Maruti Suzuki: ದಸರಾ, ದೀಪಾವಳಿಗೆ ದೊಡ್ಡ ಸಿಹಿಸುದ್ದಿ.. 2 ಲಕ್ಷವರೆಗೆ ಡಿಸ್ಕೌಂಟ್, ಅತಿಕಡಿಮೆ ಬೆಲೆಗೆ ಹೊಸ ಕಾರು!
ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಹೊಚ್ಚ ಹೊಸ ಕಾರು ಖರೀದಿಸಬೇಕು ಎಂದುಕೊಂಡಿರುವ ಗ್ರಾಹಕರಿಗೆ ದೊಡ್ಡ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಈ ಅಕ್ಟೋಬರ್‌ನಲ್ಲಿ ಮಾರುತಿ ಸುಜುಕಿ ನೆಕ್ಸಾ (Maruti Suzuki Nexa) ಡೀಲರ್‌ಶಿಪ್ ಮೂಲಕ ಮಾರಾಟ ಮಾಡಲಾಗುವ ಜನಪ್ರಿಯ ಇಗ್ನಿಸ್, ಬಲೆನೊ, ಫ್ರಾಂಕ್ಸ್, ಸಿಯಾಜ್, ಗ್ರ್ಯಾಂಡ್ ವಿಟಾರಾ, ಎಕ್ಸ್ಎಲ್6, ಜಿಮ್ನಿ ಹಾಗೂ ಇನ್ವಿಕ್ಟೋ ಕಾರುಗಳು ಭಾರಿ ರಿಯಾಯಿತಿ ಪ್ರಯೋಜನಗಳನ್ನು ಪಡೆದಿವೆ. ಆ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis): ಇದೊಂದು ಪ್ರಖ್ಯಾತ ಹ್ಯಾಚ್‌ಬ್ಯಾಕ್ ಆಗಿದೆ. ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ ರೂ.46,000 ದಿಂದ ರೂ.56,100ವರೆಗೆ ರಿಯಾಯಿತಿ ಪ್ರಯೋಜವನ್ನು ಹೊಂದಿದೆ. ಈ ಕಾರು, ರೂ.5.49 ಲಕ್ಷದಿಂದ ರೂ.8.06 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 20.89 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಬಲೆನೊ (Maruti Suzuki Baleno): ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕೂಡ ರೂ.40,000 ದಿಂದ ರೂ.55,100ವರೆಗೆ ರಿಯಾಯಿತಿಯನ್ನು ಒಳಗೊಂಡಿದೆ. ನೂತನ ಕಾರು, ರೂ.6.66 ಲಕ್ಷದಿಂದ ರೂ.9.83 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಪೆಟ್ರೋಲ್/ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. 22.35 ರಿಂದ 30.61 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಮಾರುತಿ ಸುಜುಕಿ ಸಿಯಾಜ್ (Maruti Suzuki Ciaz): ಇದು ಜನಪ್ರಿಯ ಸೆಡಾನ್ ಆಗಿದೆ. ಈ ಕಾರಿನ ಎಲ್ಲ ರೂಪಾಂತರಗಳು ರೂ.46,000ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ಹೊಸ ಸಿಯಾಜ್ ರೂ.9.40 ಲಕ್ಷದಿಂದ ರೂ.12.29 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುವ ಈ ಕಾರು, 20.04 ರಿಂದ 20.65 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara): ಇದೊಂದು ಪ್ರಮುಖ ಎಸ್‌ಯುವಿಯಾಗಿದೆ. ರೂ. 56,000 ದಿಂದ ರೂ. 1,06,100ವರೆಗೆ ರಿಯಾಯಿತಿಯನ್ನು ಪಡೆದಿದೆ. ಈ ಕಾರು, ರೂ.10.99 ಲಕ್ಷದಿಂದ ರೂ.20.09 ಲಕ್ಷ (ಎಕ್ಸ್ ಶೋರೂಂ) ದರವನ್ನು ಒಳಗೊಂಡಿದೆ. ಹೈಬ್ರಿಡ್ (ಎಲೆಕ್ಟ್ರಿಕ್ + ಪೆಟ್ರೋಲ್) ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ.
ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki FRONX): ಇದು ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಎಸ್‌ಯುವಿಯಾಗಿದೆ. ಈ ಕಾರಿನ ವಿವಿಧ ರೂಪಾಂತರಗಳು ರೂ.13,000 ದಿಂದ ರೂ.38,000ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ಈ ಕಾರು, ರೂ.7.51 ದಿಂದ ರೂ.13.04 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಮಾರುತಿ ಸುಜುಕಿ ಎಕ್ಸ್ಎಲ್ (Maruti Suzuki XL6): ಈ ಜನಪ್ರಿಯ ಎಂವಿಪಿ ರೂ.28,000 ದಿಂದ ರೂ.38,000ವರೆಗೆ ರಿಯಾಯಿತಿಯನ್ನು ಒಳಗೊಂಡಿದೆ. ಈ ಕಾರು, ರೂ.11.61 ಲಕ್ಷದಿಂದ ರೂ.14.77 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 1.5-ಲೀಟರ್ ಪೆಟ್ರೋಲ್ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 20.27 ರಿಂದ 26.32 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಪ್ರಮುಖ ಆಫ್-ರೋಡ್ ಎಸ್‌ಯುವಿಯಾಗಿದೆ. ಇದು ರೂಪಾಂತರಗಳಿಗೆ ಅನುಗುಣವಾಗಿ ರೂ.1,78,000 ದಿಂದ ರೂ.2,33,000ವರೆಗೆ ರಿಯಾಯಿತಿ ಪ್ರಯೋಜವನ್ನು ಪಡೆದಿದೆ. ಅದೇ ರೀತಿಯಲ್ಲಿ ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಕಾರು 25,000 ದಿಂದ ರೂ.125,000ವರೆಗೆ ರಿಯಾಯಿತಿಯನ್ನು ಒಳಗೊಂಡಿದೆ.
ನಿಮ್ಮ ಗಮನಕ್ಕೆ.. ನಾವಿಲ್ಲಿ ಬೆಂಗಳೂರಿನ ಡಿಸ್ಕೌಂಟ್ ಆಫರ್ ಬಗ್ಗೆ ಮಾತ್ರ ವಿವರಿಸಿದ್ದೇವೆ. ಈ ರಿಯಾಯಿತಿ ಪ್ರಯೋಜನಗಳು ಅಕ್ಟೋಬರ್ 31ರವರೆಗೆ ಮಾತ್ರ ಮಾನ್ಯವಾಗಿರಲಿವೆ. ರೂಪಾಂತರಗಳನ್ನು ಅವಲಂಭಿಸಿ ನಗರದಿಂದ ನಗರಕ್ಕೆ ಆಫರ್‌ಗಳು ಬೇರೆಯಾಗಿರಬಹುದು. ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








