ಆಟೋ ಉದ್ಯಮಕ್ಕೆ ಪ್ರಧಾನಿ ಮೋದಿ ಭರ್ಜರಿ ಕೊಡುಗೆ: ದೇಶದ ಮೊದಲ ಇನ್-ಪ್ಲಾಂಟ್ ರೈಲು
ಭಾರತದಲ್ಲಿ ಆಟೋ ಉದ್ಯಮ ಬೆಳೆಯುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿಯವರು ಕೂಡ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೊದಲ ಇನ್-ಪ್ಲಾಂಟ್ ರೈಲಿಗೆ ಚಾಲನೆ ನೀಡಿದರು. ಗುಜರಾತ್‌ನಲ್ಲಿರುವ ಮಾರುತಿ ಕಾರ್ಖಾನೆಯಲ್ಲಿ ಈ ಇನ್-ಪ್ಲಾಂಟ್ ಇದ್ದು, ಇದು ಭಾರತದ ಮೊದಲ ಇನ್‌ಪ್ಲಾಂಟ್ ರೈಲು ಸಾರಿಗೆಯಾಗಿದೆ. ಇದನ್ನು ಪ್ರಧಾನಿ ಮೋದಿಯವರು ವರ್ಚುವಲ್ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಈ ಉಪಕ್ರಮವು ಲಾಜಿಸ್ಟಿಕ್ಸ್ ಅನ್ನು ಹೆಚ್ಚಿಸುವುದು, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ ರಸ್ತೆ ದಟ್ಟಣೆಯನ್ನು ಸರಾಗಗೊಳಿಸುವ ಗುರಿಯನ್ನು ಹೊಂದಿದೆ. ಇನ್ನೂ ಮುಖ್ಯವಾಗಿ ರೈಲ್ವೆಯನ್ನು ಬಳಸಿಕೊಳ್ಳುವ ಮೂಲಕ, ಈ ಸೌಲಭ್ಯವು ಇಂಧನ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಒಂದು ರೈಲಿನ ಜಾಗದಲ್ಲಿ ಬಳಕೆಯಾಗುತ್ತಿದ್ದ ಸಾವಿರಾರು ಟ್ರಕ್‌ಗಳ ಬಳಕೆಯನ್ನು ಕಡುಮೆ ಮಾಡುತ್ತದೆ. ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸುತ್ತದೆ.

ಇದು ಭಾರತದಲ್ಲಿ ಹೊಸ ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಕಾರು ತಯಾರಕರು ವಾಹನಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಇದ್ದ ಸವಲುಗಳಿಗೆ ಇನ್-ಪ್ಲಾಂಟ್ ರೈಲು ಬಹುತೇಕ ಪರಿಹಾರವಾಗಲಿದೆ. ಪೂರ್ಣ ಕಾರ್ಯಾಚರಣೆಯ ಸಾಮರ್ಥ್ಯವನ್ನು ತಲುಪಿದ ನಂತರ, ಗುಜರಾತ್‌ನ ರೈಲ್ವೆ ಸೈಡಿಂಗ್ ಭಾರತದಾದ್ಯಂತ 15 ಸ್ಥಳಗಳಿಗೆ ವಾರ್ಷಿಕವಾಗಿ 3 ಲಕ್ಷ ಕಾರುಗಳನ್ನು ರವಾನಿಸಲು ಅನುಕೂಲವಾಗಲಿದೆ.
ಅಲ್ಲದೇ ಒಂದೇ ಬಾರಿ ಯಾವುದೇ ಅಡೆತಡೆಗಳಿಲ್ಲದೆ ನಿರ್ದಿಷ್ಟ ಸಮಯಕ್ಕೆ ಕಾರುಗಳು ಗಮ್ಯ ಸ್ಥಳಗಳಿಗೆ ತಲುಪಲಿವೆ. ರೈಲ್ವೆ ಮಾರ್ಗಕ್ಕೆ ಹೋಲಿಸಿಕೊಂಡರೆ ರಸ್ತೆ ಮಾರ್ಗ ಕೆಲವು ಅಡೆತಡೆಗಳನ್ನು ಹೊಂದಿರುತ್ತವೆ. ಹಾಗಾಗಿ ಇನ್-ಪ್ಲಾಂಟ್ ರೈಲ್ವೆ ಆಟೋ ಉದ್ಯಕ್ಕೆ ದೊಡ್ಡ ಕೊಡುಗೆಯಾಗಿದೆ. ಇದನ್ನು ಉತ್ತಮವಾಗಿ ಬಳಸಿಕೊಂಡರೆ ಆಟೋ ಉದ್ಯಮ ಸುಧಾರಣೆ ಕಾಣಲಿದೆ ಎಂದು ಮಾರುತಿ ಸುಜುಕಿ ಹೇಳಿದೆ.

ಈ ಹೊಸ ಉಪಕ್ರಮದ ಇತರ ಪ್ರಮುಖ ಪ್ರಯೋಜನಗಳೆಂದರೆ ವಾರ್ಷಿಕವಾಗಿ 1,650 ಮೆಟ್ರಿಕ್ ಟನ್ ಕಾರ್ಬನ್ ಹೊರಸೂಸುವಿಕೆ ಕಡಿಮೆಯಾಗಲಿದೆ. ಅದಕ್ಕಿಂತ ಹೆಚ್ಚಾಗಿ, ರೈಲ್ವೆ ಸೈಡಿಂಗ್ ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿರುತ್ತದೆ. ಇದಲ್ಲದೆ, ಕಾರುಗಳನ್ನು ಸಾಗಿಸಲು ಮಾಡಿದ ಟ್ರಕ್ ಟ್ರಿಪ್‌ಗಳನ್ನು ವರ್ಷಕ್ಕೆ 50,000 ಟ್ರಿಪ್‌ಗಳವರೆಗೆ ಕಡಿತಗೊಳಿಸಲಾಗುವುದು ಎಂದು ರೈಲ್ವೆ ಖಚಿತಪಡಿಸಿದೆ.
ಮಾರುತಿ ಭರ್ಜರಿ ಡಿಸ್ಕೌಂಟ್: ಮಾರುತಿ ಆಲ್ಟೊ ಕೆ10 (Alto K10) ಆಟೋಮೆಟಿಕ್ ರೂಪಾಂತರ ಒಟ್ಟು ರೂ.62,000, ಮ್ಯಾನುವಲ್ ಆವೃತ್ತಿ ರೂ.57,000 ಮತ್ತು ಸಿಎನ್‌ಜಿ ರೂಪಾಂತರ ರೂ.40,000 ಡಿಸ್ಕೌಂಟ್ ಆಫರ್ ಪಡೆದಿದೆ. ಈ ಕಾರು ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಗರಿಷ್ಠ ಮೈಲೇಜ್ ನೀಡುವುದರೊಂದಿಗೆ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಆಟೊಮೇಟಿಕ್ ರೂಪಾಂತರ ಒಟ್ಟು ರೂ. 61,000, ಮ್ಯಾನುವಲ್ ಮಾದರಿ ರೂ. 56,000 ಮತ್ತು ಸಿಎನ್‌ಜಿ ರೂಪಾಂತರ ರೂ. 39,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಈ ಕಾರು ರೂ. 4.27 ಲಕ್ಷದಿಂದ ರೂ. 6.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. 24.12 ರಿಂದ 32.73 ಕೆಎಂ/ಕೆಜಿ ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಸೆಲರಿಯೊ ಕೂಡ ಈ ಮಾರ್ಚ್ ತಿಂಗಳು ಉತ್ತಮ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಆಟೋಮೆಟಿಕ್ ಮಾದರಿ ರೂ. 61,000, ಮ್ಯಾನುವಲ್ ರೂಪಾಂತರ ರೂ. 56,000 ಮತ್ತು ಸಿಎನ್‌ಜಿ ಆವೃತ್ತಿ ರೂ. 39,000 ಡಿಸ್ಕೌಂಟ್ ಆಫರ್ ಒಳಗೊಂಡಿದೆ. ಸೆಲರಿಯೊ ರೂ. 5.37 ಲಕ್ಷದಿಂದ ರೂ. 7.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications