ಸಿಂಗಲ್‌ ಚಾರ್ಜ್‌ಗೆ ಬರೋಬ್ಬರಿ 550 ಕಿಮೀ ರೇಂಜ್: ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಮಾರುತಿ ಎಲೆಕ್ಟ್ರಿಕ್!

ಎಲೆಕ್ಟ್ರಿಕ್‌ ವಾಹನಗಳು ಮುಖ್ಯ ಭೂಮಿಕೆಗೆ ಬರುತ್ತಿರುವ ಈ ಸಂಧರ್ಭದಲ್ಲಿ ಬಹುತೇಕ ಎಲ್ಲಾ ಕಾರು ತಯಾರಿಕಾ ಕಂಒನಿಗಳು ಸಹ ಅತ್ತ ಮುಖ ಮಾಡುತ್ತಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಎಲೆಕ್ಟ್ರಿಕ್‌ ಕಾರುಗಳು ಕಾರ್ಯ ನಿರ್ವಹಿಸುತ್ತಿದ್ದರೂ ಅದರಲ್ಲಿ ಮಾರುತಿ ಸುಜುಕಿ ಮಾತ್ರ ಒಂದೇ ಒಂದು ಎಲೆಕ್ಟ್ರಿಕ್‌ ಕಾರು ಮಾದರಿಯನ್ನು ಮಾರುಕಟ್ಟೆಗೆ ಬಿಟ್ಟಿಲ್ಲ.

2024 ರಲ್ಲಿಯೇ ಮಾರುತಿ ಸುಜುಕಿ ಎವಿಎಕ್ಸ್‌ (Maruti Suzuki EVX) ಎಂಬ ಎಲೆಕ್ಟ್ರಿಕ್‌ ಕಾರನ್ನು ಮಾರುಕಟ್ಟೆಗೆ ತರಬೇಕುತ್ತು. ಆದರೆ ಕಾರಣಾಂತರಹಗಳಿಂದ ಇದು ಸಾಧ್ಯವಾಗಿರಲಿಲ್ಲ. 2023ರ ಆಟೋ ಎಕ್ಸ್ಪೋದಲ್ಲಿ ಮಾರುತಿ ಸುಜುಕಿ ಮೊದಲ ಬಾರಿಗೆ ಇವಿಎಕ್ಸ್ ಎಂಬ ಎಲೆಕ್ಟ್ರಿಕ್‌ ಕಾರು ಮಾದರಿಯನ್ನು ಅನಾವರಣಗೊಳಿಸಿತ್ತು. ಆದರೆ ಇದೀಗ ಮುಂದಿನ ವರ್ಷದ ಮೊದಲಾರ್ಧದಲ್ಲಿ ಈ ಕಾರು ಮಾರುಕಟ್ಟೆಗೆ ಬರುವ ಸೂಚನೆಯಿದೆ.

Maruti Suzuki is Set To Launch Its First-Ever Electric Vehicle EVX in The First Half of 2025

ಮಾರುತಿ ಸುಜುಕಿ ಇವಿಎಕ್ಸ್‌ (EVX) ಮಾರುಕಟ್ಟೆಗೆ ಬಂದರೆ ಈಗಿರುವ ಎಲೆಕ್ಟ್ರಿಕ್‌ ಎಸ್‌ಯುವಿಗಳ ಜೊತೆ ಸ್ಪರ್ಧಿಸಬೇಕಾಗುತ್ತದೆ. ಈ ಕಾರಿನ ಪ್ರಮುಖ ಎದುರಾಳಿಗಳೆಂದರೆ ಮುಂಬರಲಿರುವ ಟಾಟಾ ಕರ್ವ್ ಎಲೆಕ್ಟ್ರಿಕ್‌, ಹ್ಯುಂಡೈ ಕ್ರೇಟಾ ಎಲೆಕ್ಟ್ರಿಕ್‌, ಮಹೀಂದ್ರಾ ಎಕ್ಸ್‌ಯುವಿ ೪೦೦ ಮುಂತಾದವು. ಮಾರುತಿಯ ಕಾರಾಗಿರುವುದರಿಂದ ಇವಿಎಕ್ಸ್‌ ಈ ಎಲ್ಲಾ ಎದುರಾಳಿಗಳ ಮುಂದೆ ಸ್ಪಷ್ಟ ಬಹುಮತದೊಂದಿಗೆ ಯಶಸ್ವಿಯಾಗಲಿದೆ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

ಪ್ರಮುಖವಾಗಿ ಈ ಕಾರಿನ ರೇಂಜ್‌ ಎಷ್ಟಿರಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಮಾಹಿತಿಗಳ ಪ್ರಕಾರ ಈ ಕಾರು ಸುಮಾರು 550 ಕಿಮೀ ರೇಂಜ್‌ ಇಡಲಿದೆ ಎಂದು ಹೇಳುತ್ತಿದ್ದು, ಇಷ್ಟು ರೇಂಜ್‌ ಈ ಕಾರು ನೀಡಿದರೆ ಖಂಡಿತಾ ಮಾರುಕಟ್ಟೆಯಲ್ಲಿ ಬಹುದೊಡ್ಡ ಯಶಸ್ಸನ್ನು ದಾಖಲಿಸುತ್ತದೆ ಎಂಬುದು ಹಲವು ಕಾರು ಪಂಡಿತರ ಅಭಿಪ್ರಾಯ.

Maruti Suzuki is Set To Launch Its First-Ever Electric Vehicle EVX in The First Half of 2025

ಇನ್ನು ಮಾರುತಿ ಸುಜುಕಿ ಇವಿಎಕ್ಸ್‌ ಬಗ್ಗೆ ನೊಡುವುದಾದರೆ, ಭಾರತೀಯ ರಸ್ತೆಗಳಲ್ಲಿ ಈ ಕಾರು ಟೆಸ್ಟ್‌ರನ್‌ ಮಾಡುತ್ತಿರುವ ಚಿತ್ರಗಳು ಈ ಹಿಂದೆಯೇ ಸೋರಿಕೆಯಾಗಿತ್ತು. ಈ ಪರೀಕ್ಷಾ ಸಮಯದಲ್ಲಿ ಕಾರಿನ ಕೆಲವು ಚಿತ್ರಗಳು ಹೊರಬಂದಿದ್ದು, ಈ ಚಿತ್ರಗಳು ಕೆಲವು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿವೆ. ಮಾರುತಿ ಇವಿಎಕ್ಸ್ ದೊಡ್ಡ ಇಂಟೀರಿಯರ್, ಹೊಸ 2 - ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್ ಕಾಣಿಸಿಕೊಂಡಿದೆ.

ಇವಿಷ್ಟೇ ಅಲ್ಲದೇ ಡ್ರೈವ್ ಮೋಡ್‌ಗಳಿಗಾಗಿ ರೋಟರಿ ಡಯಲ್, ಹೊಸ ಫ್ರೀಸ್ಟಾಂಡಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಇಂಟೀರಿಯರ್ ಕ್ರೋಮ್ ಡೋರ್ ಹ್ಯಾಂಡಲ್‌ಗಳು ಮತ್ತು ಆಟೋ - ಡಿಮ್ಮಿಂಗ್ ಐಆರ್‌ವಿಎಂ ಅನ್ನು ಒಳಗೊಂಡಿದೆ. ಹಾಗೆಯೇ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಹೊಸ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ ಅಲಾಯ್ ವೀಲ್‌ಗಳು, ಶಾರ್ಕ್ - ಫಿನ್ ಆಂಟೆನಾ ಮತ್ತು ಎಲ್‌ಇಡಿ ಟೈಲ್ ಲೈಟ್‌ಗಳನ್ನು ಹೊಂದಿದೆ.

ಮಾರುತಿ ಸುಜುಕಿ ಕಂಪನಿಯು ಹೊಸ ಇವಿಎಕ್ಸ್ ಕಾರಿನ ಸಂಪೂರ್ಣ ತಾಂತ್ರಿಕ ವಿಶೇಷತೆಗಳನ್ನು ಬಹಿರಂಗಪಡಿಸಿಲ್ಲ. ನಮಗೆ ತಿಳಿದಿರುವ ಸಂಗತಿಯೆಂದರೆ, ಈ ಮಾದರಿಯು ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾದ 60 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನಿಂದ ಚಾಲನೆಗೊಳ್ಳಲಿದೆ, ಇದು ಸಿಂಗಲ್ ಪೂರ್ಣ ಚಾರ್ಜ್‌ನಲ್ಲಿ 550 ಕಿ.ಮೀ ರೇಂಜ್ ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, May 13, 2024, 18:23 [IST]
English summary
Maruti suzuki is set to launch its first ever electric vehicle evx in the first half of 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+