Maruti Grand Vitara: ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾಗೆ ಭಾರೀ ರಿಯಾಯಿತಿ, 27 ಕಿ.ಮೀ ಮೈಲೇಜ್, 10 ಲಕ್ಷ ಬೆಲೆ
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಜನಪ್ರಿಯ ಎಸ್‌ಯುವಿಯಾಗಿದ್ದು, ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ. ಈ ಜನವರಿ (2024) ಗ್ರ್ಯಾಂಡ್ ವಿಟಾರಾ ಭರ್ಜರಿ ರಿಯಾಯಿತಿ (discount) ಪ್ರಯೋಜನವನ್ನು ಪಡೆದುಕೊಂಡಿದೆ. ಆ ಬಗ್ಗೆ ಹೆಚ್ಚಿನ ವಿವರವನ್ನು ತಿಳಿಯೋಣ.
2023ರ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಾದರಿಗಳು ಒಟ್ಟು ರೂ.40,000 ಡಿಸ್ಕೌಂಟ್ ಆಫರ್ ಪಡೆದಿವೆ. ಇದರಲ್ಲಿ 15,000 ನಗದು ರಿಯಾಯಿತಿ (Cash discounts), ರೂ.20,000 ವಿನಿಮಯ ಬೋನಸ್ (Exchange bonus), ರೂ.5,000 ಕಾರ್ಪೊರೇಟ್ ಬೋನಸ್ (Corporate bonus) ಅನ್ನು ಒಳಗೊಂಡಿವೆ. 2024ರ ಮಾದರಿಗಳು ರೂ.20,000 ವಿನಿಮಯ ಬೋನಸ್ ಮತ್ತು 5,000 ಕಾರ್ಪೊರೇಟ್ ಬೋನಸ್ ಹೊಂದಿವೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara), ರೂ.10.70 ಲಕ್ಷದಿಂದ ರೂ.19.95 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಸಿಗ್ಮಾ, ಡೆಲ್ಟಾ ಮತ್ತು ಜಿಟಾ ಸೇರಿದಂತೆ 6 ರೂಪಾಂತರಗಳು, ಗ್ರ್ಯಾಂಡಿಯರ್ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಆರ್ಕ್ಟಿಕ್ ವೈಟ್, ಪರ್ಲ್ ಮಿಡ್ನೈಟ್ ಬ್ಲಾಕ್ ಒಳಗೊಂಡಂತೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.
ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಸಹಭಾಗಿತ್ವ ಹೊಂದಿರುವುದರಿಂದ ಹೈರ್ಡರ್ ರೀತಿಯಲ್ಲಿಯೇ ಗ್ರ್ಯಾಂಡ್ ವಿಟಾರಾ ಸಹ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಅವುಗಳೆಂದರೆ, 1.5 - ಲೀಟರ್ ಪೆಟ್ರೋಲ್ ಮೈಲ್ಡ್ ಹೈಬ್ರಿಡ್, 1.5 - ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್. ಕ್ರಮವಾಗಿ 103 PS & 116 PS ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.
ಸಿಎನ್‌ಜಿ ಕಿಟ್ ಪಡೆದಿರುವ ಕಾರು, 1.5 - ಲೀಟರ್ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಎಂಜಿನ್ ಪಡೆದಿದೆ. ಆದರೆ, 87.83 PS ಪವರ್, 121.5 Nm ಪೀಕ್ ಟಾರ್ಕ್ ಹೊರಹಾಕಲಷ್ಟೇ ಶಕ್ತವಾಗಿದೆ. 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ ಹಾಗೂ ಇ-ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.
ಮೈಲೇಜ್ ವಿಚಾರಕ್ಕೆ ಬರುವುದಾದರೆ, ಪೆಟ್ರೋಲ್ ರೂಪಾಂತರಗಳು 19.38 kmpl - 27.97kmpl, ಸಿಎನ್‌ಜಿ ರೂಪಾಂತರಗಳು 26.6km/kg ಇಂಧನ ದಕ್ಷತೆಯನ್ನು ಹೊಂದಿವೆ. ಈ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರಿನಲ್ಲಿ 5 ಜನ ಆರಾಮದಾಯಕವಾಗಿ ಕುಳಿತುಕೊಂಡು ಹೋಗಬಹುದು. ವಿನ್ಯಾಸದ ದೃಷ್ಟಿಯಿಂದ ಕೂಡ ಯುವ ಖರೀದಿದಾರರನ್ನು ಆಕರ್ಷಿಸುವ ಡಿಸೈನ್ ಹೊಂದಿದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಪಡೆದಿಕೊಂಡಿರುವ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, 9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್ ಹಾಗೂ ಹೆಡ್ಸ್ - ಅಪ್ ಡಿಸ್ಪ್ಲೇಯನ್ನು ಒಳಗೊಂಡಿದೆ.
ಈ ಕಾರು ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಪ್ರಮುಖವಾಗಿ 6 ಏರ್‌ಬ್ಯಾಗ್ಸ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360-ಡಿಗ್ರಿ ಕ್ಯಾಮೆರಾ, ಹಿಲ್-ಡಿಸೆಂಟ್ ಕಂಟ್ರೋಲ್, ISOFIX ಚೈಲ್ಡ್-ಸೀಟ್ ಆಂಕರ್ಸ್ ಅನ್ನು ಪಡೆದಿದೆ. ಗಮನಿಸಿ.. ಈ ರಿಯಾಯಿತಿ ಸೌಲಭ್ಯಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂ ಸಂಪರ್ಕಿಸಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications