ಮಾರುತಿಯ ಅತೀ ದೊಡ್ಡ ಕಾರು ಖರಿದಿಸಬೇಕೆ?: ಇಲ್ಲಿದೆ EMI, ಡೌನ್‌ಪೇಮೆಂಟ್‌ ಕುರಿತ ಸಂಪೂರ್ಣ ಮಾಹಿತಿ!

ಭಾರತದಲ್ಲಿ ನೀವೊಂದು ಉತ್ತಮ ಸೆವೆನ್‌ ಸೀಟರ್‌ ಕಾರು ಬೇಕೆಂದುಕೊಂಡರೆ ಅದಕ್ಕೆ ಮಾರುತಿ ಸುಜುಕಿ ಇನ್ವಿಕ್ಟೋ ಉತ್ತಮ ಆಯ್ಕೆ. ಟೊಯೋಟಾ ಹೈಕ್ರಾಸ್ ಕಾರಿನ ರಿ ಬ್ಯಾಡ್ಜಿಂಗ್‌ ಆವೃತ್ತಿಯಾಗಿರುವ ಮಾರುತಿ ಸುಜುಕಿ ಇನ್ವಿಕ್ಟೋ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಈ ಕಾರನ್ನು ಕೊಳ್ಳುವವರಿಗೆ ಈ ಕಾರಿನ ಇಎಂಐ ಎಷ್ಟು, ಆನ್‌ ರೋಡ್‌ ಬೆಲೆ ಎಷ್ಟು ಎಂದೆಲ್ಲಾ ಸಾಕಷ್ಟು ಸಂಶಯಗಳಿರುತ್ತದೆ. ಇಂದಿನ ಈ ಲೇಖನದಲ್ಲಿ ಈ ಕಾರಿನ ಇಎಂಐ, ಡೌನ್‌ಪೇಮೆಂಟ್ ಮತ್ತು ಇನ್ನಿತರ ವಿಷಯಗಳ ಕುರಿತಾಗಿ ನೋಡಲಿದ್ದು, ಸ್ನೇಹಿತರೊಂದಿಗೆ ಶೇರ್‌ ಮಾಡಿ.

ಮೊದಲಿಗೆ ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಇನ್ವಿಕ್ಟೋ ಆರಂಭಿಕ ವೇರಿಯಂಟ್ ಆನ್‌ ರೋಡ್‌‌ ಬೆಲೆ ಆರಂಭವಾಗುವುದು 31,43,255 ರೂಪಾಯಿಗಳು. ಇದರಲ್ಲಿ ಎಕ್ಸ್‌ ಶೋರೂಮ್‌ ಬೆಲೆ ಸುಮಾರು 25,30,500 ಲಕ್ಷಗಳು. ಇದರ ಜೊತೆಗೆ ಇನ್ಸುರೆನ್ಸ್‌ ಮತ್ತು ಆರ್‌ಟಿಒ ಟ್ಯಾಕ್ಸ್‌ಗಳು ಸೇರಿ ಸುಮಾರು 31,43,255 ಲಕ್ಷ ರೂಗಳಿಗೆ ನಿಮಗೆ ಸಿಗುತ್ತದೆ.

Maruti Suzuki Invicto EMI Down payment Engine and Other Details

ಇನ್ನಿದರ ಡೌನ್‌ ಪೇಮೆಂಟ್‌ ಬಗ್ಗೆ ನೋಡುವುದಾದರೆ ನೀವು ಈ ವಾಹನಕ್ಕೆ 5,00,000 ರೂ ಡೌನ್‌ ಪೇಮೆಂಟ್ ಮಾಡಿದರೆ ಸುಮಾರು ೯.೮ % ಬಡ್ಡಿದರದಲ್ಲಿ ೭ ವರ್ಷಗಳ ಕಾಲಾವಧಿಯ ಲೋನ್‌ ಮಾಡಬಹುದು. ಹೀಗೆ ಮಾಡಿದಾಗ ನೀವು ಪ್ರತೀ ತಿಂಗಳು ಇಎಂಐ ರೂಪದಲ್ಲಿ ಸುಮಾರು 43,604 ರೂಪಾಯಿಗಳಷ್ಟು ಹಣವನ್ನು ಪಾವತಿಸಬೇಕಾಗುತ್ತದೆ.

ಈ ಕಾರಿನ ಎಂಪಿವಿ ಬಗ್ಗೆ ನೋಡುವುದಾದರೆ, ಎಂಪಿವಿ ಝೀಟಾ ಪ್ಲಸ್ (Zeta Plus) ಮತ್ತು ಆಲ್ಫಾ ಪ್ಲಸ್ (Alpha Plus) ರೂಪಾಂತರ ಹಾಗೂ ಐದು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇನ್ನೋವಾ ಹೈಕ್ರಾಸ್‌ ಕಾರಿನ ಬಹುತೇಕ ಅದೇ ಡಿಸೈನ್‌ ಲ್ಯಾಂಗ್ವೇಜ್ ಅನ್ನು ಈ ಕಾರು ಹೊಂದಿದೆ.

Maruti Suzuki Invicto EMI Down payment Engine and Other Details

ಎಂಜಿನ್‌: ಏಳು ಅಥವಾ ಎಂಟು ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುವ ಮಾರುತಿ ಸುಜುಕಿ ಇನ್ವಿಕ್ಟೋ, 2 - ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 186 PS ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. e - CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, 23.24 kmpl ಮೈಲೇಜ್ ನೀಡುತ್ತದೆ

ಫೀಚರ್‌ಗಳು: ಈಗಿನ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ರೂಫ್ ಆಂಬಿಯೆಂಟ್ ಲೈಟಿಂಗ್, ಸನ್‌ರೂಫ್, ಫೋನ್ ಚಾರ್ಜಿಂಗ್ ವಿವಿಧ ಫೀಚರ್ಸ್ ಹೊಂದಿದೆ.

ಸುರಕ್ಷತೆ: ಸುರಕ್ಷತೆಯ ದೃಷ್ಟಿಯಿಂದ ಮಾರುತಿ ಸುಜುಕಿ ಇನ್ವಿಕ್ಟೋ ಎಂಪಿವಿ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) 360 ಡಿಗ್ರಿ ಕ್ಯಾಮೆರಾ ಮತ್ತು ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಹೊಂದಿದೆ. ಈ ಕಾರಿಗೆ ಟೊಯೊಟಾ ಇನ್ನೋವಾ ಹೈಕ್ರಾಸ್, ಇನ್ನೋವಾ ಕ್ರಿಸ್ಟಾ ಹಾಗೂ ಕಿಯಾ ಕ್ಯಾರೆನ್ಸ್‌ ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, June 25, 2024, 18:13 [IST]
English summary
Maruti suzuki invicto emi down payment engine and other details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+