Maruti Suzuki: ಮಾರುತಿ ಸುಜುಕಿಯಿಂದ ತಿಂಗಳಾರಂಭದಲ್ಲೇ ಗುಡ್‌ನ್ಯೂಸ್.. ದಿಢೀರ್ ಬೆಲೆ ಇಳಿಕೆ
ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಕೊಂಡಿದೆ. ನೆಕ್ಸಾ ಹಾಗೂ ಅರೆನಾ ಡೀಲರ್‌ಶಿಪ್ ಮೂಲಕ ಹತ್ತಾರು ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯ ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿಗಳು ಅತ್ಯಾಧುನಿಕ ವೈಶಿಷ್ಟ್ಯದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವುದರಿಂದ ಗ್ರಾಹಕರು ಕೂಡ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಸದ್ಯ ಹೊಸ ಕಾರು ತೆಗೆದುಕೊಳ್ಳಬೇಕೆಂದು ಪ್ಲ್ಯಾನ್ ಮಾಡುತ್ತಿರುವ ದುಡಿಯುವ ವರ್ಗದ ಜನರಿಗೆ ಜೂನ್ ತಿಂಗಳಾರಂಭದಲ್ಲೇ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಬನ್ನಿ.. ಆ ಕುರಿತಂತೆ ಹೆಚ್ಚಿನ ವಿವರವನ್ನು ತಿಳಿಯೋಣ.
ಮಾರುತಿ ಸುಜುಕಿ ಇಂಡಿಯಾ (Maruti Suzuki India - MSI) ಶನಿವಾರ (ಜೂನ್ 1) ತನ್ನ ಆಟೋ ಗೇರ್ ಶಿಫ್ಟ್ (Auto Gear Shift - AGS) ಸರಣಿಯ ವಿವಿಧ ಕಾರುಗಳ ಬೆಲೆಯನ್ನು ಕಡಿಮೆ ಮಾಡಿರುವುದಾಗಿ ಘೋಷಿಸಿದೆ. ಈ ದರ ಇಳಿಕೆಯು ಆಲ್ಟೊ ಕೆ10, ಎಸ್-ಪ್ರೆಸ್ಸೊ, ಸೆಲೆರಿಯೊ, ವ್ಯಾಗನ್ಆರ್, ಸ್ವಿಫ್ಟ್, ಡಿಜೈರ್, ಬಲೆನೊ, ಫ್ರಾಂಕ್ಸ್, ಮತ್ತು ಇಗ್ನಿಸ್ ಒಳಗೊಂಡಂತೆ ಹಲವು ಮಾದರಿ (ಮಾಡೆಲ್)ಗಳಿಗೆ ಅನ್ವಯಿಸುತ್ತದೆ.

ಈ ಆಟೋ ಗೇರ್ ಶಿಫ್ಟ್ (ಎಜಿಎಸ್) ಆವೃತ್ತಿಗಳ ಮೇಲೆ ರೂ.5,000 ಬೆಲೆಯನ್ನು ಇಳಿಸಲಾಗಿದ್ದು, ನೂತನ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ. ಆದರೆ ಬೆಲೆ ಕಡಿತ ಬಗ್ಗೆ ಕಂಪನಿಯು ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ಎಜಿಎಸ್ ಮಾದರಿಗಳನ್ನು ಖರೀದಿದಾರರಿಗೆ ಕೈಗೆಟುಕುವಂತೆ ಮಾಡಲು ಈ ದರವನ್ನು ಇಳಿಸಲಾಗಿದೆ ಎಂದು ವರದಿಯಾಗಿದೆ.
2014ರಲ್ಲಿ ಮಾರುತಿ ಸುಜುಕಿಯು ತನ್ನ ಕಾರುಗಳಲ್ಲಿ ಆಟೋ ಗೇರ್ ಶಿಫ್ಟ್ ತಂತ್ರಜ್ಞಾನ (ಟೆಕ್ನಾಲಜಿ)ವನ್ನು ಪರಿಚಯಿಸಿತ್ತು. ಸರಳವಾಗಿ ಹೇಳಬೇಕಾದರೆ ಇದೊಂದು ಆಟೋಮೆಟಿಕ್ ಟ್ರಾಸ್ಮಿಷನ್ ಟೆಕ್ನಾಲಜಿಯಾಗಿದ್ದು, ಹೆದ್ದಾರಿಯಲ್ಲಿ ಕಾರನ್ನು ಓಡಿಸುವಾಗ ಚಾಲಕರಿಗೆ ಉತ್ತಮ ರೀತಿಯಲ್ಲಿ ನೆರವಾಗುತ್ತದೆ. ಅದರಲ್ಲೂ ಹಸ್ತಚಾಲಿತ (ಮ್ಯಾನುವಲ್)ವಾಗಿ 1-2-3-4-5 ಎಂದು ಗೇರ್ ಬದಲಾಯಿಸುವ ಅಗತ್ಯವೇ ಇರುವುದಿಲ್ಲ. ಈ ತಂತ್ರಜ್ಞಾನವನ್ನು ಹೊಂದಿರುವ ಕಾರುಗಳಲ್ಲಿ ಇಂಧನ (Fuel) ಸಹ ಉಳಿತಾಯವಾಗಲಿದೆ.
ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಮಾಡೆಲ್ (ಆರಂಭಿಕ ಮಾದರಿ) ಆಗಿರುವ ಆಲ್ಟೊ ಕೆ10 ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಸಿಗುವ ಈ ಕಾರು, 24.39 ರಿಂದ 33.85 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಹ್ಯಾಚ್‌ಬ್ಯಾಕ್ ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಇದು ರೂ.5.37 ಲಕ್ಷದಿಂದ ರೂ.7.09 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದ್ದು, ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ. 7-ಇಂಚಿನ ಟಚ್‌ಸ್ಕ್ರೀನ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಕೀಲೆಸ್ ಎಂಟ್ರಿ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿ ಎಸ್-ಪ್ರೆಸ್ಸೊ ರೂ.4.26 ಲಕ್ಷದಿಂದ ರೂ.6.12 ಲಕ್ಷ, ವ್ಯಾಗನ್ಆರ್ ರೂ.5.54 - ರೂ.7.38 ಲಕ್ಷ, ಸ್ವಿಫ್ಟ್ ರೂ.5.99 ಲಕ್ಷದಿಂದ ರೂ.9.64 ಲಕ್ಷ, ಡಿಜೈರ್ ರೂ.6.57 - ರೂ.9.39 ಲಕ್ಷ, ಬಲೆನೊ ರೂ.8.48 ಲಕ್ಷದಿಂದ ರೂ.12.24 ಲಕ್ಷ, ಫ್ರಾಂಕ್ಸ್ ರೂ.7.51 ರಿಂದ ರೂ.13.04 ಲಕ್ಷ ಮತ್ತು ಇಗ್ನಿಸ್ ರೂ.5.84 - ರೂ.8.11 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications