ಏನ್ ಗುರು ಇದು..! ಮಾರುತಿ ಸುಜುಕಿ ಕಾರುಗಳಿಗಾಗಿ ಕ್ಯೂ ನಿಂತ ಗ್ರಾಹಕರು: ಎಷ್ಟು ಲಕ್ಷ ವಿತರಣೆಯಾಗಬೇಕು ಗೊತ್ತಾ?
ಭಾರತದ ವಾಹನ ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟ ಪ್ರಮಾಣ ಕೊಂಚ ಮಟ್ಟಿಗೆ ಇಳಿಮುಖವಾಗಿದೆ. ಆದಾಗ್ಯೂ ಆಕರ್ಷಕ ವೈಶಿಷ್ಟ್ಯದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ (Maruti Suzuki) ಕಂಪನಿಯ ಕಾರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಭಾರಿ ಸಂಖ್ಯೆಯಲ್ಲಿ ಕೂಡ ಮಾರಾಟವಾಗುತ್ತಿವೆ. ಸದ್ಯ, ಸೆಪ್ಟೆಂಬರ್‌ನಲ್ಲಿ (2024) ಕಂಪನಿಯು ಗ್ರಾಹಕರಿಗೆ ಪೂರೈಸಬೇಕಾದ ಒಟ್ಟು ಕಾರುಗಳು ಎಷ್ಟಿದೆ ಎಂಬುದರ ಕುರಿತಂತೆ ವಿವರಗಳು ಬಹಿರಂಗಗೊಂಡಿವೆ. ಈ ಸಂಖ್ಯೆಯನ್ನು ಕಂಡು ಪ್ರತಿಸ್ಪರ್ಧಿ ಕಂಪನಿಗಳಿಗೂ ನಡುಕ ಉಂಟಾಗಿದೆ.
ಮಾರುತಿ ಸುಜುಕಿ, ದೇಶೀಯ ಗ್ರಾಹಕರಿಗೆ ಬರೋಬ್ಬರಿ 1.65 ಲಕ್ಷ ಕಾರುಗಳನ್ನು ವಿತರಣೆ ಮಾಡಬೇಕಾಗಿದೆ. ಇವುಗಳಲ್ಲಿ ಸಿಎನ್‌ಜಿ ಚಾಲಿತ ಮಾದರಿಗಳೇ 40% ಪಾಲನ್ನು ಹೊಂದಿವೆ. ವಿಶೇಷವಾಗಿ ಸಿಎನ್‌ಜಿ ವಿಭಾಗದಲ್ಲಿ ಬ್ರೆಝಾ (Brezza), ಎರ್ಟಿಗಾ (Ertiga) ಹಾಗೂ ಡಿಜೈರ್ (Dzire) ಕಾರುಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಕೆಲವೇ ದಿನಗಳ ಹಿಂದೆ, ಬಿಡುಗಡೆಯಾಗಿರುವ ಸ್ವಿಫ್ಟ್ ಸಿಎನ್‌ಜಿ (Swift CNG) ಹ್ಯಾಚ್‌ಬ್ಯಾಕ್‌ನಿಂದಲೂ ಸಿಎನ್‌ಜಿ ಕಾರುಗಳ ಮಾರಾಟ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಆರಂಭಿಕ ಶ್ರೇಣಿ ಮಾದರಿಗಳಾದ (ಎಂಟ್ರಿ ಲೆವೆಲ್ ಮಾಡೆಲ್) ಆಲ್ಟೊ, ಎಸ್-ಪ್ರೆಸ್ಸೊ ಮತ್ತು ಸೆಲೆರಿಯೊ ಕಾರುಗಳ ಮಾರಾಟವನ್ನು ಹೆಚ್ಚಿಸಲು ಕಂಪನಿಯು ಮುಂದಾಗಿದೆ. ಇವುಗಳ 'ಡ್ರೀಮ್ ಸಿರೀಸ್' ರೂಪಾಂತರಗಳನ್ನು (ವೇರಿಯೆಂಟ್) ಕಡಿಮೆ ಬೆಲೆಗೆ ಪರಿಚಯಿಸಿದ್ದು, ಮಾರಾಟ ಅಂಕಿಸಂಖ್ಯೆ ನಿಧಾನವಾಗಿ ಚೇತರಿಕೊಳ್ಳುವ ಸಾಧ್ಯತೆಯಿದೆ. ಇತ್ತೀಚೆಗೆ, 2024ರ ಆಗಸ್ಟ್‌ನಲ್ಲಿ ದೇಶದಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿತ್ತು. ಮಾರುತಿ ಸುಜುಕಿ ಬರೋಬ್ಬರಿ 6 ಕಾರುಗಳೊಂದಿಗೆ ತನ್ನ ಪ್ರಾಬಲ್ಯ ಮುಂದುವರಿಸಿತ್ತು.
ಕಳೆದ ತಿಂಗಳು (ಆಗಸ್ಟ್ 2024) ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಎಸ್‌ಯುವಿ ಮೊದಲ ಸ್ಥಾನದಲ್ಲಿದ್ದು, ಒಟ್ಟು 19,190 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. 18,580 ಯುನಿಟ್‌ನೊಂದಿಗೆ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಫ್ಯಾಮಿಲಿ ಎಂಪಿವಿ ಎರಡನೇ ಸ್ಥಾನದಲ್ಲಿದೆ.

ನಾಲ್ಕನೇ ಸ್ಥಾನದಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಹ್ಯಾಚ್‌ಬ್ಯಾಕ್ ಇದ್ದು, 16,450 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಏಳನೇ ಸ್ಥಾನದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ (12,844 ಯುನಿಟ್), ಎಂಟನೇ ಸ್ಥಾನದಲ್ಲಿ ಮಾರುತಿ ಸುಜುಕಿ ಬಲೆನೊ (12,485 ಯುನಿಟ್) ಹಾಗೂ ಒಂಬತ್ತನೇ ಸ್ಥಾನದಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ (12,387 ಯುನಿಟ್) ಕಾರುಗಳಿವೆ.
ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ (Maruti Suzuki Swift CNG) ಹ್ಯಾಚ್‌ಬ್ಯಾಕ್ ಬಗ್ಗೆ ಹೇಳುವುದಾದರೆ, ಇದು ರೂ.8.19 ಲಕ್ಷದಿಂದ ರೂ.9.19 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.2-ಲೀಟರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್ ಹಾಗೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ. 32.85 ಕೆಎಂ/ಕೆಜಿ ಮೈಲೇಜ್ ನೀಡುತ್ತದೆ.
ಈ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ ಕಾರು ವಿಎಕ್ಸ್ಐ, ವಿಎಕ್ಸ್ಐ (ಒ) ಮತ್ತು ಝಡ್ಎಕ್ಸ್ಐ ಎಂಬ ರೂಪಾಂತರಗಳನ್ನು (ವೇರಿಯೆಂಟ್) ಹೊಂದಿದ್ದು, 5-ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಲಭ್ಯವಿದೆ. 7-ಇಂಚಿನ ಸ್ಮಾರ್ಟ್ ಪ್ಲೇ ಪ್ರೊ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 6 ಏರ್‌ಬ್ಯಾಗ್‌ಗಳು ಸೇರಿದಂತೆ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications