Maruti Suzuki: ಮಾರುತಿ ಸುಜುಕಿಯಿಂದ ಬರಲಿವೆ ಹಾರುವ ಎಲೆಕ್ಟ್ರಿಕ್ ಕಾರುಗಳು?.. ಇನ್ನೂ ಟ್ರಾಫಿಕ್ ಕಿರಿಕಿರಿಗೆ ಗುಡ್ ಬೈ!
ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆ ಮಾರುತಿ ಸುಜುಕಿ, ತನ್ನ ಮಾತೃಸಂಸ್ಥೆ 'ಸುಜುಕಿ' ಜೊತೆಗೂಡಿ ಎಲೆಕ್ಟ್ರಿಕ್ ಏರ್ ಕಾಪ್ಟರ್ (ಹಾರುವ ಕಾರು)ಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಒಂದೊಮ್ಮೆ ಈ ಏರ್ ಕಾಪ್ಟರ್‌ಗಳು ಓಡಾಟವನ್ನು ಶುರು ಮಾಡಿದರೆ, ಸಂಚಾರ ದಟ್ಟಣೆಯ ಸಮಸ್ಯೆ ಸುಲಭವಾಗಿ ಬಗೆಹರಿಯುತ್ತದೆ.
ಸುಜುಕಿ ತಯಾರಿಸಲಿರುವ ಈ ಏರ್ ಕಾಪ್ಟರ್‌ಗಳು ಡ್ರೋನ್‌ಗಳಿಗಿಂತ ದೊಡ್ಡದಾಗಿರಲಿವೆ. ಆದರೆ, ಹೆಲಿಕಾಪ್ಟರ್‌ಗಳಿಗೆ ಹೋಲಿಕೆ ಮಾಡಿದರೆ ಚಿಕ್ಕದಾಗಿರಲಿವೆ. ಪೈಲಟ್ ಸೇರಿದಂತೆ ಮೂವರು ಆರಾಮದಾಯವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗುತ್ತಿದೆ ಎಂಬ ವಿವರಗಳು ಲಭ್ಯವಾಗಿದೆ. ಇವು ಯಾವುದೇ ಅಡೆ - ತಡೆಯಿಲ್ಲದೆ ಪ್ರಯಾಣಿಕರನ್ನು ನಿರ್ದಿಷ್ಟ ಗಮ್ಯ ಸ್ಥಾನವನ್ನು ವೇಗವಾಗಿ ತಲುಪಿಸಲು ನೆರವಾಗಲಿವೆ ಎನ್ನಲಾಗಿದೆ.

ಸುಜುಕಿ (Suzuki) ಆರಂಭದಲ್ಲಿ ಈ ಏರ್ ಕಾಪ್ಟರ್‌ಗಳನ್ನು ಜಪಾನ್ ಮತ್ತು ಅಮೆರಿಕದಲ್ಲಿ ಪರಿಚಯಿಸಲು ಯೋಜಿಸಿದ್ದು, ಆ ನಂತರದ ವರ್ಷಗಳಲ್ಲಿ ಭಾರತಕ್ಕೆ ತರುವ ಗುರಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ. ಏರ್ ಕಾಪ್ಟರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಮೇಲೆ ಪ್ರಪಂಚದ ಸಾರಿಗೆ ಕ್ಷೇತ್ರದಲ್ಲಿ ದೊಡ್ಡಮಟ್ಟದ ಕಾಂತ್ರಿ ನಡೆದರೂ ಅಚ್ಚರಿಯಿಲ್ಲ.
ಮಾರುತಿ ಸುಜುಕಿ (Maruti Suzuki), ದೇಶೀಯ ಮಾರುಕಟ್ಟೆಯಲ್ಲಿ ಏರ್ ಕಾಪ್ಟರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಳಿಸಲು ಅದರ ವೆಚ್ಚವನ್ನು ಕಡಿಮೆ ಮಾಡಲೇಬೇಕು. ಆ ಕಾರಣಕ್ಕೆ ಏರ್ ಕಾಪ್ಟರ್‌ಗಳನ್ನು ಸ್ಥಳೀಯವಾಗಿ ಉತ್ಪಾದನೆಗೊಳಿಸಲು ಚಿಂತನೆಯನ್ನು ನಡೆಸುತ್ತಿದೆ. ಇವುಗಳನ್ನು ವಾಯುಯಾನ (Aviation) ಕ್ಷೇತ್ರದಲ್ಲಿ ಉಪಯೋಗಿಸಲು ಸಂಬಂಧಪಟ್ಟ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ದೊಂದಿಗೆ ಚರ್ಚೆಗಳು ಸಹ ನಡೆಯುತ್ತಿವೆ ಎಂದು ಸುಜುಕಿ ಮೋಟಾರ್‌ನ ಅಧಿಕಾರಿಗಳು ಹೇಳಿದ್ದಾರೆ ಎಂದು ಗೊತ್ತಾಗಿದೆ.

ಸ್ಕೈಡ್ರೈವ್ (SkyDrive) ಹೆಸರಿನ ಈ ಎಲೆಕ್ಟ್ರಿಕ್ ಏರ್ ಕಾಪ್ಟರ್‌ಗಳನ್ನು 2025ರಲ್ಲಿ ಜಪಾನ್‌ನಲ್ಲಿ ನಡೆಯುವ ಒಸಾಕಾ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ಆ ಬಳಿಕ 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ಈ ಸ್ಕೈಡ್ರೈವ್ ಗಳನ್ನು ಭಾರತಕ್ಕೆ ಪರಿಚಯಿಸಲು ಮಾರುತಿ ಸುಜುಕಿ ಉದ್ದೇಶಿಸಿದೆ ಎನ್ನಲಾಗಿದೆ. ದೇಶದಲ್ಲಿ ಏರ್ ಕಾಪ್ಟರ್‌ಗಳ ಗ್ರಾಹಕರನ್ನು ಗುರುತಿಸಲು ಕಂಪನಿಯು ಈಗಾಗಲೇ ಅಧ್ಯಯನವನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಏರ್ ಕಾಪ್ಟರ್‌ಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಬೇಕೆಂದರೆ ಅವು ಕೈಗೆಟುಕುವ ಬೆಲೆಯಲ್ಲಿ ಇರಬೇಕು ಎಂಬುದನ್ನು ಕಂಪನಿ ಅರಿತಿದೆ. ಅದಕ್ಕಾಗಿ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಈ ಏರ್ ಕಾಪ್ಟರ್, ಟೇಕ್ಆಫ್ ಆಗುವ ಸಮಯದಲ್ಲಿ 1.4 ಟನ್ ತೂಕವಿರಲಿದೆ ಎನ್ನಲಾಗಿದೆ. ಇದು ಹೆಲಿಕಾಪ್ಟರ್‌ಕ್ಕಿಂತ ಅರ್ಧದಷ್ಟು ಕಡಿಮೆ ತೂಕವಾಗಿರಲಿದೆ. ಏರ್ ಕಾಪ್ಟರ್‌ಗಳನ್ನು ಬಹುಮಹಡಿ ಕಟ್ಟಡದ ಮೇಲ್ಭಾಗ ಲ್ಯಾಂಡಿಂಗ್ ಮಾಡುವ ಸಂಬಂಧವು ಕೆಲಸಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ಇನ್ನು, ದೇಶದಲ್ಲಿ ಈ ಏರ್ ಕಾಪ್ಟರ್‌ಗಳು ಕಾರ್ಯಚರಣೆ ಪ್ರಾರಂಭಿಸಿದರೆ ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗುವುದು ಖಚಿತ. ಇವು ಪ್ರಯಾಣಿಕರನ್ನು ವೇಗವಾಗಿ ನಿರ್ದಿಷ್ಟ ಗಮ್ಯ ಸ್ಥಾನವನ್ನು ತಲುಪಿಸುವುದರಿಂದ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ. ಕಾರ್ಮಿಕರು ಬೇಗ ಉದೋಗ್ಯದ ಸ್ಥಳಗಳಿಗೆ ತೆರಳುವುದರಿಂದ ಉತ್ಪಾದನೆ ಹೆಚ್ಚಾಗುತ್ತದೆ. ಜೊತೆಗೆ ಆಂಬ್ಯುಲೆನ್ ರೀತಿಯಲ್ಲಿ ಬಳಕೆ ಮಾಡಿದರೆ ಎಷ್ಟು ರೋಗಿಗಳ ಜೀವವು ಉಳಿಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications