ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯವಾಗಿ ಅರೆನಾ ಹಾಗೂ ನೆಕ್ಸಾ ಡೀಲರ್‌ಶಿಪ್‌ ಮೂಲಕ ಹತ್ತಾರು ಕಾರುಗಳನ್ನು ಮಾರಾಟ ಮಾಡುತ್ತಿದೆ. ವಿಶೇಷವಾಗಿ ಫ್ರಾಂಕ್ಸ್ (FRONX) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಈ ಕಾರಿನ ಮಾರಾಟದಲ್ಲಿ ಕಂಪನಿಯು ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದೆ. ಆ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಭಾರತದ ಮಾರುಕಟ್ಟೆಯಲ್ಲಿ 2023ರ ಏಪ್ರಿಲ್ ಅಂತ್ಯದಲ್ಲಿ ಹೊಚ್ಚ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯನ್ನು ಅದ್ದೂರಿಯಾಗಿ ಮಾರಾಟಕ್ಕೆ ತರಲಾಗಿತ್ತು. ಬಲೆನೊ ಹ್ಯಾಚ್‌ಬ್ಯಾಕ್ ಆಧಾರಿತವಾಗಿರುವ ಈ ಫ್ರಾಂಕ್ಸ್ ಕಾರಿಗೆ ಬಿಡುಗಡೆಗೊಳಿಸಿದ ಮೊದಲ ದಿನದಿಂದಲೇ ಖರೀದಿದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಿಂದಲೇ 17.3 ತಿಂಗಳಲ್ಲಿ 2 ಲಕ್ಷ ಯುನಿಟ್ 'ಫ್ರಾಂಕ್ಸ್' ಎಸ್‌ಯುವಿಗಳನ್ನು ಮಾರಾಟಗೊಳಿಸುವ ಮೂಲಕ ಕಂಪನಿಯು ಪ್ರಮುಖವಾದ ಮೈಲಿಗಲ್ಲೊಂದನ್ನು ಸಾಧಿಸಿದೆ.

Maruti Suzuki Fronx Hits Fastest 2 Lakh Sales Milestone Just 17 Months Details

ಜನವರಿ 2024ರಲ್ಲಿಯೇ 1 ಲಕ್ಷ ಯುನಿಟ್ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಗಳನ್ನು ಮಾರಾಟ ಮಾಡಲಾಗಿತ್ತು. ಅದು ಬಿಡುಗಡೆಯಾಗಿ 10 ತಿಂಗಳಲ್ಲಿಯೇ ಎಂಬುದು ಗಮನಾರ್ಹ ಅಂಶವಾಗಿದೆ. ಈಗ 7.3 ತಿಂಗಳಲ್ಲಿ ಇನ್ನೊಂದು ಲಕ್ಷ ಯುನಿಟ್ ಮಾರಾಟಗೊಳಿಸುವ ಮೂಲಕ ಹೊಸ ಇತಿಹಾಸವನ್ನು ಕಂಪನಿ ಬರೆದಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಕಾರನ್ನು ಪರಿಚಯಿಸಿ, ಎರಡು ವರ್ಷ ಕಳೆಯುವ ಮುನ್ನವೇ 2 ಯುನಿಟ್ ಮಾರಾಟ ಮಾಡಲು ನಾನಾ ಕಾರಣಗಳಿವೆ. ಬಹುಮುಖ್ಯವಾಗಿ ನೂತನ ಎಸ್‌ಯುವಿಯ ಕೈಗೆಟುಕುವ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳು ಗ್ರಾಹಕರಿಗೆ ಇಷ್ಟವಾಗಿವೆ. ಕಂಪನಿಯು ಮತ್ತಷ್ಟು ಸಂಖ್ಯೆಯಲ್ಲಿ ಗ್ರಾಹಕರು, ಫ್ರಾಂಕ್ಸ್ ಕಾರನ್ನು ಖರೀದಿಸುವಂತೆ ಪ್ರೋತ್ಸಾಹಿಸಲು ಈ ಅಕ್ಟೋಬರ್‌ನಲ್ಲಿ ರೂ.13,000 ದಿಂದ ರೂ.38,000ವರೆಗೆ ರಿಯಾಯಿತಿ ಪ್ರಯೋಜನಗಳನ್ನು ಘೋಷಿಸಿದೆ.

Maruti Suzuki Fronx Hits Fastest 2 Lakh Sales Milestone Just 17 Months Details

ಮಾರುತಿ ಸುಜುಕಿ ಫ್ರಾಂಕ್ಸ್ ವಿಶೇಷತೆಗಳೇನು: ಈ ಎಸ್‌ಯುವಿ ರೂ.7.51 ರಿಂದ ರೂ.13.04 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಸಿಗ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್, ಡೆಲ್ಟಾ ಪ್ಲಸ್ (ಒ), ಝೀಟಾ ಹಾಗೂ ಆಲ್ಫಾ ಸೇರಿದಂತೆ ಹಲವು ಆಕರ್ಷಕ ರೂಪಾಂತರಗಳನ್ನು ಹೊಂದಿದೆ. ಇದರಲ್ಲಿ 5 ಮಂದಿ ಸಂಚಾರ ನಡೆಸಬಹುದು. ದೂರದ ಊರುಗಳಿಗೆ ಹೋಗುವಾಗ ಲಗೇಜ್ ತೆಗೆದುಕೊಂಡು ಹೋಗಲು 308 ಲೀಟರ್‌ನ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಈ ಕಾರು ವಿವಿಧ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇದರ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 100 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 148 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಮತ್ತೊಂದು 1.2-ಲೀಟರ್ ಡುಯಲ್ಜೆಟ್ ಪೆಟ್ರೋಲ್ ಎಂಜಿನ್ 90 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 113 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

Maruti Suzuki Fronx Hits Fastest 2 Lakh Sales Milestone Just 17 Months Details

ಸಿಎನ್‌ಜಿ ಎಂಜಿನ್ ಹೊಂದಿರುವ ರೂಪಾಂತರವು ಇದೇ 1.2-ಲೀಟರ್ ಎಂಜಿನ್‌ನ್ನು ಪಡೆದಿದೆ. ಆದರೆ, 77.5 ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 98.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಮಾತ್ರ ಹೊರಹಾಕುತ್ತದೆ. ಜೊತೆಗೆ ಫ್ರಾಂಕ್ಸ್ ಕಾರು ರೂಪಾಂತರಗಳ ಅನ್ವಯ 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ & 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 20.1 ರಿಂದ 28.51 ಕೆಎಂಪಿಎಲ್‌ವರೆಗೆ ಮೈಲೇಜ್ ಸಹ ನೀಡುತ್ತದೆ.

ನೂತನ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋ ಕ್ಲೇಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು (ಫೀಚರ್) ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

Article Published On: Friday, October 11, 2024, 15:53 [IST]
English summary
Maruti suzuki fronx hits fastest 2 lakh sales milestone just 17 months details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+