ದಸರಾಕ್ಕೆ ಸಿಹಿಸುದ್ದಿ: ಆಕರ್ಷಕ ಮಾರುತಿ ಗ್ರ್ಯಾಂಡ್ ವಿಟಾರಾ ಡೊಮಿನಿಯನ್ ಎಡಿಷನ್ ಬಿಡುಗಡೆ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಇಂಡಿಯಾ ಲಿಮಿಟೆಡ್ (MSIL) ತನ್ನ ಆಕರ್ಷಣೆಯನ್ನು ಹೆಚ್ಚಿಸಲು ಹಬ್ಬದ ಸೀಸನ್ ನಲ್ಲಿ ಗ್ರಾಹಕರನ್ನು ಸೆಳೆಯಲು ಹೊಸ ಗ್ರ್ಯಾಂಡ್ ವಿಟಾರಾ ಡೊಮಿನಿಯನ್ ಲಿಮಿಟೆಡ್ ಎಡಿಷನ್ ಮಾದರಿಯನ್ನು ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಡೊಮಿನಿಯನ್ ಲಿಮಿಟೆಡ್ ಎಡಿಷನ್ (Maruti Suzuki Grand Vitara Dominion Edition) ಆಲ್ಫಾ, ಝೀಟಾ ಮತ್ತು ಡೆಲ್ಟಾ ರೂಪಾಂತರಗಳಲ್ಲಿಯು ಲಭ್ಯವಿರುತ್ತದೆ. ಪೆಟ್ರೋಲ್ ಮತ್ತು CNG ಇಂಧನ ಆಯ್ಕೆಯಲ್ಲಿ ಲಭ್ಯವಿದೆ. 52,699 ರೂ ಮೌಲ್ಯದ ಕಾಸ್ಮೆಟಿಕ್ ಪರಿಕರಗಳ ಪ್ಯಾಕೇಜ್ ಅನ್ನು ಸೇರಿಸುತ್ತದೆ.

ಈ ಸ್ಪೆಷಲ್ ಎಡಿಷನ್ ವಿಶಿಷ್ಟ ಶೈಲಿ ಮತ್ತು ರಗಡ್ ಲುಕ್ ನಲ್ಲಿ ಎದ್ದು ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಈ ಹೊಸ ಎಸ್‍ಯುವಿಯು ದೃಶ್ಯ ಮತ್ತು ಕ್ರಿಯಾತ್ಮಕ ಆಕರ್ಷಣೆಯನ್ನು ಹೆಚ್ಚಿಸುವ ನವೀಕರಣಗಳನ್ನು ಒಳಗೊಂಡಿದೆ. ಸಂಭಾವ್ಯ ಖರೀದಿದಾರರನ್ನು ಮತ್ತಷ್ಟು ಆಕರ್ಷಿಸಲು ಮಾರುತಿ ಸುಜುಕಿ ಕಂಪನಿಯು ಪೂರಕ ಆಕ್ಸೆಸರಿ ಕಿಟ್‌ಗಳು ಸೇರಿದಂತೆ ಆಕರ್ಷಕ ಕೊಡುಗೆಗಳೊಂದಿಗೆ ನೀಡಲಾಗುತ್ತದೆ.

Maruti Suzuki Grand Vitara Dominion Edition

ಗ್ರ್ಯಾಂಡ್ ವಿಟಾರಾ ಡೊಮಿನಿಯನ್ ಲಿಮಿಟೆಡ್ ಎಡಿಷನ್ ಮಾದರಿಯ ಕಾಸ್ಮೆಟಿಕ್ ಆಕ್ಸೆಸರೀಸ್ ಪ್ಯಾಕೇಜಿನ ಮೇಲೆ ಕೇಂದ್ರೀಕರಿಸಿ, ಡೊಮಿನಿಯನ್ ಎಡಿಟನ್ ಎಸ್‌ಯುವಿಗಳು ಬಂಪರ್‌ನಲ್ಲಿ ಹೆಚ್ಚುವರಿ ಕ್ರೋಮ್ ಗಾರ್ನಿಶ್‌ಗಳು, ರಿಯರ್ ಸ್ಕಿಡ್ ಪ್ಲೇಟ್, ಸೈಡ್ ಮೋಲ್ಡಿಂಗ್ ಮತ್ತು ಟೈಲ್ ಲ್ಯಾಂಪ್‌ಗಳ ಜೊತೆಗೆ ವಿಂಗ್ ಮಿರರ್‌ಗಳು ಮತ್ತು ಹೆಡ್‌ಲ್ಯಾಂಪ್ ಸರೌಂಡ್‌ನಲ್ಲಿ ಹೆಚ್ಚುವರಿ ಕಪ್ಪು ಟ್ರಿಮ್‌ಗಳನ್ನು ಪಡೆಯುತ್ತವೆ.

ಆಕ್ಸೆಸರೀಸ್ ಪ್ಯಾಕೇಜ್‌ನಲ್ಲಿ ಪ್ರೀಮಿಯಂ ಕಾರ್ ಕವರ್ ಜೊತೆಗೆ ಫ್ಲೋರ್ ಮ್ಯಾಟ್ಸ್, 'ನೆಕ್ಸಾ' ಬ್ರಾಂಡ್ ಕುಶನ್‌ಗಳು ಮತ್ತು ಡ್ಯಾಶ್‌ಬೋರ್ಡ್‌ನಲ್ಲಿರುವ ಸಿಲ್ವರ್ ಟ್ರಿಮ್ ಅಂಶಗಳಿಗೆ ಫಾಕ್ಸ್ ವುಡ್ ಫಿನಿಶ್ ಅನ್ನು ಸೇರಿಸಲಾಗಿದೆ. ಅಕ್ಸೆಸರೀಸ್ ಪ್ಯಾಕೇಜ್‌ನಲ್ಲಿ ಪ್ರೀಮಿಯಂ ಕಾರ್ ಕವರ್ ಜೊತೆಗೆ ಫ್ಲೋರ್ ಮ್ಯಾಟ್ಸ್, 'ನೆಕ್ಸಾ' ಬ್ರಾಂಡ್ ಕುಶನ್‌ಗಳು ಮತ್ತು ಡ್ಯಾಶ್‌ಬೋರ್ಡ್‌ನಲ್ಲಿರುವ ಸಿಲ್ವರ್ ಟ್ರಿಮ್ ಅಂಶಗಳಿಗೆ ಫಾಕ್ಸ್ ವುಡ್ ಫಿನಿಶ್ ಅನ್ನು ಸೇರಿಸಲಾಗಿದೆ.

ಝೀಟಾ ಮತ್ತು ಡೆಲ್ಟಾ ಟ್ರಿಮ್‌ಗಳು ಸೀಟ್ ಕವರ್‌ಗಳನ್ನು ಮಿಶ್ರಣವನ್ನು ಹೊಂದಿದೆ. ಆದರೆ ಆಲ್ಫಾ ಸೈಡ್‌ಸ್ಟೆಪ್ ಅನ್ನು ಸೇರಿಸುತ್ತದೆ. ಡೊಮಿನಿಯನ್ ಆವೃತ್ತಿಯನ್ನು ಸ್ಮಾರ್ಟ್ ಹೈಬ್ರಿಡ್ (ಮೈಲ್ಡ್ ಹೈಬ್ರಿಡ್) ಮತ್ತು ಗ್ರ್ಯಾಂಡ್ ವಿಟಾರಾದ CNG ರೂಪಾಂತರಗಳಲ್ಲಿ ಮಾತ್ರ ನೀಡಲಾಗುತ್ತದೆ. CNG ರೂಪಾಂತರಗಳಲ್ಲಿ 87 bhp ಪವರ್ ಮತ್ತು 122 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುತ್ತದೆ.

ಈ ಗ್ರ್ಯಾಂಡ್ ವಿಟಾರಾ ಡೊಮಿನಿಯನ್ ಲಿಮಿಟೆಡ್ ಎಡಿಷನ್ ಮಾದರಿಯ K15 1.5-ಲೀಟರ್ ಪೆಟ್ರೋಲ್ ಎಂಜಿನ್ 102 bhp ಮತ್ತು 137 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ. ಇದು ಆಲ್-ವೀಲ್ ಡ್ರೈವ್ ಆಯ್ಕೆಯೊಂದಿಗೆ ಸಹ ನೀಡಲಾಗುತ್ತದೆ.

ಇತ್ತೀಚೆಗೆ ಸೆಪ್ಟೆಂಬರ್ (2024) ತಿಂಗಳ ವಾಹನ ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿದೆ. ಬರೋಬ್ಬರಿ 1,84,727 ಯುನಿಟ್ (ದೇಶೀಯ ಮಾರಾಟ & ರಫ್ತು) ವಾಹನಗಳನ್ನು ಮಾರಾಟಗೊಳಿಸುವ ಮೂಲಕ ಶೇಕಡ 2% ಪ್ರಗತಿ ಸಾಧಿಸಿದೆ. 2023ರ ಇದೇ ಅವಧಿಯಲ್ಲಿ 1,81,343 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಮಿನಿ ಕಾರುಗಳಾದ ಆಲ್ಟೊ ಕೆ10 (Alto K10) ಮತ್ತು ಎಸ್-ಪ್ರೆಸ್ಸೊ (S-Presso) ಮಾರಾಟದಲ್ಲಿ ಕಂಪನಿಯು ಸ್ಥಿರತೆ ಕಾಯ್ದುಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 8, 2024, 18:02 [IST]
English summary
Maruti suzuki grand vitara dominion edition launched details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+